ನಿನ್ನೆ ಪ್ರಕೃತಿ ಕೂಡ ದುಃಖಿಸುವಂತೆ ಕಂಡಿತು | ಅಪ್ಪುಗೆ ಕಿಚ್ಚ ಸುದೀಪ್ ಭಾವುಕ ನುಡಿಗಳು
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ನಿಧನದ ಹಿನ್ನೆಲೆಯಲ್ಲಿ ಕಿಚ್ಚ ಸುದೀಪ್ ಭಾವುಕ ಪತ್ರವೊಂದನ್ನು ಬರೆಯುವ ಮೂಲಕ ಅಪ್ಪುಗೆ ಶ್ರದ್ಧಾಂಜಲಿ ಅರ್ಪಿಸಿದ್ದಾರೆ. ಪುನೀತ್ ರಾಜ್ ಕುಮಾರ್ ಅವರು ತಮ್ಮ ಕೋಟ್ಯಾಂತರ ಅಭಿಮಾನಿಗಳನ್ನು ಅಗಲಿದ ದುಃಖದ ನಡುವೆ ಕಿಚ್ಚ ಸುದೀಪ್ ಅವರು ಕೂಡ ಪತ್ರದ ಮೂಲಕ ತಮ್ಮ ದುಃಖವನ್ನು ತೋಡಿಕೊಂಡಿದ್ದಾರೆ. ಜೊತೆಗೆ ತಮ್ಮ ಪ್ರೊಫೈಲ್ ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ ಅವರ ಚಿತ್ರವನ್ನು ಹಂಚಿಕೊಂಡು ಗೌರವ ಸಲ್ಲಿಸಿದ್ದಾರೆ.
ಚಿತ್ರೋದ್ಯಮ ಅಪೂರ್ಣವಾದಂತೆ ಭಾಸವಾಗುತ್ತಿದೆ. ಸಮಯ ಎಂಬ ಕ್ರೂರಿ. ನಿನ್ನೆ ಪ್ರಕೃತಿ ಕೂಡ ದುಃಖದಿಂದ ಅಳುವಂತೆ ಕಂಡಿತು. ಅದು ನಿಜಕ್ಕೂ ಬೇಸರದ ದಿನ. ಬೆಂಗಳೂರಿಗೆ ಬಂದಿಳಿದು ಅವರ ಮೃತದೇಹದ ಕಡೆಗೆ ಹೊರಟೆ. ಇನ್ನೂ ಒಪ್ಪಿಕೊಳ್ಳದ ಸತ್ಯಕ್ಕೆ ಹತ್ತಿರವಾಗುತ್ತಿದ್ದಂತೆಯೇ ನನ್ನ ಉಸಿರು ಭಾರವಾಯಿತು.
ಪುನೀತ್ ಮಲಗಿದ್ದನ್ನು ನೋಡಿದಾಗ ಎಲ್ಲರ ಮನಸ್ಸಿನ ಮೇಲೆ ಪರ್ವತ ಹೊತ್ತು ನಿಂತಿದ್ದಾರೆ ಎನಿಸುತ್ತಿತ್ತು. ಮೊದಲ ಬಾರಿಗೆ ನನಗೆ ಉಸಿರಾಡಲಾಗಲಿಲ್ಲ. ನನ್ನ ಸಹೋದ್ಯೋಗಿ ಗೆಳೆಯ ಅವರು ಇರಬೇಕಾದ ಜಾಗದಲ್ಲಿ ಇದ್ದರು. ನನಗೆ ಅಲ್ಲಿ ಹೆಚ್ಚು ಹೊತ್ತು ನಿಲ್ಲಲು ಸಾಧ್ಯವಾಗಲೇ ಇಲ್ಲ. ಆ ದೃಶ್ಯ ನನ್ನನ್ನು ಕಾಡುತ್ತಿದೆ.
ಶಿವಣ್ಣನ ಸ್ಥಿತಿ ನೋಡಿ ನನಗೆ ಮತ್ತಷ್ಟು ನೋವಾಯಿತು. “ಅವನು ನನಗಿಂತ 13 ವರ್ಷ ಚಿಕ್ಕವನು. ನಾನು ಅವನನ್ನು ಈ ತೋಳುಗಳಲ್ಲಿ ಹಿಡಿದಿದ್ದೇನೆ” ಎಂದು ಶಿವಣ್ಣ ಹೇಳಿದರು. ಇದನ್ನು(ಈ ಸಾವನ್ನು) ಒಪ್ಪಿಕೊಳ್ಳಲು ಬಹಳ ಸಮಯ ಹಿಡಿಯುತ್ತದೆ. ಅವರು ಬಿಟ್ಟು ಹೋದ ಜಾಗ ಖಾಲಿಯಾಗಿರುತ್ತದೆ. ಅದನ್ನು ಯಾರೂ ತುಂಬಲು ಸಾಧ್ಯವಿಲ್ಲ. ಅದು ಒಬ್ಬ ಮಹಾನ್ ವ್ಯಕ್ತಿಗೆ ಸೇರಿದ ಜಾಗ. ಪುನೀತ್ ನಮ್ಮ ಪ್ರೀತಿಯ ಅಪ್ಪು ಎಂದು ಸುದೀಪ್ ಅವರು ಸುದೀರ್ಘ ಸಾಲುಗಳನ್ನು ಬರೆದಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka