ನಿಮ್ಮನ್ನೂ ತೆಗೆಯ ಬೇಕಾ? ಎಂದು ರಾತ್ರಿ ಬೈಕ್ ನಲ್ಲಿ ಬಂದು ಬೆದರಿಕೆ ಹಾಕಿದ್ದಾರೆ: ಹರ್ಷ ಸಹೋದರಿ ಅಶ್ವಿನಿ ಆರೋಪ
ಶಿವಮೊಗ್ಗ: ವಾಹನ ಜಖಂಗೊಳಿಸಿರುವ ಸಂಬಂಧ ಹರ್ಷ ಸಹೋದರಿ ಅಶ್ವಿನಿ ಸಹಿತ ಹಲವರ ವಿರುದ್ಧ ಪ್ರಕರಣ ದಾಖಲಾಗಿರುವ ಬೆನ್ನಲ್ಲೇ, ದುಷ್ಕರ್ಮಿಗಳು ನಮಗೆ ಬೆದರಿಕೆ ಹಾಕಿದ್ದಾರೆ, ನಮಗೆ ಸೂಕ್ತ ರಕ್ಷಣೆ ಬೇಕು ಎಂದು ಹರ್ಷ ಸಹೋದರಿ ಅಶ್ವಿನಿ ಆಗ್ರಹಿಸಿರುವ ಘಟನೆ ನಡೆದಿದೆ.
ರಾತ್ರಿ 11:15ರ ವೇಳೆಗೆ ಬೈಕ್ ನಲ್ಲಿ ಬಂದ ಯುವಕರು ಮಾರಕಾಸ್ತ್ರ ಹಿಡಿದು ಓಡಾಡುತ್ತಿದ್ದರು, ಹರ್ಷನನ್ನು ತೆಗೆದದ್ದು ಸಾಲದಾ, ನಿಮ್ಮನ್ನೂ ತೆಗೆಯ ಬೇಕಾ? ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾರೆ ಎಂದು ಅವರು ದೂರಿದ್ದಾರೆ.
ಸೀಗೆಹಟ್ಟಿಯ ನಿವಾಸ, ರವಿ ವರ್ಮ ಬೀದಿ, ಕೆ.ಆರ್.ಪುರಂ ರಸ್ತೆ ಮುಂತಾದೆಡೆ 2 ಬೈಕ್ ಗಳಲ್ಲಿ ಬಂದ 6 ಮಂದಿ ಮುಸ್ಲಿಮ್ ಯುವಕರು ಲಾಂಗ್, ಮಚ್ಚು ಹಿಡಿದು ಬೆದರಿಸಿದ್ದಾರೆ ಎಂದು ಹರ್ಷ ಸಹೋದರಿ ಆರೋಪಿಸಿದ್ದಾರೆ.
ಇನ್ನೂ ಸೀಗೇಹಟ್ಟಿಯಲ್ಲಿ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದು, ಪರಿಣಾಮವಾಗಿ ಪ್ರಕಾಶ್ (25) ಎಂಬವರು ಗಾಯಗೊಂಡಿದ್ದಾರೆ. ಅವರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ಸಂಬಂಧ ಸ್ಥಳಕ್ಕೆ ಎಸ್ ಪಿ ಮಿಥುನ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/GoQnwP3qNkmAbAPcjb8n8F
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka