ನಿನ್ನ ಅಂಗಾಂಗ ಸರಿ ಇದೆಯೇ ನೋಡಬೇಕು ಎಂದ ಯುವತಿ | ಬೆತ್ತಲೆ ವಿಡಿಯೋ ಕಳುಹಿಸಿದ  ಯುವಕನ ಸ್ಥಿತಿ ಏನಾಗಿದೆ ಗೊತ್ತಾ? - Mahanayaka
1:24 PM Wednesday 5 - February 2025

ನಿನ್ನ ಅಂಗಾಂಗ ಸರಿ ಇದೆಯೇ ನೋಡಬೇಕು ಎಂದ ಯುವತಿ | ಬೆತ್ತಲೆ ವಿಡಿಯೋ ಕಳುಹಿಸಿದ  ಯುವಕನ ಸ್ಥಿತಿ ಏನಾಗಿದೆ ಗೊತ್ತಾ?

22/02/2021

ಬೆಂಗಳೂರು: ವಧು-ವರಾನ್ವೇಷಣೆಗೆ ಇದೀಗ ಜನರು ವಿವಿಧ ಮ್ಯಾರೇಜ್ ವೆಬ್ ಸೈಟ್ ಗಳನ್ನು  ಅವಲಂಬನೆಯಾಗಿದ್ದಾರೆ. ಇಲ್ಲೊಬ್ಬ ಸಾಮಾಜಿಕ ಕಾರ್ಯಕರ್ತ ವಧುವಿಗೆ ನಂಬಿಕೆ ಬರಲು ಮಾಡಿದ ಕೆಲಸದಿಂದ ತಾನೇ ಸಂಕಷ್ಟಕ್ಕೀಡಾಗಿದ್ದಾನೆ.

ಹುಳಿಮಾವಿನಲ್ಲಿ ವಾಸವಿದ್ದ ಸಾಮಾಜಿಕ ಕಾರ್ಯಕರ್ತನೊಬ್ಬ  ಜೀವನ್ ಸಾಥಿ ಡಾಟ್ ಕಾಮ್ ನಲ್ಲಿ ತನ್ನ ಪ್ರೊಫೈಲ್ ಕ್ರಿಯೇಟ್ ಮಾಡಿದ್ದರು.  ವಧುವಿಗಾಗಿ  ಪ್ರೊಫೈಲ್ ಕ್ರಿಯೇಟ್ ಮಾಡಿದ್ದರು. ವಧುವಿಗಾಗಿ ಹುಡುಕಾಟ ನಡೆಸುತ್ತಿದ್ದಾಗಲೇ ಶ್ರೇಯಾ ಎಂಬಾಕೆಯ ಪರಿಚಯವಾಗಿದೆ.

ವರಾನ್ವೇಷಣೆಯಲ್ಲಿ ವಧುವು ನಿನ್ನ ಅಂಗಾಂಗಗಳು ಸರಿ ಇದೆಯೇ ಎಂದು ನನಗೆ ನೋಡಬೇಕು ಎಂದು ಕೇಳಿದ್ದಾಳೆ.  ಯುವತಿಯ ಮಾತು ಕೇಳಿದ ವರ  ಯುವತಿ ಕೇಳಿದ್ದೇ ತಡ ಯುವಕ ತನ್ನ ಬೆತ್ತಲೆ ವಿಡಿಯೋ ಕಳುಹಿಸಿದ್ದಾನೆ.

ವಿಡಿಯೋ ಕೈಗೆ ಸಿಕ್ಕ ಬಳಿಕ ಯುವತಿ ವರಸೆ ಬದಲಿಸಿದ್ದು, ನಾನು ಕೇಳಿದಷ್ಟು ಹಣ ನೀಡದೇ ಇದ್ದರೆ, ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದಾಳೆ.

ಇದೀಗ ಸಾಮಾಜಿಕ ಕಾರ್ಯಕರ್ತ  ಎಚ್.ಎಸ್.ಲೇಔಟ್ ಸೈಬರ್ ಕ್ರೈಂ ವಿಭಾಗದಲ್ಲಿ ದೂರು ದಾಖಲಿಸಿದ್ದಾರೆ. ಯಾವುದೇ ವೆಬ್ ಸೈಟ್ ಗಳಲ್ಲಿರುವ ಅಪರಿಚಿತ ವ್ಯಕ್ತಿಗಳ ಮೇಲೆ ನಂಬಿಕೆ ಇರಿಸಿ ವೈಯಕ್ತಿಕ ವಿವರಗಳನ್ನು ನೀಡುವುದು ಬಹಳ ಅಪಾಯಕಾರಿಯಾಗಿದೆ. ಈ ರೀತಿಯ ಹಲವು ಪ್ರಕರಣಗಳು ಸದ್ಯ ನಡೆಯುತ್ತಿವೆ.

ಇತ್ತೀಚಿನ ಸುದ್ದಿ