ನಿಧಿಯ ಆಸೆಗೆ ಪತ್ನಿಯನ್ನು ಇಂಜೆಕ್ಷನ್ ಚುಚ್ಚಿ ಹತ್ಯೆ ಮಾಡಿದ ವೈದ್ಯ! - Mahanayaka
11:12 AM Wednesday 12 - March 2025

ನಿಧಿಯ ಆಸೆಗೆ ಪತ್ನಿಯನ್ನು ಇಂಜೆಕ್ಷನ್ ಚುಚ್ಚಿ ಹತ್ಯೆ ಮಾಡಿದ ವೈದ್ಯ!

injection
24/10/2021

ದಾವಣಗೆರೆ: ನಿಧಿಯ ಆಸೆಗೆ ವೈದ್ಯನೋರ್ವ ತನ್ನ ಪತ್ನಿಯನ್ನೇ ಹತ್ಯೆ ಮಾಡಿರುವ ವಿಚಾರ ಘಟನೆ ನಡೆದು 9 ತಿಂಗಳ ಬಳಿಕ ಬೆಳಕಿಗೆ ಬಂದಿದ್ದು, ಪತ್ನಿಗೆ  ಹೈಡೋಸ್ ಚುಚ್ಚುಮದ್ದು ನೀಡಿ ಹತ್ಯೆ ಮಾಡಿರುವುದು ತಿಳಿದು ಬಂದಿದೆ. ಘಟನೆಗೆ ಸಂಬಂಧಿಸಿದಂತೆ ಆರೋಪಿ ವೈದ್ಯನನ್ನು ಪೊಲೀಸರು ಬಂಧಿಸಿದ್ದಾರೆ.

ತಾಲೂಕಿನ ಬೆಳಗುತ್ತಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ವೈದ್ಯ ಡಾ.ಚನ್ನೇಶಪ್ಪ ಎಂಬಾ ಬಂಧಿತ ಆರೋಪಿಯಾಗಿದ್ದಾನೆ.   38 ಎಕರೆ ಜಮೀನು ಹೊಂದಿದ್ದ ಶ್ರೀಮಂತನಾಗಿರುವ ಈತ ಕುಡಿತ, ಕ್ಯಾಸಿನೋ ಜೂಜಾಟದ ಚಟ ಅಂಟಿಸಿಕೊಂಡಿದ್ದ ಎನ್ನಲಾಗಿದೆ.

18 ವರ್ಷಗಳ ಹಿಂದೆ ಶಿಲ್ಪಾ ಎಂಬವರನ್ನು ಈತ ಮದುವೆಯಾಗಿದ್ದ. ಮದುವೆಯ ಸಮಯದಲ್ಲಿ 700 ಗ್ರಾಂ ಚಿನ್ನ, 1 ಕೆ.ಜಿ.ಬೆಳ್ಳಿ, 7 ಲಕ್ಷ ನಗದು ವರದಕ್ಷಿಣೆ(Dowry) ನೀಡಲಾಗಿತ್ತು. ಸಾಕಷ್ಟು ಆಸ್ತಿ ಹಣವಿದ್ದರೂ ಡಾ.ಚನ್ನೇಶಪ್ಪಗೆ ಹಣ ಆಸ್ತಿ ಹುಚ್ಚು ಹೆಚ್ಚಿತ್ತು ಎನ್ನಲಾಗಿದೆ. ವರದಕ್ಷಿಣೆ ತರುವಂತೆ ಪತ್ನಿಗೆ ನಿರಂತರ ಹಿಂಸೆಯನ್ನು ಕೂಡ ನೀಡಿದ್ದ ಎನ್ನಲಾಗಿದೆ. ಜೊತೆಗೆ ಮನೆಯಲ್ಲಿ ಆಗಾಗ ವಾಮಚಾರ ಮಾಡಿಸುತ್ತಾ, ನಿಧಿಗಾಗಿ ಶೋಧ ಮಾಡಿಸುತ್ತಿದ್ದ ಎಂದು ಹೇಳಲಾಗಿದೆ.


Provided by

ಫೆ.11ರಂದು ಪತ್ನಿಗೆ ಹೈಡೋಸ್  ಇಂಜೆಕ್ಷನ್ ಚುಚ್ಚಿ ಈತ ಹತ್ಯೆ ಮಾಡಿದ್ದಾನೆ. ವಾಮಾಚಾರದ ಭಾಗವಾಗಿ, ಮಂತ್ರವಾದಿಗಳ ಸಲಹೆಯಂತೆ ಈತ ಹತ್ಯೆ ಮಾಡಿರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಎಫ್ ಎಸ್ ಎಲ್ ವರದಿಯಲ್ಲಿ  ಶಿಲ್ವಾ ಅವರನ್ನು ಹತ್ಯೆ ಮಾಡಲಾಗಿರುವುದು ಬೆಳಕಿಗೆ ಬಂದಿದೆ. ಸದ್ಯ ಆರೋಪಿ ಡಾ.ಚನ್ನೇಶಪ್ಪನನ್ನು ನ್ಯಾಮತಿ ಪೊಲೀಸರು ಬಂಧಿಸಿ, ಮುಂದಿನ ಕ್ರಮ ಕೈಗೊಂಡಿದ್ದಾರೆ ಎಂದು ವರದಿಯಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DvHWsFS1hwLKfIX9njyNyb

ಇನ್ನಷ್ಟು ಸುದ್ದಿಗಳು…

ರಾಜ್ಯ ಖಾಸಗಿ ಶಿಕ್ಷಕರ ಬಳಗದ ಸಂಸ್ಥಾಪಕ ಸಿ.ಎನ್.ನಾಗೇಶ್ ಅವರಿಗೆ ಹುಟ್ಟುಹಬ್ಬದ ಶುಭ ಹಾರೈಕೆ

ಬೆಲೆ ಏರಿಕೆ ಬೆನ್ನಲ್ಲೇ ಗುಜರಿ ಅಂಗಡಿಯಲ್ಲಿ ರಾಶಿ ರಾಶಿ ಗ್ಯಾಸ್ ಸಿಲಿಂಡರ್ ಗಳು!

ನಟ ವಿವೇಕ್ ಸಾವಿಗೆ ಕೊವಿಡ್ ಲಸಿಕೆ ಕಾರಣವೇ? ಸರ್ಕಾರ ನೀಡಿದ ಅಂತಿಮ ವರದಿಯೇನು?

ಚುನಾವಣೆಗೋಸ್ಕರ ಆರೆಸ್ಸೆಸ್, ವಿಎಚ್ ಪಿ ಬಗ್ಗೆ ಮಾತನಾಡುವುದು ಸರಿಯಲ್ಲ: ವಿಶ್ವಪ್ರಸನ್ನ ಸ್ವಾಮೀಜಿ

ಮೋದಿಯಿಂದಾಗಿ ಕಾಂಗ್ರೆಸ್ ಧೂಳೀಪಟವಾಯ್ತು, ಇನ್ನೂ ಕಾಂಗ್ರೆಸ್ ನ ಅಡ್ರೆಸ್ಸೆ ಇರಲ್ಲ | ಯಡಿಯೂರಪ್ಪ ವಾಗ್ದಾಳಿ

ಇತ್ತೀಚಿನ ಸುದ್ದಿ