ತನ್ನ ವಿರುದ್ಧದ ವರದಿ ಪ್ರಕಟಿಸದಂತೆ ನ್ಯೂಸ್ ಫಸ್ಟ್ ಗೆ ತಡೆಯಾಜ್ಞೆ ತಂದ ಸಚಿವೆ ಜೊಲ್ಲೆ
ಬೆಂಗಳೂರು: ಬಡವರಿಗೆ ನೀಡಲಾಗುವ ಮೊಟ್ಟೆಯಲ್ಲೂ ಸಚಿವೆ ಶಶಿಕಲಾ ಜೊಲ್ಲೆ ಭ್ರಷ್ಟಾಚಾರ ನಡೆಸಿದ್ದಾರೆ ಎಂಬ ಕನ್ನಡ ಸುದ್ದಿವಾಹಿನಿ ‘ನ್ಯೂಸ್ ಫಸ್ಟ್’ ಸ್ಟಿಂಗ್ ಆಪರೇಷನ್ ನ ವರದಿಯನ್ನು ಪ್ರಸಾರ ಮಾಡದಂತೆ ಜೊಲ್ಲೆ ಕೋರ್ಟ್ ನಿಂದ ತಡೆಯಾಜ್ಞೆ ತಂದಿದ್ದಾರೆ ಎಂದು ಮಾಧ್ಯಮವ ವರದಿ ಮಾಡಿದೆ.
ಶಶಿಕಲಾ ಜೊಲ್ಲೆ ಅವರು ಮೊಟ್ಟೆ ಖರೀದಿಯಲ್ಲಿ ಭ್ರಷ್ಟಾಚಾರ ನಡೆಸಿರುವ ವಿಚಾರವಾಗಿ ನ್ಯೂಸ್ ಫಸ್ಟ್ ವರದಿ ಮಾಡಿತ್ತು. ಈ ವರದಿ ದೇಶಾದ್ಯಂತ ಸಚಿವೆಯ ವಿರುದ್ಧ ಆಕ್ರೋಶಕ್ಕೆ ಕಾರಣವಾಗಿತ್ತು. ಈ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, “ಮೊಟ್ಟೆ ಕಳ್ಳಿ” ಎಂದು ವ್ಯಾಪಕ ಟ್ರೋಲ್ ಮಾಡಿದ್ದಾರೆ.
ಶಶಿಕಲಾ ಜೊಲ್ಲೆ ಅವರ ಮೇಲೆ ಗಂಭೀರವಾದ ಭ್ರಷ್ಟಾಚಾರದ ಆರೋಪ ಇದ್ದರೂ ಕೂಡ ಬಸವರಾಜ್ ಬೊಮ್ಮಾಯಿ ನೇತೃತ್ವದ ಸಚಿವ ಸಂಪುಟದಲ್ಲಿ ಅವರಿಗೆ ಮತ್ತೆ ಸ್ಥಾನವನ್ನು ನೀಡುವ ಮೂಲಕ ಬಿಜೆಪಿ ಅಚ್ಚರಿ ಮೂಡಿಸಿತ್ತು. ಇದೀಗ ಶಶಿಕಲಾ ಜೊಲ್ಲೆ ಅವರು ವರದಿ ಪ್ರಸರಣ ತಡೆ ಕೋರಿ ಸಿಟಿ ಸಿವಿಲ್ ಕೋರ್ಟ್ ಮೊರೆ ಹೋಗಿದ್ದಾರೆ. ಈ ಅರ್ಜಿಯನ್ನು ವಿಚಾರಣೆ ನಡೆಸಿರುವ ಕೋರ್ಟ್ ಮುಂದಿನ ಆದೇಶದ ವರೆಗೂ ಸಚಿವರಿಗೆ ಸಂಬಂಧಿಸಿದ ವಿಡಿಯೋವನ್ನು ಪ್ರಸಾರ ಮಾಡಬಾರದು ಎಂದು ಸೂಚನೆ ನೀಡಿದ್ದಾರೆ ಎಂದು ಸುದ್ದಿವಾಹಿನಿ ವರದಿ ಮಾಡಿದೆ.
ಸದ್ಯ ಪ್ರಕರಣದ ವರದಿ ಪ್ರಸಾರ ಮಾಡದಂತೆ ಮಧ್ಯಂತರ ತಡೆ ತಂದಿರುವ ಜೊಲ್ಲೆ ಪ್ರಕರಣದ ಅಂತಿಮ ತೀರ್ಪು ಆಗಸ್ಟ್ 25ರಂದು ಹೊರಬೀಳಲಿದೆ. ಆಗಸ್ಟ್ 25ರಂದು ಈ ವರದಿ ಪ್ರಕಟಿಸಬೇಕೋ ಬೇಡವೋ ಎಂದು ಕೋರ್ಟ್ ತೀರ್ಪು ನೀಡಲಿದೆ ಎಂದು ತಿಳಿದು ಬಂದಿದೆ. ಇನ್ನೂ ಈ ಸಂಬಂಧ ಕೋರ್ಟ್ ಗೆ ಸುದ್ದಿವಾಹಿನಿ ಕೂಡ ವಿಡಿಯೋ ಸಹಿತ ಆಕ್ಷೇಪಣೆ ಸಲ್ಲಿಸಿದೆ ಎನ್ನಲಾಗಿದೆ.
ಇನ್ನಷ್ಟು ಸುದ್ದಿಗಳು…
ಸ್ಮಶಾನದ ಅರ್ಚಕ ಸೇರಿದಂತೆ ಮೂವರಿಂದ ದಲಿತ ಬಾಲಕಿಯ ಮೇಲೆ ಅತ್ಯಾಚಾರ, ಹತ್ಯೆ | ದೇಶಾದ್ಯಂತ ಆಕ್ರೋಶ
ಪ್ರೀತಿಗೆ ದ್ರೋಹ ಬಗೆದ ಪತ್ನಿ, ಸ್ನೇಹಕ್ಕೆ ದ್ರೋಹ ಬಗೆದ ಸ್ನೇಹಿತ | ತಂದೆಯ ಹತ್ಯೆಯಿಂದ ಅನಾಥಳಾದ ಮಗಳು!
ಮಹಿಳೆಯ ಸೀರೆಯ ಪಿನ್ ಚುಚ್ಚಿ ಮಾಜಿ ಸಿಎಂ ಯಡಿಯೂರಪ್ಪನವರ ಕೈಗೆ ಗಾಯ!
ಸಿಎಂ ರೇಸ್ ನಲ್ಲಿದ್ದ ಬೆಲ್ಲದ್ ಗೆ ಸಚಿವ ಸ್ಥಾನವೂ ಸಿಗಲಿಲ್ಲ | ಶೆಟ್ಟರ್, ಬಿಎಸ್ ವೈಗೆ ಧಿಕ್ಕಾರ ಹೇಳಿದ ಬೆಂಬಲಿಗರು
ಯೋ ಯೋ ಹನಿ ಸಿಂಗ್ ವಿರುದ್ಧ ಪತ್ನಿಯಿಂದ ದೂರು: ನಟಿಯರೊಂದಿಗೆ ಅಕ್ರಮ ಸಂಬಂಧ, ಮಾದಕ ವ್ಯಸನದ ಆರೋಪ