ಯುಎಇಯಲ್ಲಿ ಹೊಸ ಝಕಾತ್ ನಿಯಮ ಜಾರಿ

ಯುಎ ಇ ಯಲ್ಲಿ ಹೊಸ ಝಕಾತ್ ನಿಯಮ ಜಾರಿಗೆ ಬರುತ್ತಿದೆ. ಝಕಾತ್ ಫಂಡ್‌ಗಳನ್ನು ಸಾರ್ವಜನಿಕ ನಿಧಿಯಂತೆ ಪರಿಗಣಿಸುವ ನಿಯಮ ಇದಾಗಿದ್ದು, ಇದರಂತೆ ಝಕಾತ್ ವಿತರಣೆ ಮತ್ತು ಸಂಗ್ರಹವನ್ನು ಕಾನೂನು ವಿರುದ್ಧ ಗೊಳಿಸುವ ಉದ್ದೇಶವನ್ನು ಈ ನಿಯಮ ಹೊಂದಿದೆ. ಈ ಹೊಸ ನಿಯಮದಂತೆ ಝಕಾತನ್ನು ವಿದೇಶಕ್ಕೆ ಕಳುಹಿಸುವುದಕ್ಕೆ ಲೈಸನ್ಸ್ ಅಗತ್ಯವಾಗಿದೆ. ಈ ನಿಯಮವನ್ನು ಉಲ್ಲಂಘಿಸುವವರಿಗೆ 10 ಲಕ್ಷ ದಿರ್ಹಂ ವರೆಗೆ ದಂಡ ವಿಧಿಸುವುದಕ್ಕೆ ಈ ನಿಯಮ ಅವಕಾಶ ಮಾಡಿಕೊಡಲಿದೆ.
ವ್ಯಕ್ತಿಗಳು ಮತ್ತು ಸಂಸ್ಥೆಗಳು ಸಂಗ್ರಹಿಸುವ ಝಕಾತ್ ಅರ್ಹರಿಗೆ ಮಾತ್ರ ತಲುಪುತ್ತದೆ ಎಂಬುದನ್ನು ದೃಢೀಕರಿಸಿಕೊಳ್ಳುವ ಉದ್ದೇಶದಿಂದ ಯುಎಇ ಪಾರ್ಲಿಮೆಂಟ್ ಈ ನಿಯಮವನ್ನು ಅಂಗೀಕರಿಸಿದೆ. ಇನ್ನು ಈ ನಿಯಮದಂತೆ ಯುಎಇಯಿಂದ ಹೊರದೇಶಗಳಿಗೆ ಝಕಾತ್ ಹಣವನ್ನು ಕಳುಹಿಸುವವರಿಗೆ ತೊಂದರೆ ಎದುರಾಗಲಿದೆ. ಅದಕ್ಕಾಗಿ ಅವರು ವಿಶೇಷ ಲೈಸೆನ್ಸನ್ನು ಪಡೆದುಕೊಳ್ಳಬೇಕಾಗುತ್ತದೆ. ದಾಖಲೆಗಳು ಇಲ್ಲದೆ ವಿದೇಶಕ್ಕೆ ಝಕಾತ್ ಹಣವನ್ನು ಕಳುಹಿಸುವುದಕ್ಕೆ ಅವಕಾಶ ಇರುವುದಿಲ್ಲ.
ಪ್ರತಿವರ್ಷವೂ ಒಬ್ಬನೇ ವ್ಯಕ್ತಿ ಅಥವಾ ಒಂದೇ ಸಂಸ್ಥೆಗೆ ಝಕಾತ್ ಕಳುಹಿಸುವುದಕ್ಕೆ ಇನ್ನು ಮುಂದೆ ಸಾಧ್ಯವಿಲ್ಲ. ಅನರ್ಹರು ಝಕಾತ್ ಹಣವನ್ನು ಪಡೆಯುತ್ತಿದ್ದಾರೆ ಅನ್ನುವ ಆರೋಪದ ಹಿನ್ನೆಲೆಯಲ್ಲಿ ಈ ನಿಯಮ ಮಾಡಲಾಗಿದೆ ಎಂದು ಹೇಳಲಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj