ಕಾರ್ಮಿಕರು ನಿದ್ದೆಯಲ್ಲಿದ್ದ ವೇಳೆ ದಾಳಿ ಮಾಡಿದ ಕಾಡಾನೆ: ಕಾರ್ಮಿಕನ ತಲೆಗೆ ತುಳಿದ ಆನೆ!

26/02/2021

ಸಿದ್ದಾಪುರ:  ಕಾಡಾನೆಯ ದಾಳಿಗೆ ಕಾರ್ಮಿಕರೋರ್ವರು ದಾರುಣವಾಗಿ ಸಾವನ್ನಪ್ಪಿದ ಘಟನೆ ಸಿದ್ದಾಪುರ ಕಾಫಿ ತೋಟದಲ್ಲಿ ನಡೆದಿದ್ದು,  ಶುಕ್ರವಾರ ಬೆಳಗ್ಗೆ ಕಾರ್ಮಿಕ ನಿದ್ರಿಸುತ್ತಿದ್ದ ವೇಳೆ ಆನೆ ದಾಳಿ ನಡೆಸಿದ್ದು, ಪರಿಣಾಮವಾಗಿ ಕಾರ್ಮಿಕ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.

22 ವರ್ಷ ವಯಸ್ಸಿ ಸಂದೀಪ್  ಸಾವನ್ನಪ್ಪಿದವರಾದ್ದಾರೆ. ಘಟನೆ ವೇಳೆ  ಸಂದೀಪ್ ಜೊತೆ ಕಾವಲುಗಾರ ರಾಜು ಎಂಬವರು ಕೂಡ ಇದ್ದರು.  ಬೆಳಗ್ಗಿನ ಜಾವ ಇವರಿಬ್ಬರು ನಿದ್ರಿಸುತ್ತಿದ್ದ ಸಂದರ್ಭದಲ್ಲಿ ಏಕಾಏಕಿ ಆನೆಯೊಂದು ದಾಳಿ ನಡೆಸಿದೆ.

ಆನೆ ದಾಳಿ ನಡೆಸಿದ ವೇಳೆ ರಾಜು ಆನೆಯಿಂದ ತಪ್ಪಿಸಿಕೊಂಡಿದ್ದಾರೆ. ಸಂದೀಪ್ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಂತೆಯೇ ಆನೆ ಸಂದೀಪ್ ನ ತಲೆಗೆ ತುಳಿದಿದೆ. ಪರಿಣಾಮವಾಗಿ ಸಂದೀಪ್ ನ ತಲೆ ಛಿದ್ರಗೊಂಡು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು, ಸಿದ್ದಾಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.  ಸಿದ್ದಪುರ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಕಾಡಾನೆಗಳ ಹಾವಳಿ ಮಿತಿಮೀರಿದೆ. ಕಾಫಿ ತೋಟಗಳಲ್ಲಿ  ಕಾಡಾನೆಗಳು ಬೀಡು ಬಿಡುತ್ತಿವೆ. ಇದು ಕಾರ್ಮಿಕರ ಜೀವಕ್ಕೆ ಅಪಾಯವನ್ನೊಡ್ಡುತ್ತಿದೆ.  ಕಾಡಾನೆಗಳನ್ನು ಅರಣ್ಯಕ್ಕೆ ಕಳುಹಿಸಲು ಅರಣ್ಯ ಇಲಾಖೆ ಮುಂದಾಗಬೇಕು ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇತ್ತೀಚಿನ ಸುದ್ದಿ

Exit mobile version