ಮದುವೆಗೆ ಖರ್ಚು ಮಾಡಿದ ಹಣ ವಾಪಸ್ ಕೊಡುವಂತೆ ನಯನತಾರಾಗೆ ನೆಟ್‌ ಫ್ಲಿಕ್ಸ್ ಹೇಳಿತೇ? - Mahanayaka
2:53 PM Wednesday 11 - December 2024

ಮದುವೆಗೆ ಖರ್ಚು ಮಾಡಿದ ಹಣ ವಾಪಸ್ ಕೊಡುವಂತೆ ನಯನತಾರಾಗೆ ನೆಟ್‌ ಫ್ಲಿಕ್ಸ್ ಹೇಳಿತೇ?

nayanthara vignesh marriage
22/07/2022

ಚೆನ್ನೈ: ತಾರಾ ಜೋಡಿ ನಯನತಾರಾ ಮತ್ತು ವಿಘ್ನೇಶ್  ಶಿವನ್ ಅವರ ಮದುವೆಯ ಪ್ರಸಾರದಿಂದ ಹಿಂದೆ ಸರಿದಿದೆ ಎಂಬ ವರದಿಗಳನ್ನು ನೆಟ್‌ ಫ್ಲಿಕ್ಸ್ ನಿರಾಕರಿಸಿದೆ.  ಮದುವೆಯ ವೀಡಿಯೋವನ್ನು  ಶೀಘ್ರದಲ್ಲೇ ಸ್ಟ್ರೀಮ್ ಮಾಡಲಾಗುವುದು ಎಂದು ಪ್ರಮುಖ OTT ಪ್ಲಾಟ್‌ ಫಾರ್ಮ್ ಘೋಷಿಸಿದೆ.

ನೆಟ್‌ಫ್ಲಿಕ್ಸ್ ಸ್ಟ್ರೀಮಿಂಗ್‌ ನಿಂದ ಹಿಂದೆ ಸರಿದಿದೆ ಮತ್ತು ನಯನತಾರಾಗೆ ನೋಟಿಸ್ ಕಳುಹಿಸಿದೆ ಎಂಬ ವರದಿಯು ನಿಜವಲ್ಲ ಎಂದು ನೆಟ್‌ ಫ್ಲಿಕ್ಸ್ ಇಂಡಿಯಾದ ಮುಖ್ಯಸ್ಥೆ ತಾನ್ಯಾ ಬಾಮಿ ಹೇಳಿದ್ದಾರೆ.

“ನಯನತಾರಾ ಸೂಪರ್ ಸ್ಟಾರ್, ಸುಮಾರು ಇಪ್ಪತ್ತು ವರ್ಷಗಳಿಂದ ಚಲನಚಿತ್ರಗಳಲ್ಲಿದ್ದಾರೆ.  ನಿರ್ದೇಶಕ ಗೌತಮ್ ಮೆನನ್ ಜೊತೆಗೆ ನಮ್ಮ ಸೃಜನಶೀಲ ತಂಡವು ನಯನತಾರಾ ಅವರ ಅದ್ಭುತ ಪ್ರಯಾಣವನ್ನು ಶೀಘ್ರದಲ್ಲೇ ಪ್ರೇಕ್ಷಕರ ಮುಂದೆ ತರಲು ಎದುರು ನೋಡುತ್ತಿದೆ.  ಇದು ಕಾಲ್ಪನಿಕ ಕಥೆಯಂತೆ ಸುಂದರವಾಗಿರುತ್ತದೆ ”ಎಂದು ತಾನ್ಯಾ ಬಾಮಿ ವಿವರಿಸಿದ್ದಾರೆ.

ಮದುವೆಯ ಪ್ರಸಾರದ  ಹಕ್ಕನ್ನು ನೆಟ್‌ಫ್ಲಿಕ್ಸ್‌ ಗೆ 25 ಕೋಟಿ ರೂ.ಗೆ ನೀಡಲಾಗಿತ್ತು. ಮುಂಬೈನ ಶಾದಿ ಸ್ಕ್ವಾಡ್ ಈವೆಂಟ್ ಮ್ಯಾನೇಜ್‌ ಮೆಂಟ್ ಗ್ರೂಪ್‌ ನಿಂದ ಮದುವೆ ಸ್ಥಳ ಮತ್ತು ಇತರ ಸೌಲಭ್ಯಗಳನ್ನು ಏರ್ಪಡಿಸಲಾಗಿತ್ತು.  ನೆಟ್‌ ಫ್ಲಿಕ್ಸ್ ,ಊಟ ಸೇರಿದಂತೆ ಮದುವೆಯ ಎಲ್ಲಾ ವೆಚ್ಚವನ್ನು ಭರಿಸಿದೆ. ವಿಘ್ನೇಶ್ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಮದುವೆಯ ಚಿತ್ರಗಳನ್ನು ಹಂಚಿಕೊಂಡಿದ್ದರಿಂದ ಹಲವು ಆರೋಪಗಳು ವರದಿಯಾಗಿತ್ತು.

ವಿಕ್ಕಿ-ನ್ಯಾನ್ಸ್ ಜೂನ್ 9 ರಂದು ಮಹಾಬಲಿಪುರಂನ ರೆಸಾರ್ಟ್‌ನಲ್ಲಿ ವಿವಾಹವಾದರು.  ರಜನಿಕಾಂತ್, ಶಾರುಖ್ ಖಾನ್, ಎಆರ್ ರೆಹಮಾನ್, ಸೂರ್ಯ, ಜ್ಯೋತಿಕಾ, ಕಾರ್ತಿ, ಶಿವಕಾರ್ತಿಕೇಯನ್ ಮುಂತಾದವರು ಮದುವೆಯಲ್ಲಿ ಪಾಲ್ಗೊಂಡಿದ್ದರು.  ಮದುವೆಯ ಪ್ರಮುಖ ಕ್ಷಣಗಳನ್ನು ಹೈಲೈಟ್ ಮಾಡಿ ನಿರ್ದೇಶಕ ಗೌತಮ್ ಮೆನನ್ ಮಾಡಿರುವ ಸಾಕ್ಷ್ಯಚಿತ್ರವನ್ನು (Documentary)ನೆಟ್‌ಫ್ಲಿಕ್ಸ್ ಬಿಡುಗಡೆ ಮಾಡಲಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IrdQk252EnnGsLx9CS8tli

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ