10:49 AM Wednesday 12 - March 2025

ಮಂತ್ರವಾದಿಯ ಮಾತು ನಂಬಿ, ನಿಧಿಗಾಗಿ ಮನೆಯೊಳಗೆ 20 ಅಡಿ ಗುಂಡಿ ತೋಡಿದ!

chamarajanagara
21/09/2021

ಚಾಮರಾಜನಗರ: ಮಾಂತ್ರಿಕರು ಹೇಳಿದರೆಂದ್ರೆ, ಸಾಕು ಹಿಂದೆ, ಮುಂದೆ ಯೋಚಿಸದೇ ನಮ್ ಜನ ಇಲ್ಲದ ಯಡವಟ್ಟಿಗೆ ಕೈ ಹಾಕ್ತಾರೆ. ಮಾಂತ್ರಿಕ ನಿಧಿ ಇದೆ ಅಂತ ಹೇಳಿದ್ರೆ ಸಾಕು ಇದ್ದ ಮನೆಯನ್ನೂ ಗುಂಡಿ ತೋಡಿ ಗುಡಿಸಿ ಗುಂಡಾಂತರ ಮಾಡಿ ಹಾಕ್ತಾರೆ. ಇಲ್ಲೊಬ್ಬ ಮಂತ್ರವಾದಿಯ ಮಾತು ನಂಬಿ ತಾನು ವಾಸಿಸುತ್ತಿದ್ದ  ಮನೆಯೊಳಗೆ ನಿಧಿಗಾಗಿ  20 ಅಡಿ ಆಳ ಗುಂಡಿ ತೆಗೆದು ಮೋಸ ಹೋಗಿದ್ದಾನೆ.

ಚಾಮರಾಜನಗರ ತಾಲೂಕಿನ ಅಮ್ಮನಪುರ ಗ್ರಾಮದ ಕೂಲಿ ಕಾರ್ಮಿಕರೊಬ್ಬರು ಕೇರಳದ ಮಂತ್ರವಾದಿಯ ಮಾತನ್ನು ನಂಬಿ ತನ್ನ ಮನೆಯೊಳಗೆ 20 ಅಡಿಗಳಷ್ಟು ದೊಡ್ಡ ಗುಂಡಿಯನ್ನು ತೋಡಿದ್ದಾನೆ. ಜೊತೆಗೆ ಊರಿನವರಿಗೂ ಗೊತ್ತಾಗದ ಹಾಗೆ ಮನೆಯೊಳಗೆ ರಹಸ್ಯವಾಗಿ ಗುಂಡಿ ತೆಗೆದು ಪಕ್ಕದ ರೂಮಿನಲ್ಲಿ ಅಗೆದ ಮಣ್ಣಗಳನ್ನು ರಾಶಿ ಹಾಕಿದ್ದ.

ವಿಷಯ ಆಗಿದಿಷ್ಟೆ…

ಅಮ್ಮನಪುರ ಗ್ರಾಮದ ವ್ಯಕ್ತಿಯೋರ್ವರ ಮನೆಗೆ ತಿಂಗಳ ಹಿಂದೆ ಹಾವೊಂದು ಬಂದಿತ್ತು. ಅದನ್ನು ಅವರು ಕೊಂದು ಎಸೆದಿದ್ದಾರೆ. ಆ ಬಳಿಕ ಕೆಲವು ದಿನಗಳ ನಂತರ ಇನ್ನೆರಡು ಹಾವುಗಳು ಬಂದಿವೆ. ಇದರಿಂದ ಭೀತರಾದ ಅವರು ಕುಟುಂಬಸ್ಥರಿಗೆ ವಿಷಯ ಹೇಳಿದ್ದರು. ಅವರು ಕೇರಳದ ಮಂತ್ರವಾದಿಯನ್ನು ಪರಿಚಯಿಸಿ. ಅವರ ಬಳಿಗೆ ಪ್ರಶ್ನೆ ಕೇಳಲು ಕಳುಹಿಸಿದ್ದಾರೆ.

ಕೇರಳದ ಮಾಂತ್ರಿಕನ ಬಳಿಗೆ  ಈ ವ್ಯಕ್ತಿ ಹೋದ ವೇಳೆ, ಹಾವು ಕಾಣಿಸಿಕೊಳ್ಳುತ್ತಿದೆ ಎಂದು ಹೇಳಿದ ತಕ್ಷಣವೇ ಮಂತ್ರವಾದಿ, ನಿನ್ನ ಮನೆಯಲ್ಲಿ ನಿಧಿ ಇದೆ, ಅದನ್ನು ಕಾವಲು ಕಾಯಲು ಹಾವು ಬರುತ್ತಿದೆ. ಅದನ್ನು ಪೂಜೆ ನಡೆಸಿ, ಮಣ್ಣು ಅಗೆದರೆ, ನಿನಗೆ ನಿಧಿ ಸಿಗಬಹುದು ಎಂದು ವ್ಯಕ್ತಿಯ ಕಿವಿಗೆ ಹೂವಿಟ್ಟು ಕಳುಹಿಸಿದ್ದಾನೆ.

ಇತ್ತ ಮನೆಗೆ ಬಂದ ವ್ಯಕ್ತಿ ಕೊಠಡಿಯನ್ನು ಅಗೆಯಲು ಆರಂಭಿಸಿದ್ದಾನೆ. ಅಗೆದು ಅಗೆದು ತುಂಬಾ ಆಳವಾದರೂ ನಿಧಿ ಸಿಗಲಿಲ್ಲ. ಕೊನೆಗೆ 10 ಅಡಿ ದಾಡಿತು. ಈ ವೇಳೆ ಹಗ್ಗ, ಏಣಿಯನ್ನು ಇಳಿಸಿ ಅಗೆಯುವ ಕೆಲಸವನ್ನು ಮುಂದುವರಿಸಿದ್ದಾನೆ. ಆದರೆ 20 ಅಡಿ ತೋಡಿದರೂ ನಿಧಿ ಸಿಕ್ಕಿಲ್ಲ.

ಈ ವಿಚಾರ ಹೇಗೋ ಹೊರಗೆ ಲೀಕ್ ಆಗಿದೆ. ಹೀಗಾಗಿ ನಗರದ ಪೂರ್ವಠಾಣೆಯ ಪೊಲೀಸರಿಗೂ ವಿಚಾರ ತಿಳಿದು ಬಂದಿದೆ. ಅವರು ಪರಿಶೀಲನೆ ನಡೆಸಿದಾಗ ಮಂತ್ರವಾದಿಯ ಮಾತು ನಂಬಿ ವ್ಯಕ್ತಿ ಮನೆಯೊಳಗೆಯೇ ಬಾವಿ ಕೊರೆದಿರುವುದು ಕಂಡು ಬಂದಿದೆ. ಪೊಲೀಸರು ಪ್ರಶ್ನಿಸಿದಾಗ ವ್ಯಕ್ತಿಯು, ಹಾವು ಇರಬಹುದು ಎಂದು ಅಗೆದಿರುವುದಾಗಿ ಹೇಳಿದ್ದಾನೆನ್ನಲಾಗಿದೆ. ಸದ್ಯ ಈ ವಿಚಾರ ಪ್ರಚಾರಕ್ಕೆ ಬರುತ್ತಿದ್ದಂತೆಯೇ, ಮನೆಯೊಳಗೆ ನಿಧಿ ಇದೆ ಎಂದು ಪುಂಗಿ ಊದಿದ್ದ ಮಂತ್ರವಾದಿ ಮೊಬೈಲ್ ಸ್ವಿಚ್ ಆಫ್ ಮಾಡಿದ್ದಾನೆ ಎಂದು ತಿಳಿದು ಬಂದಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/HpGUvPNd4TWBQJG8MXH5on

ಇನ್ನಷ್ಟು ಸುದ್ದಿಗಳು…

ದೆವ್ವ ಬಿಡಿಸುವ ನೆಪದಲ್ಲಿ ಕಾಡಿಗೆ ಕರೆದೊಯ್ದು 16ರ ಬಾಲಕಿಯ ಮೇಲೆ ಸಾಧುವಿನಿಂದ ಅತ್ಯಾಚಾರ!

2 ವರ್ಷದ ದಲಿತ ಮಗು ದೇವಸ್ಥಾನ ಪ್ರವೇಶಿಸಿದಕ್ಕೆ ದಂಡ: ಕ್ರಮಕೈಗೊಳ್ಳುವ ತಾಕತ್ ಇಲ್ಲದೇ ಭಾಷಣ ಬಿಗಿದು ಹೋದ ಅಧಿಕಾರಿಗಳು

ಸುಳ್ಳು ಜಾತಿ ಪ್ರಮಾಣ ಪತ್ರ:  ತಹಶೀಲ್ದಾರ್ ಸೇರಿದಂತೆ ಐವರ ವಿರುದ್ಧ ಎಫ್ ಐಆರ್

ಹಿಂದೂ ಧರ್ಮಕ್ಕೆ ಅಪಾಯ ಇದೆ ಎನ್ನುವುದು ಕಾಲ್ಪನಿಕ: ಕೇಂದ್ರ ಸರ್ಕಾರ ಸ್ಪಷ್ಟನೆ

ನಾನು ಎರಡು ಬಾರಿ ರಾಜ್ಯಸಭಾ ಸ್ಥಾನವನ್ನು ನಿರಾಕರಿಸಿದ್ದೇನೆ | ನಟ ಸೋನು ಸೂದ್‌

ಮಠದಲ್ಲಿಯೇ ಸ್ವಾಮೀಜಿಯ ಮರ್ಡರ್!? | ನೇಣು ಬಿಗಿದ ಸ್ಥಿತಿಯಲ್ಲಿ ಸ್ವಾಮೀಜಿಯ ಮೃತದೇಹ ಪತ್ತೆ

ಇತ್ತೀಚಿನ ಸುದ್ದಿ

Exit mobile version