ಆಸ್ಪತ್ರೆಗೆ ಸೇರಿಸಲಿಲ್ಲ: ನಿಂತಲ್ಲಿಯೇ ಮಗುವಿಗೆ ಜನ್ಮ ನೀಡಿದ ಗರ್ಭಿಣಿ - Mahanayaka
1:11 PM Thursday 12 - December 2024

ಆಸ್ಪತ್ರೆಗೆ ಸೇರಿಸಲಿಲ್ಲ: ನಿಂತಲ್ಲಿಯೇ ಮಗುವಿಗೆ ಜನ್ಮ ನೀಡಿದ ಗರ್ಭಿಣಿ

baby
26/05/2021

ಮಂಡ್ಯ: ಕೊವಿಡ್ ಟೆಸ್ಟ್ ವರದಿ ಇಲ್ಲ ಎಂದು ಗರ್ಭಿಣಿಯನ್ನು ಆಸ್ಪತ್ರೆ ಸಿಬ್ಬಂದಿ, ಆಸ್ಪತ್ರೆಗೆ ದಾಖಲಿಸದೇ ಉದ್ಧಟನ ಮೆರೆದಿದ್ದು, ಇದರಿಂದಾಗಿ ಗರ್ಭಿಣಿ ಆಸ್ಪತ್ರೆಯ ಮುಂದೆ ನಿಂತ ಸ್ಥಿತಿಯಲ್ಲಿಯೇ ಮಗುವಿಗೆ ಜನ್ಮ ನೀಡಿರುವ ದಾರುಣ ಘಟನೆ ನಡೆದಿದೆ.

ಮಂಡ್ಯ ಜಿಲ್ಲಾಸ್ಪತ್ರೆಯಲ್ಲಿ ಈ ಘಟನೆ ನಡೆದಿದ್ದು, ಸೋನು ಎಂಬ ತುಂಬು ಗರ್ಭಿಣಿಗೆ ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಕರೆತರಲಾಗಿತ್ತು. ಆದರೆ ಕೊವಿಡ್ ಟೆಸ್ಟ್ ಇಲ್ಲದೇ ಆಸ್ಪತ್ರೆಯಲ್ಲಿ ದಾಖಲಿಸಲು ಸಾಧ್ಯವಿಲ್ಲ ಎಂದು ಆಸ್ಪತ್ರೆ ಸಿಬ್ಬಂದಿ ಹೇಳಿದ್ದಾರೆ.

2 ಗಂಟೆಗಳ ಕಾಲ ಆಸ್ಪತ್ರೆಯ ಹೆರಿಗೆ ವಾರ್ಡ್ ಬಳಿಯಲ್ಲಿ ಗರ್ಭಿಣಿ ಆಸ್ಪತ್ರೆಗೆ ದಾಖಲಾಗಲು ಕಾದಿದ್ದರೆ, ಆದರೆ ಆಸ್ಪತ್ರೆ ಸಿಬ್ಬಂದಿ ಮಾನವೀಯತೆ ಮರೆತು ವರ್ತಿಸಿದ್ದು, ಮಹಿಳೆ ನಿಂತ ಜಾಗದಲ್ಲಿಯೇ ಮಗುವಿವೆ ಜನ್ಮ ನೀಡಿದ್ದು, ಹುಟ್ಟಿದ ಮಗು ಸಾವನ್ನಪ್ಪಿದೆ.

ಆಸ್ಪತ್ರೆಗಳು ಏನೇ ನಿರ್ಲಕ್ಷ್ಯ ವಹಿಸಿದರೂ, ಆಸ್ಪತ್ರೆಗಳ ವಿರುದ್ಧ ರಾಜ್ಯ ಸರ್ಕಾರ ಕಠಿಣ ಕ್ರಮಕೈಗೊಳ್ಳುತ್ತಿಲ್ಲ. ಹೀಗಾಗಿ ಆಸ್ಪತ್ರೆಗಳಲ್ಲಿ ನಿರ್ಲಕ್ಷ್ಯಗಳು ಪ್ರತಿ ದಿನ ನಡೆಯುತ್ತಲೇ ಇದೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದ ಬಳಿಕ ಉತ್ತರ ಪ್ರದೇಶದಲ್ಲಿ ನಡೆಯುತ್ತಿರುವಂತಹ ಘಟನೆಗಳು ಕರ್ನಾಟಕದಲ್ಲಿಯೂ ನಡೆಯುತ್ತಿದೆ. ಆಸ್ಪತ್ರೆಯ ಮುಂದೆ ನಿಂತ ಸ್ಥಿತಿಯಲ್ಲಿ ಮಗುವಿಗೆ ಜನ್ಮ ನೀಡಿರುವ ಈ ಪ್ರಕರಣದಿಂದಾಗಿ ನಾಗರಿಕ ಸಮಾಜ ತಲೆ ತಗ್ಗಿಸುವಂತಾಗಿದೆ.

ಇತ್ತೀಚಿನ ಸುದ್ದಿ