ನೆಟ್ಟಾರ್ ಕಡೆಗೆ ದೌಡಾಯಿಸಿದ ಸಚಿವ ವಿ.ಸುನೀಲ್ ಕುಮಾರ್
ಬೆಂಗಳೂರು: ಬಿಜೆಪಿ ಯುವ ನಾಯಕ ಪ್ರವೀಣ್ ನೆಟ್ಟಾರ್ ಬರ್ಬರ ಹತ್ಯೆಯಾಗಿದ್ದರೂ ಬಿಜೆಪಿಯ ಯಾವ ಪ್ರಮುಖ ನಾಯಕರು ಆಗಮಿಸಿಲ್ಲ ಎನ್ನುವ ಆಕ್ರೋಶ ಸಾರ್ವಜನಿಕರು ಹಾಗೂ ಕಾರ್ಯಕರ್ತರಲ್ಲಿ ಮನೆ ಮಾಡಿದ್ದು, ಈ ನಡುವೆ ನಾನಾ ಅನುಮಾನಗಳಿಗೂ ಕಾರಣವಾಗಿದೆ. ಈ ನಡುವೆ ಸಿಎಂ ಬಸವರಾಜ್ ಬೊಮ್ಮಾಯಿ ಸೂಚನೆಯಂತೆ ಸಚಿವ ವಿ.ಸುನೀಲ್ ಕುಮಾರ್ ನೆಟ್ಟಾರ್ ಗೆ ದೌಡಾಯಿಸಿದ್ದಾರೆನ್ನಲಾಗಿದೆ.
ಸಚಿವ ವಿ. ಸುನೀಲ್ ಕುಮಾರ್ ಅವರ ಇಂದಿನ ಎಲ್ಲ ಕಾರ್ಯಕ್ರಮಗಳು ಕೂಡ ರದ್ದುಗೊಂಡಿದ್ದು, ಮಂಗಳೂರಿನಿಂದ ನೇರವಾಗಿ ಅವರು ನೆಟ್ಟಾರ್ ಕಡೆಗೆ ಪ್ರಯಾಣ ಬೆಳೆಸಲಿದ್ದಾರೆ ಎಂದು ತಿಳಿದು ಬಂದಿದೆ.
ವಿ.ಸುನೀಲ್ ಅವರ ಜೊತೆಗೆ ಸಚಿವ ಅಂಗಾರ, ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲ್ ಅವರು ಕೂಡ ಅಂತ್ಯಸಂಸ್ಕಾರದಲ್ಲಿ ಭಾಗಿಯಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka