ಮಂಗಳೂರಿನಲ್ಲಿ ನೂತನ ನ್ಯಾನೊ ಹೇರ್ ಇಂಪ್ಲಾಂಟ್ ಚಿಕಿತ್ಸಾ ಕೇಂದ್ರ ಶುಭಾರಂಭ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲೆ ಮೊದಲ ಬಾರಿಗೆ ಅತ್ಯಾಧುನಿಕ ತಂತ್ರಜ್ಞಾನಗಳ ಮೂಲಕ ಡೈರೆಕ್ಟರ್ ಹೇರ್ ಇಂಪ್ಲಾಂಟ್ ವಿಧಾನದ ನ್ಯಾನೊ ಹೇರ್ ಇಂಪ್ಲಾಂಟ್ ಚಿಕಿತ್ಸಾ ಕೇಂದ್ರ ಮಂಗಳೂರಿನ ಪಂಪ್ವೆಲ್ ಇಂಡಿಯಾನ ಆಸ್ಪತ್ರೆ ಮುಂಭಾಗದ ಗ್ರೀಕ್ ಗ್ಯಾಲಕ್ಸಿ ಕಟ್ಟಡದ ಎರಡನೇ ಮಹಡಿಯಲ್ಲಿ ಶುಭಾರಂಭಗೊಂಡಿದೆ.
ನೂತನ ನ್ಯಾನೊ ಹೇರ್ ಇಂಪ್ಲಾಂಟ್ ಚಿಕಿತ್ಸಾ ಕೇಂದ್ರಕ್ಕೆ ದೈಜಿವರ್ಲ್ಡ್ ಸಮೂಹ ಸಂಸ್ಥೆಗಳ ಮುಖ್ಯಸ್ಥ ವಾಲ್ಟರ್ ನಂದಳಿಕೆ ಭೇಟಿ ನೀಡಿದ್ರು. ಈ ವೇಳೆ ಮಾತನಾಡಿದ ಅವರು, ಮಂಗಳೂರಿನಲ್ಲಿ ಶುಭಾರಂಭಗೊಂಡ ನ್ಯಾನೊ ಹೇರ್ ಇಂಪ್ಲಾಂಟ್ ಚಿಕಿತ್ಸಾ ಕೇಂದ್ರ ಅತ್ಯಾಧುನಿಕ ತಂತ್ರಜ್ಞಾನಗಳನ್ನೊಳಗೊಂಡಿದ್ದು, ಜಿಲ್ಲೆಯಲ್ಲಿ ಇದ್ರ ಕೇಂದ್ರ ಶುಭಾರಂಭಗೊಂಡಿದ್ದು, ಈ ಭಾಗದ ಜನ್ರಿಗೆ ಸಂತಸದ ವಿಚಾರ. ಈ ಹಿಂದೆ ಬೊಲು ತಲೆ ಸಮಸ್ಯೆ ನಿವಾರಣೆ ಚಿಕಿತ್ಸೆಗಾಗಿ ವಿದೇಶಗಳಿಗೆ ಹೋಗಿ ಚಿಕಿತ್ಸೆ ಪಡೆದು ಬರುತ್ತಿದ್ರು. ಆದ್ರೆ ಇದೀಗದ ನಗರದಲ್ಲೇ ಇದ್ರ ಚಿಕಿತ್ಸಾ ಕೇಂದ್ರವನ್ನು ಡಾ.ಸೂರಜ್ ಮತ್ತು ಡಾ. ಆ್ಯನಿ ತೆರೆಯುವ ಮೂಲಕ ಇಲ್ಲಿನ ಜನ್ರ ಸೇವೆಗೆ ಮುಂದಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಇವರ ಚಿಕಿತ್ಸಾ ಕೇಂದ್ರ ನಗರದಲ್ಲಿ ಮಾತ್ರವಲ್ಲದೆ, ಮುಂದಿನ ದಿನಗಳಲ್ಲಿ ದೇಶ ವಿದೇಶಗಳಲ್ಲಿ ತೆರೆಯುವಂತಾಗಲಿ ಎಂದು ಶುಭ ಹಾರೈಸಿದರು.
ಬಳಿಕ ನ್ಯಾನೊ ಹೇರ್ ಇಂಪ್ಲಾಂಟ್ ಚಿಕಿತ್ಸಾ ಕೇಂದ್ರದ ಮುಖ್ಯಸ್ಥ, ಕನ್ಸಲ್ಟೆಂಟ್ ಡಾಕ್ಟರ್ ಡಾ. ಸೂರಜ್ ಮಾತನಾಡಿ, ಕಳೆದ ಏಳು ವರ್ಷಗಳಿಂದ ಈ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದು, ಮಂಗಳೂರಿನಲ್ಲಿ ಒಂದುವರೆ ವರ್ಷಗಳಿಂದ ಅತ್ಯಾಧುನಿಕ ತಂತ್ರಜ್ಞಾನಗಳ ಮೂಲಕ ಹೇರ್ ಇಂಪ್ಲಾಂಟ್ ಚಿಕಿತ್ಸೆ ನೀಡ್ತಾ ಬಂದಿದ್ದೇವೆ. ಚಿಕಿತ್ಸಾ ಕೇಂದ್ರದಲ್ಲಿ ಹತ್ತಕ್ಕೂ ಅಧಿಕ ನುರಿತ ವೈದ್ಯಕೀಯ ಮತ್ತು ವೈಧ್ಯಕೀಯೇತರ ಸಿಬ್ಬಂದಿಯಿದ್ದು, ಬೆಂಗಳೂರು, ಕೇರಳ, ಮುಂಬೈ ನಿಂದ ನುರಿತ ಹೇರ್ ಟ್ರಾನ್ಪರೆಂಟ್ ಸರ್ಜನ್ ಗಳಿಂದ ಚಿಕಿತ್ಸೆ ಒದಗಿಸಲಾಗುತ್ತಿದೆ. ಕೇವಲ ತಲೆ ಕೂದಲು ಮಾತ್ರವಲ್ಲದೆ ದಾಡಿ ಇಂಪ್ಲಾಂಟ್ ಚಿಕಿತ್ಸೆಯನ್ನು ನೀಡಲಾಗುತ್ತಿದ್ದು, ವಿದೇಶಿರಿಗೆ ಆನ್ ಲೈನ್ ಮೂಲಕ ಕನ್ಸಲ್ಟೆಂಟ್ ಅವಕಾಶ ಒದಗಿಸಲಾಗಿದೆ ಎಂದವರು ಹೇಳಿದರು.