ನಿದ್ದೆಯಿಂದ ಎಚ್ಚರವಾದ ವೇಳೆ ಆತ ಅತ್ಯಾಚಾರ ನಡೆಸ್ತಿದ್ದ | ಅತ್ಯಾಚಾರಕ್ಕೂ ಮುನ್ನ ಸಂತ್ರಸ್ತೆಯ ವಿಶ್ವಾಸಗಳಿಸಿದ್ದ ಕ್ಯಾಬ್ ಡ್ರೈವರ್!
ಬೆಂಗಳೂರು: ಕ್ಯಾಬ್ ಚಾಲಕನೋರ್ವ ಹೊಟೇಲ್ ಉದ್ಯೋಗಿ ಯುವತಿಯ ಮೇಲೆ ಅತ್ಯಾಚಾರ ನಡೆಸಿರುವ ಘಟನೆಗೆ ಸಂಬಂಧಿಸಿದಂತೆ ಮತ್ತಷ್ಟು ವಿವರಗಳು ಇದೀಗ ವರದಿಯಾಗಿದ್ದು, ಆರೋಪಿ ಹಾಗೂ ಸಂತಸ್ತೆಗೆ ಮೊದಲೇ ಪರಿಚಯವಿತ್ತು. ಇದೇ ವ್ಯಾನ್ ನಲ್ಲಿ ಸಂತ್ರಸ್ತೆ ಹಲವು ಬಾರಿ ಪ್ರಯಾಣಿಸಿದ್ದರು ಎನ್ನಲಾಗಿದೆ.
ಆರೋಪಿ ದೇವರಾಜುಲು ಹಾಗೂ ಸಂತ್ರಸ್ತೆ ಪರಸ್ಪರ ಮೊಬೈಲ್ ನಂಬರ್ ಗಳನ್ನು ಪಡೆದುಕೊಂಡಿದ್ದರು. ಹೊಟೇಲ್ ನಿಂದ ಕೆಲಸ ಮುಗಿಸಿ ತೆರಳುವಾಗ ಮತ್ತು ಪಾರ್ಟಿಗಳಿಂದ ವಿಳಂಬವಾದಾಗ ಸಂತ್ರಸ್ತ ಮಹಿಳೆ ದೇವರಾಜುಗೆ ಕರೆ ಮಾಡುತ್ತಿದ್ದರು ಎನ್ನುವ ವಿಚಾರಗಳು ತನಿಖೆಯಿಂದ ತಿಳಿದು ಬಂದಿದೆ.
ಕೆಲವು ತಿಂಗಳ ಹಿಂದೆಯೇ ಆಂದ್ರ ಪ್ರದೇಶ ಮೂಲದ ದೇವರಾಜಲು ಸಂತ್ರಸ್ತೆಗೆ ಪರಿಚಯವಾಗಿದ್ದ. ಪ್ರಯಾಣದ ವೇಳೆ ಪರಿಚಯ ಮಾಡಿಕೊಂಡಿದ್ದ ಆರೋಪಿ, ಕ್ಯಾಬ್ ಬೇಕಾದರೆ ಕರೆ ಮಾಡಿ ಎಂದು ತಿಳಿಸಿ ನಂಬರ್ ನೀಡಿದ್ದ. ಒಳ್ಳೆಯವನಂತೆ ನಟಿಸಿದ್ದ. ಇದಾದ ಬಳಿಕ ಹಲವು ಬಾರಿ ದೇವರಾಜುಗೆ ಕರೆ ಮಾಡಿ ಮಹಿಳೆ ಕ್ಯಾಬ್ ಪಡೆದುಕೊಂಡಿದ್ದರು.
ಘಟನೆ ನಡೆದ ದಿನದಂದು ಕೂಡ ಇದೇ ರೀತಿಯಾಗಿ ಕರೆ ಮಾಡಿದ್ದರು. ಆದರೆ, ಸಂತ್ರಸ್ತೆ ನಿದ್ದೆಗೆ ಜಾರಿರುವುದನ್ನು ಕಂಡ ಆರೋಪಿಯು ಅವಕಾಶವನ್ನು ದುರುಪಯೋಗ ಪಡಿಸಿಕೊಂಡಿದ್ದು, ಅತ್ಯಾಚಾರ ನಡೆಸಿದ್ದಾನೆ. ಸಂತ್ರಸ್ತೆಗೆ ಎಚ್ಚರವಾದ ಸಂದರ್ಭದಲ್ಲಿ ಆರೋಪಿ ಅತ್ಯಾಚಾರ ನಡೆಸುತ್ತಿರುವುದು ಆಕೆಯ ಗಮನಕ್ಕೆ ಬಂದಿದೆ.
ಆಂಧ್ರಪ್ರದೇಶ ಮೂಲದ ಆರೋಪಿ ದೇವರಾಜುಲು ಸದ್ಯ 5 ದಿನಗಳ ಪೊಲೀಸ್ ಕಸ್ಟಡಿಯಲ್ಲಿದ್ದಾನೆ. ಎಚ್‌ಎಸ್‌ಆರ್ ಲೇಔಟ್‌ನ ಹೋಟೆಲ್‌ನಿಂದ ಕರೆದುಕೊಂಡು ಬಂದ ದೇವರಾಜುಲು ಮುರುಗೇಶಪಾಳ್ಯದ ಆಕೆಯ ಅಪಾರ್ಟ್‌ಮೆಂಟ್ ಕಾಂಪ್ಲೆಕ್ಸ್‌ನ ಮುಂಭಾಗದಲ್ಲಿಯೇ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಲು ಏಕೆ ನಿರ್ಧರಿಸಿದನೆಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/KPRE32QAEFL3ZvRW2wbYvj
ಇನ್ನಷ್ಟು ಸುದ್ದಿಗಳು…
ಅಸ್ಪೃಶ್ಯತೆ ಜೀವಂತವಿದೆ ಎನ್ನುವುದನ್ನು ಒಪ್ಪಿಕೊಂಡು ಬದಲಾವಣೆಗೆ ಶ್ರಮಿಸಬೇಕು | ಡಿವೈಎಸ್ ಪಿ ರಮೇಶ್
ಎಗ್ ರೈಸ್, ಗೋಬಿ ಮಂಚೂರಿ ಆಸೆ ತೋರಿಸಿ ಬಾಲಕಿಯನ್ನು ಅತ್ಯಾಚಾರ ನಡೆಸಿದ್ದ ಕಾಮುಕ ಅರೆಸ್ಟ್!
ಗೋ ಕಳ್ಳತನಕ್ಕೆ ಜಾತಿ ಇಲ್ಲ, ಧರ್ಮ ಇಲ್ಲ, ಬಿಜೆಪಿಯವರೇ ಬೀಫ್ ಎಕ್ಸ್ ಪೋರ್ಟ್ ಮಾಡ್ತಿದ್ದಾರೆ | ಮಿಥುನ್ ರೈ
ಮೊಬೈಲ್ ಟವರ್ ಗೆ ಹತ್ತಿಕೊಂಡ ಬೆಂಕಿ: ಅಗ್ನಿಶಾಮಕ ದಳದಿಂದ ಕಾರ್ಯಾಚರಣೆ
ರಾಮ, ಕೃಷ್ಣ, ಶಿವ ಭಾರತದ ಮುಸ್ಲಿಮರ ಪೂರ್ವಜರು ಎಂದ ಉತ್ತರ ಪ್ರದೇಶ ಸಚಿವ!
ತಾತಾ ಆದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ | ದೇವೇಗೌಡ್ರ ಮನೆಯಲ್ಲಿ ಸಂಭ್ರಮ