ನಿನ್ನ ಕಾಲ್ಗುಣ ಸರಿಯಿಲ್ಲ, ನೀನು ದರಿದ್ರ… ಪತಿಯ ನಿಂದನೆಯಿಂದ ಬೇಸತ್ತು ಪತ್ನಿ ಆತ್ಮಹತ್ಯೆ | ಡೆತ್ ನೋಟ್ ನಲ್ಲಿ ಭಾವನಾತ್ಮಕ ಸಂದೇಶ
ಬೆಳಗಾವಿ: ನಿನ್ನ ಕಾಲಗುಣ ಸರಿ ಇಲ್ಲ, ನೀನು ದರಿದ್ರ ಎಂದು ಪತಿ ನೀಡುತ್ತಿದ್ದ ಟಾರ್ಚರ್ ನಿಂದ ಬೇಸತ್ತು ಪತ್ನಿ ಬಾವಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದು, ಡೆತ್ ನೋಟ್ ನಲ್ಲಿ ಭಾವನಾತ್ಮಕವಾಗಿ ಬರೆದ ಸಾಲುಗಳು ಎಂತಹವರ ಎದೆಯನ್ನೂ ಕರಗಿಸುವಂತಿದೆ.
ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ನಿದಗುಂಡಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಗಂಡನ ಮನೆಗೆ ಏನೇನೋ ಕನಸುಗಳನ್ನು ಹೊತ್ತು ಬಂದಿದ್ದ 21 ವರ್ಷ ವಯಸ್ಸಿನ ಸುರೇಖಾ ಆತ್ಮಹತ್ಯೆಗೆ ಶರಣಾದವರಾಗಿದ್ದಾರೆ. ಗಂಡ, ಅತ್ತೆ, ಮಾವನ ಟಾರ್ಚರ್ ಸಹಿಸಲಾಗದೆ, ಈ ಪ್ರಪಂಚಕ್ಕೆ ಸುರೇಖಾ ವಿದಾಯ ಹೇಳಿದ್ದಾರೆ.
ಮದುವೆಯಾದ ಬಳಿಕ ಸುಖವಾದ ಸಂಸಾರವನ್ನು ಸುರೇಖಾ ಬಯಸಿದ್ದರು. ಆದರೆ, ಪತಿ, ಅತ್ತೆ, ಮಾವ ಮೂಢನಂಬಿಕೆಗಳ ದಾಸರಾಗಿದ್ದು, ಮನೆಯಲ್ಲಿ ಏನೇ ಅಶುಭವಾದರೂ ಸೊಸೆಯ ಕಾಲ್ ಗುಣ ಸರಿ ಇಲ್ಲ ಅದಕ್ಕೆ ನಡೆಯುತ್ತಿದೆ ಎಂದು ಹಿಂಸಿಸುತ್ತಿದ್ದರು ಎನ್ನಲಾಗಿದೆ. ಈ ಟಾರ್ಚರ್ ಸಹಿಸಿ ಬೇಸತ್ತು ಹೋದ ಸುರೇಖಾ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಇನ್ನೂ ಡೆತ್ ನೋಟ್ ಬರೆದಿರುವ ಸುರೇಖಾ, ನನ್ನ ಹಾದಿಯನ್ನು ಕಾಯಬೇಡ. ನಾನು ಸತ್ತು ಹೋಗುತ್ತಿದ್ದೇನೆ. ನನಗೆ ಸಾಕಾಗಿ ಹೋಗಿದೆ. ನನಗೆ ಶನಿ ಹತ್ತಿದೆ. ನೀನು ಬೇರೆ ಮದುವೆ ಮಾಡಿಕೊಂಡು ಸುಖವಾಗಿರು ಎಂದು ಅವರು ಮೌಢ್ಯದ ದಾಸನಾಗಿರುವ ತನ್ನ ಗಂಡನಿಗೆ ಕೊನೆಯ ಸಂದೇಶದಲ್ಲಿ ಭಾವನಾತ್ಮಕವಾಗಿ ಬರೆದಿದ್ದಾರೆ.
ಇನ್ನಷ್ಟು ಸುದ್ದಿಗಳು…
ಸರ್ಕಾರ ಮಾರಾಟದಲ್ಲಿ ನಿರತವಾಗಿದೆ, ನಿಮ್ಮ ಆರೋಗ್ಯ ನೀವೇ ನೋಡಿಕೊಳ್ಳಿ | ರಾಹುಲ್ ಗಾಂಧಿ
ಭಾರತಕ್ಕೆ ಬರಲು ಹಿಂದೇಟು ಹಾಕಿದ ಅಫ್ಘಾನ್ ನ ಹಿಂದೂ ಹಾಗೂ ಸಿಖ್ಖರು | ಕಾರಣ ಏನು ಗೊತ್ತಾ?
ಹಿರಿಯ ನಟ ದೊಡ್ಡಣ್ಣ ಹೃದಯ ಬಡಿತದಲ್ಲಿ ಏರುಪೇರು: ಆಸ್ಪತ್ರೆಗೆ ದಾಖಲು
ಬಿಜೆಪಿಗೆ ಅತ್ಯಾಚಾರಿಗಳೆಂದರೆ ಹೆಚ್ಚು ಪ್ರೀತಿ ಕಾಂಗ್ರೆಸ್ ನಿಂದ ವಿವಾದಾತ್ಮಕ ಹೇಳಿಕೆ
ಕಾಬೂಲ್ ವಿಮಾನ ನಿಲ್ದಾಣದ ಕಡೆ ಹೋಗಬೇಡಿ | ತನ್ನ ಪ್ರಜೆಗಳಿಗೆ ಎಚ್ಚರಿಕೆ ನೀಡಿದ ಆಸ್ಟ್ರೇಲಿಯಾ