ಉದ್ಘಾಟನೆಗೊಂಡು ಒಂದೇ ದಿನದಲ್ಲಿ ಬಾಗಿಲು ಮುಚ್ಚಿದ ಆಸ್ಪತ್ರೆ!
ರಾಯಚೂರು: ಜಿಲ್ಲೆಯ ಮಾನ್ವಿ ಪಟ್ಟಣದ 60 ಹಾಸಿಗೆಯ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಉದ್ಘಾಟನೆಗೊಂಡು ಒಂದೇ ದಿನದಲ್ಲಿ ಬಾಗಿಲು ಮುಚ್ಚಿದ ಘಟನೆಯೊಂದು ನಡೆದಿದ್ದು, ಸರ್ಕಾರ ಹಾಗೂ ಶಾಸಕರ ಬೇಜವಾಬ್ದಾರಿಗೆ ಸಾಕ್ಷಿಯಾಗಿದೆ.
ಮಾನ್ವಿ ಶಾಸಕ ವೆಂಕಟಪ್ಪ ನಾಯಕ್ ಅವರು ಸಚಿವ ಹಾಲಪ್ಪ ಆಚಾರ್ ಅವರನ್ನು ಕರೆಸಿ ತರಾತುರಿಯಲ್ಲಿ ಆಸ್ಪತ್ರೆಯನ್ನು ಉದ್ಘಾಟನೆ ಮಾಡಿಸಿದ್ದಾರೆ. ಆದರೆ , ಉದ್ಘಾಟನೆಗೊಂಡ ಆಸ್ಪತ್ರೆಯಲ್ಲಿ ಯಾವುದೇ ಕನಿಷ್ಠ ಸೌಲಭ್ಯ ಹಾಗೂ ಸಿಬ್ಬಂದಿ ಕೂಡ ಇಲ್ಲವಾಗಿದ್ದು, ಈ ಹಿನ್ನೆಲೆಯಲ್ಲಿ ಉದ್ಘಾಟನೆಗೊಂಡು ಒಂದೇ ದಿನದಲ್ಲಿ ಬಾಗಿಲು ಮುಚ್ಚಿದೆ ಎಂದು ವರದಿಯಾಗಿದೆ.
ಆಸ್ಪತ್ರೆಯ ಮೂಲ ಭೂತ ಸೌಕರ್ಯದ ಬಗ್ಗೆ ಗಮನ ಹರಿಸಬೇಕಾಗಿದ್ದ ಶಾಸಕ ವೆಂಕಟಪ್ಪ ನಾಯಕ್ ಆಸ್ಪತ್ರೆ ಉದ್ಘಾಟನೆಗೆ ಮಾತ್ರವೇ ಆಸಕ್ತಿ ತೋರಿಸಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್ ಜನವರಿ 1ರಂದು ಆಸ್ಪತ್ರೆಯನ್ನು ಉದ್ಘಾಟಿಸಿ ಹೋಗಿದ್ದಾರೆ. ಆದರೆ ಉದ್ಘಾಟನೆಗೊಂಡು ಒಂದೇ ದಿನದಲ್ಲಿ ಆಸ್ಪತ್ರೆಗೆ ಬೀಗ ಭಾಗ್ಯ ಲಭಿಸಿದೆ.
ಈ ಕಟ್ಟಡ ನಿರ್ಮಾಣವಾಗಿ ಮೂರುವರೆ ವರ್ಷ ಬಳಿಕ ಉದ್ಘಾಟನೆಯಾಗಿದೆ. ಆದರೆ ಈಗಲೂ ಈ ಆಸ್ಪತ್ರೆಗೆ ಯಾವುದೇ ಸೌಲಭ್ಯಗಳನ್ನು ಒದಗಿಸದಿರುವುದು ಸರ್ಕಾರದ ಬೇಜವಾಬ್ದಾರಿ ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಕೋತಿಯ ಅಂತ್ಯಸಂಸ್ಕಾರ ಮಾಡಿ, ತಿಥಿ ಊಟ ಬಡಿಸಿದ್ದಕ್ಕೆ ಜನರ ಮೇಲೆ ಕೇಸ್!
ಬಿಜೆಪಿ ತೊರೆದು 24 ಗಂಟೆಗಳಲ್ಲೇ ಸ್ವಾಮಿ ಪ್ರಸಾದ್ ಮೌರ್ಯ ವಿರುದ್ಧ ಅರೆಸ್ಟ್ ವಾರೆಂಟ್!
“ಲೋನ್ ಆ್ಯಪ್ ನಿಂದ ಸಾಲ ಪಡೆದು ಮಾನ, ಪ್ರಾಣ ಕಳೆದುಕೊಳ್ಳಬೇಡಿ”