ನಿನ್ನೆ ಮೊನ್ನೆ ಹುಟ್ಟಿದ ಎಸ್ ಡಿಪಿಐ ಬಿಜೆಪಿಗೆ ಲೆಕ್ಕವೇ ಅಲ್ಲ | ಬಿಜೆಪಿ ವಕ್ತಾರ ಜಗದೀಶ್ ಶೇಣವ - Mahanayaka

ನಿನ್ನೆ ಮೊನ್ನೆ ಹುಟ್ಟಿದ ಎಸ್ ಡಿಪಿಐ ಬಿಜೆಪಿಗೆ ಲೆಕ್ಕವೇ ಅಲ್ಲ | ಬಿಜೆಪಿ ವಕ್ತಾರ ಜಗದೀಶ್ ಶೇಣವ

17/01/2021

ಮಂಗಳೂರು: ಮಂಗಳೂರಿನಲ್ಲಿ ಎಸ್ ಡಿಪಿಐ ಬೃಹತ್ ಪ್ರತಿಭಟನೆಯ ಹಿನ್ನೆಲೆಯಲ್ಲಿ ಹೇಳಿಕೆ ನೀಡಿರುವ ಬಿಜೆಪಿಯ ಜಿಲ್ಲಾ ವಕ್ತಾರ ಜಗದೀಶ್ ಶೇಣವ, ನೂರಾರು ವರ್ಷಗಳ ಸನಿಹ ಇತಿಹಾಸವಿರುವ ಬಿಜೆಪಿಗೆ ನಿನ್ನೆ ಮೊನ್ನೆ ಹುಟ್ಟಿದ ಎಸ್ ಡಿಪಿಐ ಲೆಕ್ಕಕ್ಕಿಲ್ಲ ಎಂದು ಹೇಳಿದರು.

ಮಂಗಳೂರಿನಲ್ಲಿಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಗಳೂರಿನಲ್ಲಿ ಎಸ್ ಡಿಪಿಐ ಪ್ರತಿಭಟನೆಯಲ್ಲಿ ಬಿಜೆಪಿ ಹಾಗೂ ಆರೆಸ್ಸೆಸ್ ಬಗ್ಗೆ ತುಚ್ಛವಾಗಿ ಮಾತನಾಡಿದ್ದಾರೆ. ಇದನ್ನು ನಾವು ಖಂಡಿಸುತ್ತೇವೆ ಎಂದು ಹೇಳಿದರು.

ಪ್ರತಿಭಟನೆಗೆ ಬಂದವರೆಲ್ಲ ಮಂಗಳೂರಿನ ವಿವಿಧ ಮಸೀದಿಯಲ್ಲಿ ಜಮಾಯಿಸಿದ್ದರೆಂದು ಪತ್ರಿಕೆಗಳಲ್ಲಿ ಬಂದಿದೆ. ಹೀಗೆ ಮಸೀದಿಗಳಲ್ಲಿ ಜಮಾಯಿಸಲು ಮಸೀದಿಗಳು ಏನು ಎಸ್ ಡಿಪಿಐ ಕಚೇರಿಗಳೇ ಎಂದು ಪ್ರಶ್ನಿಸಿದ ಶೇಣವ, ಬಗ್ಗೆ ಮಸೀದಿಗಳ ಆಡಳಿತ ಮಂಡಳಿಗಳು ಸ್ಪಷ್ಟಪಡಿಸಬೇಕಿದೆ ಎಂದು ಆಗ್ರಹಿಸಿದರು.

ಇತ್ತೀಚಿನ ಸುದ್ದಿ