ನಿಲ್ಲಿಸಿದ್ದ ಲಾರಿಗೆ ಡಿಕ್ಕಿ ಹೊಡೆದ ಓಮ್ನಿ ಕಾರ್: ಇಬ್ಬರು ಸಾವು, ಓರ್ವ ಗಂಭೀರ - Mahanayaka
5:16 AM Wednesday 11 - December 2024

ನಿಲ್ಲಿಸಿದ್ದ ಲಾರಿಗೆ ಡಿಕ್ಕಿ ಹೊಡೆದ ಓಮ್ನಿ ಕಾರ್: ಇಬ್ಬರು ಸಾವು, ಓರ್ವ ಗಂಭೀರ

adyar mangaluru
28/05/2021

ಮಂಗಳೂರು:  ರಸ್ತೆ ಬದಿಯಲ್ಲಿ ನಿಂತಿದ್ದ ಟ್ಯಾಂಕರ್ ಗೆ  ಓಮ್ನಿಯೊಂದು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಯುವಕರು ಮೃತಪಟ್ಟು ಓರ್ವ ಗಂಭೀರವಾಗಿ ಗಾಯಗೊಂಡಿರುವ ಘಟನೆ ರಾಷ್ಟ್ರೀಯ ಹೆದ್ದಾರಿ 75ರ ಅಡ್ಯಾರ್ ನಲ್ಲಿ ನಡೆದಿದೆ.

ಪುದು ಗ್ರಾಮದ ಅಮೆಮಾರ್ ನಿವಾಸಿ 22 ವರ್ಷ ವಯಸ್ಸಿನ ದಾವೂದ್ ಹಾಗೂ ಕುಂಜತ್ಕಲ ನಿವಾಸಿ 27 ವರ್ಷ ವಯಸ್ಸಿನ  ನಿವಾಸಿ ಉನೈಸ್ ಮೃತಪಟ್ಟವರು ಎಂದು ಗುರುತಿಸಲಾಗಿದೆ.

ಮಂಗಳೂರಿನ ಫರಂಗಿಪೇಟೆ ಕಡೆಗೆ ಬರುತ್ತಿದ್ದ ಓಮ್ನಿ ಕಾರು, ಅಡ್ಯಾರ್ ನ ಮಾಂಡೋವಿ ಕಾರು ಶೋರೂಂ ಬಳಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿ ನಿಲ್ಲಿಸಲಾಗಿದ್ದ ಲಾರಿಗೆ ಡಿಕ್ಕಿ ಹೊಡೆದಿದೆ.

ಘಟನೆಯ ಪರಿಣಾಮ ಇಬ್ಬರು ಸಾವನ್ನಪ್ಪಿದ್ದು ಓರ್ವ ಗಂಭೀರವಾಗಿ ಗಾಯಗೊಂಡಿದ್ದಾನೆ. ಗಾಯಾಳುವನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಓಮ್ನಿಯಲ್ಲಿ ಪ್ರಯಾಣಿಸುತ್ತಿದ್ದ ಯುವಕರು ಒಣ ಮೀನು ವ್ಯಾಪಾರಿಗಳಾಗಿದ್ದರು ಎಂದು ತಿಳಿದು ಬಂದಿದೆ.

ಇತ್ತೀಚಿನ ಸುದ್ದಿ