ನೈಜರ್ ದೇಶ ತೊರೆಯಲು ಭಾರತೀಯರಿಗೆ ಸೂಚನೆ: ಕಾರಣ ಏನು ಗೊತ್ತಾ..? - Mahanayaka
5:28 PM Thursday 12 - December 2024

ನೈಜರ್ ದೇಶ ತೊರೆಯಲು ಭಾರತೀಯರಿಗೆ ಸೂಚನೆ: ಕಾರಣ ಏನು ಗೊತ್ತಾ..?

12/08/2023

ಆಫ್ರಿಕಾದ ನೈಜರ್‌ ದೇಶದಲ್ಲಿರುವ ಭಾರತೀಯದು ಸಾಧ್ಯವಾದಷ್ಟು ಬೇಗ ನೈಜರ್‌ ದೇಶವನ್ನು ತೊರೆಯುವಂತೆ ಕೇಂದ್ರ ಸರ್ಕಾರ ಸಲಹೆ ನೀಡಿದೆ. ನೈಜರ್‌ನ ಅಧ್ಯಕ್ಷ ಮಹಮ್ಮದ್ ಬಾಜೂಮ್ ರ ಮನೆಯನ್ನು ಸುತ್ತುವರೆದ ದಂಗೆಕೋರ ಸೈನಿಕರು ಅವರನ್ನು ಪದಚ್ಯುತಗೊಳಿಸಿ ಅಧಿಕಾರವನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ. ಮಾತುಕತೆಗೆ ಕೂಡಾ ಸಿದ್ದರಿಲ್ಲದ ಬಂಡುಕೋರರರು ಅಧ್ಯಕ್ಷರನ್ನು ಬಿಡುಗಡೆ ಮಾಡಲು ಕೂಡಾ ನಿರಾಕರಿಸಿದ್ದಾರೆ.

ನೈಜರ್‌ ನಲ್ಲಿ ಪ್ರಜಾಪ್ರಭುತ್ವವನ್ನು ಮರಳಿ ಸ್ಥಾಪಿಸಲು ಸೈನ್ಯವನ್ನು ನಿಯೋಜಿಸಲು ಪಶ್ಚಿಮ ಆಫ್ರಿಕಾದ ಪ್ರಾದೇಶಿಕ ಬಣ ಆದೇಶಿಸಿದೆ. ಇದರಿಂದ ನೈಜರ್‌ನ ಹೊಸ ಮಿಲಿಟರಿ ಆಡಳಿತ ಮತ್ತು ಪಶ್ಚಿಮ ಆಫ್ರಿಕಾದ ಪ್ರಾದೇಶಿಕ ಬಣದ ನಡುವೆ ಉದ್ವಿಗ್ನತೆ ಹೆಚ್ಚುತ್ತಿದೆ.

ಈ ಹಿನ್ನೆಲೆಯಲ್ಲಿ ಎಚ್ಚರಿಕೆ ನೀಡಿರುವ ಭಾರತೀಯ ವಿದೇಶಾಂಗ ಸಚಿವಾಲಯ ತೀರಾ ಅನಿವಾರ್ಯತೆ ಇಲ್ಲದ ಭಾರತೀಯರು ಆದಷ್ಟು ಬೇಗ ದೇಶವನ್ನು ತೊರೆಯುವಂತೆ ಸೂಚಿಸಿದೆ. ವಾಯುಯಾನಕ್ಕೆ ನಿರ್ಬಂಧ ಇರುವುದನ್ನು ಗಮನದಲ್ಲಿಟ್ಟುಕೊಂಡು ಭೂಮಾರ್ಗದ ಮೂಲಕ ಎಚ್ಚರಿಕೆ ವಹಿಸಿ ದೇಶ ತೊರೆಯಬೇಕೆಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ74835 51849 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/BnbLYSQaXK1Hate4P0Bt3B

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ