ಮಕ್ಕಳ ಕಳ್ಳಸಾಗಣೆ ಜಾಲವನ್ನು ಭೇದಿಸಿದ ಪೊಲೀಸರು: ನವಜಾತ ಶಿಶು ರಕ್ಷಣೆ; ಇಬ್ಬರ ಬಂಧನ
ಪಶ್ಚಿಮ ಬಂಗಾಳದ ಅಪರಾಧ ತನಿಖಾ ಇಲಾಖೆ (ಸಿಐಡಿ) ಅಂತರರಾಜ್ಯ ಮಕ್ಕಳ ಕಳ್ಳಸಾಗಣೆ ದಂಧೆಯನ್ನು ಯಶಸ್ವಿಯಾಗಿ ಭೇದಿಸಿದೆ. ಹೆಣ್ಣು ಮಗುವನ್ನು ರಕ್ಷಿಸಿದ್ದು ಜೊತೆಗೆ ಪಶ್ಚಿಮ ಬಂಗಾಳದ ಹೌರಾ ಜಿಲ್ಲೆಯ ರೈಲ್ವೆ ನಿಲ್ದಾಣದ ಹೊರಗೆ ಭಾನುವಾರ ಇಬ್ಬರು ವ್ಯಕ್ತಿಗಳನ್ನು ಬಂಧಿಸಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಗುಪ್ತಚರ ಮಾಹಿತಿಯ ಮೇರೆಗೆ, ಅಪರಾಧ ತನಿಖಾ ಇಲಾಖೆಯ (ಸಿಐಡಿ) ಮಾನವ ಕಳ್ಳಸಾಗಣೆ ವಿರೋಧಿ ಘಟಕ (ಎಎಚ್ಟಿಯು) ಶಾಲಿಮಾರ್ ರೈಲ್ವೆ ನಿಲ್ದಾಣದ ಹೊರಗಿನಿಂದ ನವಜಾತ ಶಿಶುವಿನೊಂದಿಗೆ ಇಬ್ಬರು ಆರೋಪಿಗಳನ್ನು ಬಂಧಿಸಿದೆ.
ಸಿಐಡಿ ಮೂಲಗಳ ಪ್ರಕಾರ, ಶಾಲಿಮಾರ್ ನಿಲ್ದಾಣದಲ್ಲಿ ರೈಲಿನಲ್ಲಿ ಆಗಮಿಸಿದ ಶಂಕಿತರನ್ನು ಅಧಿಕಾರಿಗಳು ಗಮನಿಸಿ ಹಿಂಬಾಲಿಸಿದ್ದಾರೆ. “ಶಂಕಿತರು ನಿಲ್ದಾಣದಿಂದ ನಿರ್ಗಮಿಸಿದ ಕೂಡಲೇ, ಅವರನ್ನು ನಮ್ಮ ಅಧಿಕಾರಿಗಳು ಸೂಕ್ಷ್ಮವಾಗಿ ಪತ್ತೆಹಚ್ಚಿದರು. ಆವರಣದಿಂದ ಹೊರಬಂದ ನಂತರ, ಅವರನ್ನು ಸ್ಥಳದಲ್ಲೇ ಬಂಧಿಸಿ ಪ್ರಶ್ನಿಸಲಾಯಿತು” ಎಂದು ಸಿಐಡಿ ಅಧಿಕಾರಿಯೊಬ್ಬರು ಇಂಡಿಯಾ ಟುಡೇ ಟಿವಿಗೆ ತಿಳಿಸಿದ್ದಾರೆ.
ಪೊಲೀಸ್ ಅಧಿಕಾರಿಗಳು ಪ್ರಶ್ನಿಸಿದಾಗ, ಮಗುವಿನ ಗುರುತನ್ನು ನೀಡಲು ಆರೋಪಿಗಳಿಗೆ ಸಾಧ್ಯವಾಗಲಿಲ್ಲ. ನಂತರ ಮಗುವನ್ನು ಹೌರಾ ಸ್ಟೇಟ್ ಜನರಲ್ ಆಸ್ಪತ್ರೆಗೆ ದಾಖಲಿಸಲಾಯಿತು.
ಆರೋಪಿಗಳನ್ನು ಮಾಣಿಕ್ ಹಲ್ದಾರ್ (38) ಮತ್ತು ಮುಕುಲ್ ಸರ್ಕಾರ್ (32) ಎಂದು ಗುರುತಿಸಲಾಗಿದೆ. ರಾಜ್ಯ ಮಕ್ಕಳ ಕಲ್ಯಾಣ ಆಯುಕ್ತರ ಕಚೇರಿಯ ಪ್ರತಿನಿಧಿಗಳು ಮತ್ತು ಎನ್‌ಜಿಒ ಬಚ್ಪನ್ ಬಚಾವೋ ಆಂದೋಲನದ ಸದಸ್ಯರು ದಾಳಿಯ ಸಮಯದಲ್ಲಿ ತಂಡದೊಂದಿಗೆ ಇದ್ದರು ಎಂದು ಸಿಐಡಿ ಅಧಿಕಾರಿಗಳು ವರದಿ ಮಾಡಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj