ನಿಮ್ಮ ಅಪ್ಪನ ಕಾಲದಲ್ಲಿ ಅತೀ ದೊಡ್ಡ ಗುಂಪು ಹತ್ಯೆ ನಡೆದಿತ್ತು: ರಾಹುಲ್ ಗಾಂಧಿಗೆ ಬಿಜೆಪಿ ನಾಯಕರ ತಿರುಗೇಟು
ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು, ‘ಗುಂಪು ಹತ್ಯೆ’ ಎಂಬ ಪದವನ್ನು 2014ರ ಮುಂಚೆ ಬಹುಮಟ್ಟಿಗೆ ಕೇಳಿರಲಿಲ್ಲ ಎಂಬ ಟ್ವೀಟ್ ಮಾಡಿದ್ದು, ಇದರ ವಿರುದ್ಧ ಬಿಜೆಪಿ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಹುಲ್ ಗಾಂಧಿ ಹೇಳಿಕೆಗೆ ತಿರುಗೇಟು ನೀಡಿದ ಬಿಜೆಪಿ ರಾಷ್ಟ್ರೀಯ ವಕ್ತಾರ ಆರ್.ಪಿ.ಸಿಂಗ್, ಕಾಂಗ್ರೆಸ್ ಸಂಸದರು ಮತ್ತು ಕಾಂಗ್ರೆಸ್ ಕಾರ್ಯಕರ್ತರು ನಡೆಸಿದ ಸಿಖ್ಖರ ಗುಂಪು ಹತ್ಯೆಯನ್ನು ರಾಜೀವ್ ಗಾಂಧಿ(ರಾಹುಲ್ ಗಾಂಧಿಯ ತಂದೆ) ಬೆಂಬಲಿಸಿದ್ದನ್ನು ಮರೆತಿದ್ದಾರೆ ಎಂದು ಹೇಳಿದ್ದಾರೆ.
ಮತ್ತೋರ್ವ ಬಿಜೆಪಿ ನಾಯಕ ಮನ್ ಜಿಂದರ್ ಸಿಂಗ್ ಸಿರ್ಸಾ ರಾಹುಲ್ ಗಾಂಧಿ ಹೇಳಿಕೆಗೆ ತಿರುಗೇಟು ನೀಡಿದ್ದು, ಸಿಖ್ಖರ ಗುಂಪು ಹತ್ಯೆಯ ಬಗ್ಗೆ ರಾಜೀವ್ ಗಾಂಧಿ, ‘ದೊಡ್ಡ ಮರ ಬಿದ್ದಾಗ ಭೂಮಿ ಕಂಪಿಸುತ್ತದೆ’ ಎಂದು ಹೇಳಿಕೆ ನೀಡಿದ್ದರು. ಸಾವಿರಾರು ಮುಗ್ದ ಸಿಖ್ಖರು ಹತ್ಯೆಗೀಡಾಗಿದ್ದು ದೊಡ್ಡ ಮರ ಉರುಳಿದ್ದರ ಸರಿಗಟ್ಟುವಿಕೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಚಿಕ್ಕಬಳ್ಳಾಪುರ: ಕಂಪಿಸಿದ ಭೂಮಿ, ಮನೆಯಿಂದ ಹೊರಗೆ ಓಡಿ ಬಂದ ಜನರು
“ಇದು ಪ್ರೀತಿ ಅಂತ ತಿಳಿದ ಮೇಲೆ ನೀನೆ ಎಲ್ಲಾ…” | ಅಪ್ಪುವನ್ನು ನೆನೆದು ವಿಶೇಷ ಪೋಸ್ಟ್ ಮಾಡಿದ ನಟಿ ರಮ್ಯಾ
ಕ್ರಿಸ್ ಮಸ್, ಹೊಸ ವರ್ಷಾಚರಣೆಗೆ ನಿರ್ಬಂಧ ಇದೆಯೇ? | ಸಿಎಂ ಬೊಮ್ಮಾಯಿ ಹೇಳಿದ್ದೇನು?
ಪಟಾಕಿ ಒಂದು ಸಂಸ್ಕೃತಿ, ನಾನು ಕೇಡಿ ರವಿ ಅಲ್ಲ: ಡಿಕೆಶಿಗೆ ಸಿ.ಟಿ.ರವಿ ತಿರುಗೇಟು
ಪಟಾಕಿ ಒಂದು ಸಂಸ್ಕೃತಿ, ನಾನು ಕೇಡಿ ರವಿ ಅಲ್ಲ: ಡಿಕೆಶಿಗೆ ಸಿ.ಟಿ.ರವಿ ತಿರುಗೇಟು
ಎಂಇಎಸ್ ಖ್ಯಾತೆ: ಸಿದ್ದರಾಮಯ್ಯ, ಡಿಕೆಶಿ ಅವರಿಂದ ದ್ವಂದ್ವ ಹೇಳಿಕೆ; ಸಚಿವ ಈಶ್ವರಪ್ಪ ಆರೋಪ