ಎಸ್ ಡಿಪಿಐ, ಪಿಎಫ್ ಐ ಮೇಲೆ ಎನ್ ಐಎ ದಾಳಿ ಬಿಜೆಪಿಯ ಚುನಾವಣಾ ತಂತ್ರಗಾರಿಕೆ: ಹಿಂದೂ ಮಹಾಸಭಾ ಅನುಮಾನ - Mahanayaka

ಎಸ್ ಡಿಪಿಐ, ಪಿಎಫ್ ಐ ಮೇಲೆ ಎನ್ ಐಎ ದಾಳಿ ಬಿಜೆಪಿಯ ಚುನಾವಣಾ ತಂತ್ರಗಾರಿಕೆ: ಹಿಂದೂ ಮಹಾಸಭಾ ಅನುಮಾನ

hindu mahasabha
25/09/2022

ಮಂಗಳೂರು: ಬಿಜೆಪಿ ವಿರೋಧ ಪಕ್ಷದಲ್ಲಿದ್ದಾಗ ಎಸ್ ಡಿಪಿಐ, ಪಿಎಫ್ ಐ ನಿಷೇಧದ ಬಗ್ಗೆ ಮಾತಾಡಿತ್ತು. ಅಧಿಕಾರಕ್ಕೆ ಬಂದ ಬಳಿಕ ದಾಖಲೆ ಇಲ್ಲ ಎನ್ನುತ್ತಾ ಬಂದಿದೆ ಎಂದು  ಹಿಂದೂ ಮಹಾಸಭಾ ರಾಜ್ಯ ಪ್ರಧಾನ ಕಾರ್ಯದರ್ಶಿ ಧರ್ಮೇಂದ್ರ ಕಿಡಿಕಾರಿದ್ದಾರೆ.


Provided by

ಮಂಗಳೂರಲ್ಲಿ ಮಾತನಾಡಿದ ಅವರು, ರಾಜ್ಯ, ಕೇಂದ್ರದಲ್ಲಿ ಬಿಜೆಪಿ ಸರಕಾರ ಇದ್ದರೂ ಈ ಸಂಘಟನೆಗಳ ನಿಷೇಧ ಆಗಿಲ್ಲ. ಎನ್ ಐಎ ದಾಳಿ ಚುನಾವಣಾ ತಂತ್ರಗಾರಿಕೆಯೇ ಎಂಬ ಅನುಮಾನ ಇದೆ. ರಾಜ್ಯದಲ್ಲಿ ಚುನಾವಣಾ ನಾಟಕ ಆರಂಭವಾಗಿದೆ ಎಂದರು.

2023ರ ಚುನಾವಣೆ ಬಳಿಕನೂ ಎಸ್ ಡಿಪಿಐ, ಪಿಎಫ್ ಐ ‌ಬ್ಯಾನ್ ಆಗಲ್ಲ. ದೇಶದಲ್ಲಿ ನಡೆದ ಎನ್ ಐಎ ದಾಳಿಯಲ್ಲಿ ಸಾರ್ವಜನಿಕ ತೆರಿಗೆ ಹಣ ವ್ಯಯಿಸಿದ್ದಾರೆ. ದಾಳಿಗೆ ಆದ ಖರ್ಚಿನ ಸಂಪೂರ್ಣ ಮೊತ್ತವನ್ನು ಬಿಜೆಪಿ ಪಕ್ಷ ಭರಿಸಬೇಕು. ಎಸ್ ಡಿಪಿಐ ಜೊತೆ ಬಿಜೆಪಿ ಪಕ್ಷ ಹೊಂದಾಣಿಕೆಯಲ್ಲಿದೆ‌ ಎಂದು ಆರೋಪಿಸಿದರು.


Provided by

ಈ ಪ್ರಯುಕ್ತ ಎನ್ ಐಎ ಬಿಜೆಪಿ ಮೇಲು ಆಗಬೇಕು. ಇದ್ರಿಂದ ಸತ್ಯಾಂಶ ಹೊರತರಲು ಸಾಧ್ಯ. ಬಿಜೆಪಿ ಪಕ್ಷದ ಮೇಲೆಯೂ ಎನ್ ಐಎ ತನಿಖೆ ಅಗತ್ಯ ಇದೆ ಎಂದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ