ನಿಮ್ಮ ತಂದೆ ಕೂಡ ಪಂಚೆ ಉಡುವವರಾಗಿರಬಹುದು, ನಿಮ್ಮಂತಹ ಮಗನ ಬಗ್ಗೆ ಅವರೇನು ತಿಳಿಯಬಹುದು? | ಸಿ.ಟಿ.ರವಿಗೆ ಸಿದ್ದು ಗುದ್ದು
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಿ.ಟಿ.ರವಿ ಜಟಾಪಟಿ ಮುಂದುವರಿದಿದ್ದು, ಇಬ್ಬರು ಕೂಡ ಟ್ವಿಟ್ಟರ್ ಸಮರದಲ್ಲಿ ತೊಡಗಿದ್ದಾರೆ. ಇನ್ನೂ ಸಿದ್ದರಾಮಯ್ಯನವರ ಪಂಚೆಯ ಬಗ್ಗೆ ಸಿ.ಟಿ.ರವಿ ಗೇಲಿ ಮಾಡಿದ್ದಾರೆ ಎಂದು ಸಿದ್ದರಾಮಯ್ಯ ಇದೀಗ ರವಿ ವಿರುದ್ಧ ಖಡಕ್ ಟ್ವೀಟ್ ಮಾಡಿದ್ದಾರೆ.
ಸಿ.ಟಿ.ರವಿ ಅವರೇ ನಿಮ್ಮನ್ನು ನೀವು ರೈತರ ಮಗ ಅನ್ನುತ್ತಿದ್ದೀರಿ, ಆದರೆ, ರೈತರ ಮಕ್ಕಳ ಪಂಚೆಯನ್ನು ಗೇಲಿ ಮಾಡತ್ತಿದ್ದೀರಲ್ಲಾ? ಎಂದು ಸಿದ್ದರಾಮಯ್ಯ ಸಿ.ಟಿ.ರವಿಗೆ ತಿರುಗೇಟು ನೀಡಿದ್ದಾರೆ. ಇದರ ಜೊತೆಗೆ ನಿಮ್ಮ ತಂದೆಯವರು ಕೂಡ ಪಂಚೆ ಉಡುವವರು ಎಂದು ಅಂದುಕೊಳ್ಳುತ್ತೇನೆ ಎಂದ ಸಿದ್ದರಾಮಯ್ಯ ಮುಟ್ಟಿ ನೋಡಿಕೊಳ್ಳುವಂತಹ ಪ್ರತಿಕ್ರಿಯೆಯೊಂದನ್ನು ನೀಡಿದ್ದಾರೆ.
“ಸಿ.ಟಿ.ರವಿ ಅವರೇ, ನಿಮ್ಮನ್ನು ರೈತನ ಮಗ ಎನ್ನುತ್ತೀರಿ, ನಾನು ಉಡುವ ರೈತ ಮಕ್ಕಳ ಪಂಚೆಯನ್ನು ಗೇಲಿ ಮಾಡುತ್ತೀರಿ. ನಿಮ್ಮ ತಂದೆ ಕೂಡಾ ಪಂಚೆ ಉಡುವವರು ಎಂದು ಅಂದುಕೊಳ್ತೀನಿ. ನಿಮ್ಮಂತಹ ಮಗನ ಬಗ್ಗೆ ಅವರೇನು ಅಂದುಕೊಳ್ಳಬಹುದು ಯೋಚಿಸಿದ್ದೀರಾ? ಈ ರೀತಿ ನಾಲಿಗೆ ಸಡಿಲ ಬಿಟ್ಟು ಮನೆಗೆ ಹೋಗುವಾಗ ಹುಷಾರಾಗಿರಿ” ಎಂದು ಸಿದ್ದರಾಮಯ್ಯ ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/KPRE32QAEFL3ZvRW2wbYvj
ಇನ್ನಷ್ಟು ಸುದ್ದಿಗಳು…
ಶಾಕಿಂಗ್ ನ್ಯೂಸ್: ಅಪರಿಚಿತ ತಂಡದಿಂದ ಬೀಡಿ ಬ್ರ್ಯಾಂಚ್ ಗೆ ಹೋಗುತ್ತಿದ್ದ ಬಾಲಕನ ಅಪಹರಣಕ್ಕೆ ಯತ್ನ
ಅತ್ಯಾಚಾರದಿಂದ ಬಾಲಕಿ ಗರ್ಭಿಣಿ: ತಂದೆಗೆ ವಿಷಯ ಹೇಳುತ್ತೇನೆ ಎಂದಿದ್ದಕ್ಕೆ ಯುವಕನಿಂದ ಘೋರ ಕೃತ್ಯ
ಕೃಷ್ಣನ ಚಕ್ರ, ಟಿಪ್ಪುವಿನ ಸಿಂಹಾಸನ ಮಾರಾಟ ಮಾಡಿದ ಆರೋಪಿ ಅರೆಸ್ಟ್!
ಹೃದಯಾಘಾತವಾಗುವುದಕ್ಕೂ ಮೊದಲು ಕಂಡು ಬರುವ ಲಕ್ಷಣಗಳೇನು?
ಚಿಕ್ಕಮಗಳೂರು: ಪ್ರವಾಸಕ್ಕೆ ತೆರಳಿದ್ದ ವಿದ್ಯಾರ್ಥಿಗಳನ್ನು ತಡೆದು ಸಂಘಪರಿವಾರದ ಸದಸ್ಯರಿಂದ ಹಲ್ಲೆ
ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ವಾಟ್ಸಾಪ್ ಸಂದೇಶ ಕಳುಹಿಸಿ ಜಿಲ್ಲಾಧಿಕಾರಿ ಕಚೇರಿ ಸಿಬ್ಬಂದಿ ನಾಪತ್ತೆ!
ಕಡಬ: ಯುವತಿಯ ಮೇಲೆ ಅತ್ಯಾಚಾರ, ಗರ್ಭಪಾತ | ಕಾನ್ ಸ್ಟೇಬಲ್ ಅರೆಸ್ಟ್




























