ನಿಧಿಗಾಗಿ ತನ್ನ ಪತ್ನಿಯನ್ನೇ ನರಬಲಿ ನೀಡಲು ಮುಂದಾದ ಪತಿ! - Mahanayaka
10:19 PM Thursday 11 - September 2025

ನಿಧಿಗಾಗಿ ತನ್ನ ಪತ್ನಿಯನ್ನೇ ನರಬಲಿ ನೀಡಲು ಮುಂದಾದ ಪತಿ!

black magic
27/09/2021

ಮಹಾರಾಷ್ಟ್ರ: ನಿಧಿ ಹುಡುಕಲು ವ್ಯಕ್ತಿಯೋರ್ವ ತನ್ನ ಪತ್ನಿಯನ್ನೇ ನರಬಲಿ ನೀಡಲು ಮುಂದಾದ ಘಟನೆ ಮಹಾರಾಷ್ಟ್ರದ ಜಲ್ನಾ ಜಿಲ್ಲೆಯ ಟೊಂಕಾವು ಗ್ರಾಮದಲ್ಲಿ ನಡೆದಿದ್ದು, ಕೊನೆಗೂ ಮಹಿಳೆ ಹರಸಾಹದ ಪಟ್ಟು ತನ್ನ ಪ್ರಾಣವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಮಾಟಗಾತಿ ಹಾಗೂ ಮಹಿಳೆಯ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ.


Provided by

ಟೊಂಕಾವು ಗ್ರಾಮದ ಸಂತೋಷ್ ಎಂಬಾತ ನಿಧಿ ಹುಡುಕಲು ಪೂಜೆ ನಡೆಸುತ್ತಿದ್ದು, ಸೆ.22ರಂದು ನಿಧಿ ಹುಡುಕಲು ಪೂಜೆ ಮಾಡುವು ಉದ್ದೇಶದಿಂದ ಮಾಟಗಾತಿಯನ್ನು ಮನೆಗೆ ಕರೆದುಕೊಂಡು ಬಂದಿದ್ದಾನೆ. ಈ ವೇಳೆ ಮಾಟಗಾತಿಯು, ನಿಧಿ ಸಿಗಬೇಕಾದರೆ, ನರಬಲಿ ನೀಡಬೇಕು ಎಂದು ಹೇಳಿದ್ದಾಳೆ.

ಈ ವೇಳೆ ಯಾರನ್ನು ಬಲಿ ನೀಡುವುದು ಎಂದು ಯೋಚಿಸಿದ ಸಂತೋಷ್ ಕೊನೆಗೆ  ತನ್ನ ಪತ್ನಿ ಮೀನಾಳನ್ನೇ ಬಲಿ ಕೊಡಲು ಯೋಚಿಸಿದ್ದು, ನಾನು ನಿನ್ನನ್ನು ಬಲಿ ಕೊಡಲು ನಿರ್ಧರಿಸಿದ್ದೇನೆ. ನೀನು ತಯಾರಾಗು ಎಂದು ಪತ್ನಿಗೆ ಹೇಳಿದ್ದಾನೆ. ಜೊತೆಗೆ ಪತ್ನಿಯನ್ನು ಬಲವಂತವಾಗಿ ಪೂಜೆಗೆ ಕೂರಿಸಿದ್ದಾನೆ. ಪತ್ನಿ ನಿರಾಕರಿಸಿದಾಗ ಆಕೆಗೆ ಹಲ್ಲೆ ಕೂಡ ನಡೆಸಿದ್ದಾನೆ.

ಪತಿಯ ಕೃತ್ಯದಿಂದ ತೀವ್ರವಾಗಿ ಭೀತಳಾದ ಪತ್ನಿ ಆತನ ಕೈಯಿಂದ ಹೇಗೋ ತಪ್ಪಿಸಿಕೊಂಡು ಮನೆಯಿಂದ ಹೊರಬಂದು ಹಳ್ಳಿಯ ಕೆಲವರಿಗೆ ಮಾಹಿತಿ ನೀಡಿದ್ದಾಳೆ. ಈ ವೇಳೆ ಹಳ್ಳಿಯವರು ಮಾಟಗಾತಿ ಹಾಗೂ ಸಂತೋಷ್ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮಾಟಗಾತಿ ಹಾಗೂ ಸಂತೋಷ್ ನನ್ನು ಬಂಧಿಸಿದ್ದಾರೆ.

ಸದ್ಯ ಆರೋಪಿಗಳ ವಿರುದ್ಧ ವಿವಿಧ ಪ್ರಕರಣಗಳಡಿಯಲ್ಲಿ ಕೇಸು ದಾಖಲಿಸಿಕೊಂಡಿರುವ ಪೊಲೀಸರು, ತೀವ್ರ ವಿಚಾರಣೆ ನಡೆಸುತ್ತಿದ್ದು, ಇದಕ್ಕೂ ಮುನ್ನ ಇವರು ನರಬಲಿ ನೀಡಿದ್ದಾರೆಯೇ? ಎಂಬ ಬಗ್ಗೆ ಪೊಲೀಸರು ಮಾಟಗಾತಿಯನ್ನು ತೀವ್ರವಾಗಿ ತನಿಖೆಗೊಳಪಡಿಸುತ್ತಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/KPRE32QAEFL3ZvRW2wbYvj

ಇನ್ನಷ್ಟು ಸುದ್ದಿಗಳು…

ಗರ್ಭಿಣಿ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ರೈಲ್ವೆ ಹಳಿಯಲ್ಲಿ ಎಸೆದು ಹೋದ ಕಾಮುಕರು

ಬೆಂಗಳೂರಿನ ಪ್ಲೈಓವರ್ ಮೇಲೆ ಮತ್ತೊಂದು ಭೀಕರ ಅಪಘಾತ | ಯುವಕ, ಯುವತಿಯ ದಾರುಣ ಸಾವು

ಪ್ರತಿಭಟನಾಕಾರರನ್ನು ನಿಯಂತ್ರಿಸುತ್ತಿದ್ದ ಡಿಸಿಪಿಯ ಕಾಲಿನ ಮೇಲೆ ಹರಿದ ಕಾರು!

ಗೋಡೆ ಮೈಮೇಲೆ ಕುಸಿದು ಬಿದ್ದರೂ ತನ್ನ ಮಗುವಿನ ಮೈಗೆ ಸಣ್ಣ ಗೆರೆಯೂ ಬೀಳದಂತೆ ಕಾಪಾಡಿದ ತಾಯಿ | ವೈರಲ್ ವಿಡಿಯೋ

ದೇಶಾದ್ಯಂತ ಬುಗಿಲೆದ್ದ ರೈತರ ಆಕ್ರೋಶ: ವಿವಿಧ ಹೆದ್ದಾರಿ ತಡೆದು ತೀವ್ರ ಪ್ರತಿಭಟನೆ

ಬಿಜೆಪಿಯ ಅಧಿಕಾರವಧಿಯಲ್ಲಿ ಹಿಂದುತ್ವ ಅಪಾಯದ ಸ್ಥಿತಿಯಲ್ಲಿದೆ | ಕೆಪಿಸಿಸಿ ವಕ್ತಾರ ಸುಧೀರ್ ಕುಮಾರ್ ಮರೋಳಿ

ಇತ್ತೀಚಿನ ಸುದ್ದಿ