ವಿಚಾರಣೆ ವೇಳೆ ನ್ಯಾಯಾಲಯದ ಕೊಠಡಿಗೆ ನೂರಾರು ಜಿರಳೆ ಬಿಟ್ಟ ಮಹಿಳೆ
ಅಮೆರಿಕಾ: ಮಹಿಳೆಯೊಬ್ಬಳು ನ್ಯಾಯಾಲಯದ ಕೊಠಡಿಗೆ ಜಿರಲೆಗಳನ್ನು ತೆರದು ಬಿಟ್ಟು ನ್ಯಾಯಾಲಯದ ಕಲಾಪಕ್ಕೆ ಅಡ್ಡಿಯುಂಟು ಮಾಡಿದ ಘಟನೆ ಅಮೆರಿಕದ ಅಲ್ಬನಿ ಸಿಟಿ ಕೋರ್ಟ್ ರೂಂನಲ್ಲಿ ನಡೆದಿದ್ದು, ಮಹಿಳೆ ಮಾಡಿದ ಮಹಾ ಕಾರ್ಯದಿಂದ ನ್ಯಾಯಾಲಯ ಒಂದು ದಿನದ ಮಟ್ಟಿಗೆ ಮುಂದೂಡಲ್ಪಟ್ಟಿತು.
ನ್ಯಾಯಾಲಯದಲ್ಲಿ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳ ವಿಚಾರಣೆ ನಡೆಯುತ್ತಿತ್ತು. ಈ ವೇಳೆ ಆರೋಪಿಗಳ ನಡುವೆ ತೀವ್ರ ವಾಗ್ವಾದ ನಡೆದಿದ್ದು, ಈ ಸಮಯದಲ್ಲಿ ಓರ್ವ ವಿಡಿಯೋ ಮಾಡಲು ಯತ್ನಿಸಿದ್ದು, ಈ ವೇಳೆ ಆತನನ್ನು ತಡೆದಿದ್ದಾರೆ. ಈ ಸಮಯದಲ್ಲಿ ಮಹಿಳೆಯೊಬ್ಬರು ನ್ಯಾಯಾಲಯದ ಕೊಠಡಿಗೆ ಪ್ಲಾಸ್ಟಿಕ್ ಕಂಟೈನರ್ ಗಳಿಂದ ನೂರಾರು ಜಿರಲೆಗಳನ್ನು ಬಿಟ್ಟಿದ್ದಾಳೆ ಎಂದು ಆರೋಪಿಸಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ನ್ಯಾಯಾಲಯದೊಳಗಿದ್ದ 34 ವರ್ಷ ವಯಸ್ಸಿನ ಮಹಿಳೆಯನ್ನು ಬಂಧಿಸಿ ವಿಚಾರಣೆ ನಡೆಸಲಾಗಿದ್ದು, ಬಳಿಕ ಬಿಡುಗಡೆ ಮಾಡಲಾಗಿದೆ. ಇದೀಗ ಘಟನೆಯ ತನಿಖೆ ನಡೆಸುತ್ತಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಪುತ್ರಿಯ ಬೀದಿ ರಂಪಾಟಕ್ಕೆ ಅರವಿಂದ್ ಲಿಂಬಾವಳಿ ಹೇಳಿದ್ದೇನು?
ನೂಪುರ್ ಶರ್ಮಾ ಪ್ರತಿಕೃತಿಗೆ ನಡು ರಸ್ತೆಯಲ್ಲಿ ಗಲ್ಲು! | ಹಿಂದೂ ಸಂಘಟನೆಗಳಿಂದ ಆಕ್ರೋಶ
ರಾಜ್ಯಸಭೆ ಕದನ ಶುರು: ವಿಧಾನಸೌಧಕ್ಕೆ ಆಗಮಿಸಿ ಮತಚಲಾಯಿಸುತ್ತಿರುವ ಶಾಸಕರು
ಕಾರು ತಡೆದಿದ್ದಕ್ಕೆ ಪೊಲೀಸರ ಮೇಲೆ ಕಿರುಚಾಡಿದ ಅರವಿಂದ ಲಿಂಬಾವಳಿ ಪುತ್ರಿ! | 10 ಸಾವಿರ ದಂಡ ವಿಧಿಸಿದ ಪೊಲೀಸರು!