“ಇದು ಪ್ರೀತಿ ಅಂತ ತಿಳಿದ ಮೇಲೆ ನೀನೆ ಎಲ್ಲಾ…” | ಅಪ್ಪುವನ್ನು ನೆನೆದು ವಿಶೇಷ ಪೋಸ್ಟ್ ಮಾಡಿದ ನಟಿ ರಮ್ಯಾ

ಸಿನಿಡೆಸ್ಕ್: ರಾಜಕೀಯ, ಸಿನಿಮಾದಿಂದ ದೂರ ಉಳಿದಿದ್ದ ನಟಿ ರಮ್ಯಾ ಅವರು ಪುನೀತ್ ರಾಜ್ ಕುಮಾರ್ ಅವರ ಜೊತೆಗಿನ ಚಿತ್ರದಲ್ಲಿ ನಟಿಸುವ ಮೂಲಕ ಮತ್ತೆ ಚಿತ್ರರಂಗಕ್ಕೆ ಬರುತ್ತಾರೆ ಎನ್ನುವ ಸುದ್ದಿಗಳಿದ್ದವು. ಆದರೆ ಈ ಸುದ್ದಿಗಳು ಸತ್ಯವಾಗುವುದಕ್ಕೂ ಮೊದಲೇ ಪುನೀತ್ ರಾಜ್ ಕುಮಾರ್ ಅವರು ಬಾರದ ಲೋಕಕ್ಕೆ ಹೊರಟು ಹೋಗಿದ್ದಾರೆ.
ಅಪ್ಪು ಅವರನ್ನು ಕಳೆದುಕೊಂಡು 50 ದಿನಗಳ ಕಳೆದರೂ, ಇನ್ನೂ ಕೂಡ ಯಾರಿಂದಲೂ ಆ ನೋವನ್ನು ಮರೆಯಲು ಸಾಧ್ಯವಾಗುತ್ತಿಲ್ಲ. ಅಪ್ಪು ಇಲ್ಲ ಎಂದು ಒಪ್ಪಿಕೊಳ್ಳಲು ಯಾರೂ ಕೂಡ ಇಷ್ಟನೂ ಪಡುತ್ತಿಲ್ಲ. ಈ ಸಂದರ್ಭದಲ್ಲಿಯೇ ಪುನೀತ್ ರಾಜ್ ಕುಮಾರ್ ಅವರನ್ನು ನೆನೆದು ನಟಿ ರಮ್ಯಾ ಭಾವನಾತ್ಮಕ ಪೋಸ್ಟ್ ವೊಂದನ್ನು ಇನ್ ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ.
ಪುನೀತ್ ರಾಜ್ ಕುಮಾರ್ ಅವರ ಜೊತೆಗೆ ನಟಿ ರಮ್ಯಾ ಅವರು, ಅಭಿ, ಆಕಾಶ್, ಅರಸು ಚಿತ್ರಗಳಲ್ಲಿ ಅಭಿನಯಿಸಿದ್ದರು. ಇದೀಗ ಅರಸು ಚಿತ್ರದಲ್ಲಿರುವ ನಿನ್ನ ಕಂಡ ಕ್ಷಣದಿಂದ ಯಾಕೋ ನಾನು ನನ್ನಲಿಲ್ಲ ಎನ್ನುವ ಹಾಡನ್ನು ಪೋಸ್ಟ್ ಮಾಡಿ ತಮ್ಮ ಮುಖ ಬ್ಲರ್ ಮಾಡಿ, ಅದರಲ್ಲಿ ನಾನಾ ರೀತಿಯ ಭಾವನೆಗಳನ್ನು ಚಿತ್ರ ರೂಪದಲ್ಲಿ ಪ್ರತಿ ಬಿಂಬಿಸಿದ್ದಾರೆ.
ಅರಸು ಚಿತ್ರದ ಹಾಡು ಹೀಗಿದೆ:
ನಿನ್ನ ಕಂಡ ಕ್ಷಣದಿಂದ ಯಾಕೊ ನಾನು ನನ್ನಲಿಲ್ಲ
ಆ ನಿಮಿಷದಿಂದ ನನಗೇನಾಯ್ತಂತ ಗೊತ್ತೇ ಇಲ್ಲ
ಎಂದು ಕಾಣದ ಹರುಷ ಇಂದು ನಾನು ಕಂಡೆನಲ್ಲ
ಇದು ಪ್ರೀತಿ ಅಂತ ತಿಳಿದ ಮೇಲೆ ನೀನೆ ಎಲ್ಲಾ….
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಕ್ರಿಸ್ ಮಸ್, ಹೊಸ ವರ್ಷಾಚರಣೆಗೆ ನಿರ್ಬಂಧ ಇದೆಯೇ? | ಸಿಎಂ ಬೊಮ್ಮಾಯಿ ಹೇಳಿದ್ದೇನು?
ಪಟಾಕಿ ಒಂದು ಸಂಸ್ಕೃತಿ, ನಾನು ಕೇಡಿ ರವಿ ಅಲ್ಲ: ಡಿಕೆಶಿಗೆ ಸಿ.ಟಿ.ರವಿ ತಿರುಗೇಟು
ಎಂಇಎಸ್ ಖ್ಯಾತೆ: ಸಿದ್ದರಾಮಯ್ಯ, ಡಿಕೆಶಿ ಅವರಿಂದ ದ್ವಂದ್ವ ಹೇಳಿಕೆ; ಸಚಿವ ಈಶ್ವರಪ್ಪ ಆರೋಪ
ಅಪ್ರಾಪ್ತೆಯ ಮೇಲೆ ಅತ್ಯಾಚಾರ ಆರೋಪ: ಪಾಕ್ ಕ್ರಿಕೆಟರ್ ವಿರುದ್ಧ ಎಫ್ ಐಆರ್
ಕ್ಷುಲ್ಲಕ ಕಾರಣಕ್ಕೆ ಸ್ನೇಹಿತನನ್ನೇ ಕೊಲೆಗೈದ ಸ್ನೇಹಿತರು
ಓಮಿಕ್ರಾನ್ ಪ್ರಕರಣ: ರಾಜ್ಯದಲ್ಲಿ ಕಟ್ಟುನಿಟ್ಟಿನ ಕ್ರಮ ಜಾರಿಯಾಗುತ್ತಾ? | ತಜ್ಞರು ನೀಡಿದ ಸಲಹೆ ಏನು?