ನಿಮ್ಮ ಜೀವ ನಿಮ್ಮ ರಕ್ಷಣೆ ಎಂಬುದನ್ನು ಮರೆಯಬೇಡಿ | ಸಿಎಂ ಬಸವರಾಜ್ ಬೊಮ್ಮಾಯಿ - Mahanayaka
10:50 PM Wednesday 26 - November 2025

ನಿಮ್ಮ ಜೀವ ನಿಮ್ಮ ರಕ್ಷಣೆ ಎಂಬುದನ್ನು ಮರೆಯಬೇಡಿ | ಸಿಎಂ ಬಸವರಾಜ್ ಬೊಮ್ಮಾಯಿ

basavaraj bommai
04/09/2021

ಬೆಂಗಳೂರು: ರಾಜಕೀಯ ಸಭೆ-ಸಮಾರಂಭಗಳು, ಧಾರ್ಮಿಕ ಉತ್ಸವಗಳು ಹಾಗೂ ಗಣೇಶ ಹಬ್ಬ ಆಚರಣೆಗೆ ಹೊಸದಾಗಿ ಮಾರ್ಗಸೂಚಿಗಳನ್ನು ಪ್ರಕಟಿಸುವುದಾಗಿ ಸಿಎಂ ಬಸವರಾಜ್ ಬೊಮ್ಮಾಯಿ ಅವರು ಹೇಳಿದ್ದು,  ಜನಾಶೀರ್ವಾದ ಯಾತ್ರೆಯಲ್ಲಿ ಕೊವಿಡ್ ನಿಯಮಗಳನ್ನು ಉಲ್ಲಂಘಿಸಿ ಜನಪ್ರತಿನಿಧಿಗಳೇ ಬೇಜವಾಬ್ದಾರಿ ತೋರಿರುವ ಬೆನ್ನಲ್ಲೇ ಸಿಎಂ ಈ ಹೇಳಿಕೆ ನೀಡಿದ್ದಾರೆ.

ಸಚಿವರಾದ ಶೋಭಾ ಕರಂದ್ಲಾಜೆ, ಭಗವಂತ ಕೂಬಾ, ಎ.ನಾರಾಯಣಸ್ವಾಮಿ, ರಾಜೀವ್ ಚಂದ್ರಶೇಖರ್ ಅವರ ಜನಾಶೀರ್ವಾದ ಯಾತ್ರೆಯಲ್ಲಿ ಹೆಚ್ಚಿನ ಜನರು ಸೇರ್ಪಡೆಯಾಗಿದ್ದು ವಿವಾದಕ್ಕೆ ಕಾರಣವಾಗಿತ್ತು. ಕೇವಲ ಜನ ಸಾಮಾನ್ಯರ ಕಾರ್ಯಕ್ರಮಗಳಿಗೆ ಮಾತ್ರವೇ ಕೊವಿಡ್ ನಿಯಮಗಳೇ? ಎನ್ನುವ ಪ್ರಶ್ನೆಗಳಿಗೆ ಬಿಜೆಪಿ ನಾಯಕರುಗಳ ವರ್ತನೆಗಳು ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಬಸವರಾಜ್ ಬೊಮ್ಮಾಯಿ ಇಂದು ಮಾತನಾಡಿದ್ದಾರೆ.

ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಭಗವಂತ ಕೂಬಾ ಸೇರಿದಂತೆ ಅನೇಕರ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಜನರು ಸೇರಿರುವುದು ನನ್ನ ಗಮನಕ್ಕೆ ಬಂದಿದೆ. ಮುಂದೆ ಈ ರೀತಿ ಜನಜಂಗುಳಿ ಸೇರದಂತೆ ಕಡಿವಾಣ ಹಾಕುವ ಅಗತ್ಯವಿದೆ ಎಂದು ಹೇಳಿದ್ದಾರೆ.

ಜನರು ಸ್ವಯಂಪ್ರೇರಿತರಾಗಿ ತಮಗೆ ತಾವೇ ನಿರ್ಬಂಧ ಹಾಕಿಕೊಳ್ಳಬೇಕು. ಎಲ್ಲದಕ್ಕೂ ಸರ್ಕಾರದ ಮೇಲೆ ಅವಲಂಬಿತರಾಗಬಾರದು. ನಿಮ್ಮ ಜೀವ ನಿಮ್ಮ ರಕ್ಷಣೆ ಎಂಬುದನ್ನು ಮರೆಯಬೇಡಿ ಎಂದು ಜನರಿಗೆ ಸಲಹೆ ನೀಡಿದರು.

ಇನ್ನಷ್ಟು ಸುದ್ದಿಗಳು…

ಹುಡುಗಿಯರನ್ನು ಚುಡಾಯಿಸಿದ್ದಕ್ಕೆ ಸಾರಿಗೆ ಬಸ್ ನಲ್ಲಿಯೇ ಯುವಕನಿಗೆ ಹಿಗ್ಗಾಮುಗ್ಗಾ ಹಲ್ಲೆ!

ಆನ್ ಲೈನ್ ಜೂಜು ನಿಷೇಧಕ್ಕೆ ರಾಜ್ಯ ಸರ್ಕಾರ ತೀರ್ಮಾನ | ಸಚಿವ ಮಾಧುಸ್ವಾಮಿ

ಕಂಠಪೂರ್ತಿ ಕುಡಿದು ನಡು ರಸ್ತೆಯಲ್ಲಿ ವಾಹನಗಳನ್ನು ತಡೆದ ಯುವತಿ | “ಏನಾಯ್ತಮ್ಮಾ…” ಎಂದು ಕೇಳಲು ಹೋದವರಿಗೆ ಅವಾಚ್ಯ ಬೈಗುಳ!

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಾರಾಂತ್ಯದ ಕರ್ಫ್ಯೂ ರದ್ದಾಗಲಿ | ಸಿಪಿಐ(ಎಂ) ಒತ್ತಾಯ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಾರಾಂತ್ಯದ ಕರ್ಫ್ಯೂ ರದ್ದಾಗಲಿ | ಸಿಪಿಐ(ಎಂ) ಒತ್ತಾಯ

ಉಪ ಚುನಾವಣೆಯಲ್ಲಿ ಸ್ಪರ್ಧಿಸುವ ಆತುರ ನನಗಿಲ್ಲ, 2023ರ ಚುನಾವಣೆಗಾಗಿ ಕಾಯುತ್ತಿದ್ದೇನೆ | ಬಿ.ವೈ.ವಿಜಯೇಂದ್ರ

 

ಇತ್ತೀಚಿನ ಸುದ್ದಿ