“ನೀನು ನೋಡಲು ಚೆನ್ನಾಗಿಲ್ಲ” ಎಂದು ನಿಂದಿಸಿ, ಟಾಯ್ಲೆಟ್ ಕ್ಲೀನರ್ ಕುಡಿಸಿ ಗರ್ಭಿಣಿ ಪತ್ನಿಯ ಹತ್ಯೆ

ವ್ಯಕ್ತಿಯೋರ್ವ ಗರ್ಭಿಣಿ ಪತ್ನಿಗೆ ಟಾಯ್ಲೆಟ್ ಕ್ಲೀನರ್ ಕುಡಿಸಿ ಹತ್ಯೆ ಮಾಡಿರುವ ಘಟನೆ ತೆಲಂಗಾಣದ ನಿಜಾಮಾಬಾದ್ ಜಿಲ್ಲೆಯಲ್ಲಿ ನಡೆದಿದೆ. ಮೃತ ಮಹಿಳೆಯನ್ನು ಕಲ್ಯಾಣಿ ಎಂದು ಗುರುತಿಸಲಾಗಿದೆ.
ತರುಣ್ ಮತ್ತು . ಮೃತ ಕಲ್ಯಾಣಿಯನ್ನು ನಾಲ್ಕು ವರ್ಷಗಳ ಹಿಂದೆ ವಿವಾಹವಾಗಿದ್ದು, ಕಲ್ಯಾಣಿಯು ಮೂರು ತಿಂಗಳ ಗರ್ಭಿಣಿ. ಕಲ್ಯಾಣಿಯು ಗರ್ಬಿಣಿಯಾದ ಬಳಿಕ ಆರೋಪಿ ತರುಣ್ ಆಕೆಗೆ ಕಿರುಕುಳ ನೀಡಲು ಪ್ರಾರಂಭಿಸಿದ್ದ. ನೀನು ನೋಡಲು ಚೆನ್ನಾಗಿಲ್ಲ ಎಂದು ಹೀಯಾಳಿಸಿ ಮಾನಸಿಕ ಕಿರುಕುಳ ನೀಡುತ್ತಿದ್ದ. ಮಾತ್ರವಲ್ಲದೆ ಹೆಚ್ಚಿನ ವರದಕ್ಷಿಣೆ ತರುವಂತೆ ಕಲ್ಯಾಣಿಯನ್ನು ಪೀಡಿಸುತಿದ್ದ.
ಈ ನಡುವೆ ಇಬ್ಬರ ನಡುವೆ ನಡೆದ ವಾಗ್ವಾದ ತಾರಕಕ್ಕೇರಿ ತರುಣ್ ಕಲ್ಯಾಣಿಗೆ ಟಾಯ್ಲೆಟ್ ಕ್ಲೀನಿಂಗ್ ಕುಡಿಸಿದ್ದು, ಆಕೆ ತೀವ್ರ ಅಸ್ವಸ್ಥಳಾಗಿದ್ದರಿಂದ ಆಕೆಯ ಕುಟುಂಬದವರು ಚಿಕಿತ್ಸೆಗಾಗಿ ನಿಜಾಮಾಬಾದ್ ನ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಮೃತಪಟ್ಟಿದ್ದಾಳೆ.ಸದ್ಯ ಆರೋಪಿಗಳು ಪರಾರಿಯಾಗಿದ್ದು, ಕಲ್ಯಾಣಿ ಸಂಬಂಧಿಕರು ತರುಣ್ ಮತ್ತು ಆತನ ಕುಟುಂಬದ ವಿರುದ್ಧ ದೂರು ದಾಖಲಿಸಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ https://chat.whatsapp.com/FZkISFWKknBDvdYkMVFArW
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಕೋಳಿಯನ್ನು ಜೀವಂತವಾಗಿ ಅಂಗಾಂಗ ಕಿತ್ತು ಕೊಂದ ಕೋಳಿ ಅಂಗಡಿ ಮಾಲಿಕ ಅರೆಸ್ಟ್!
ದೂರು ನೀಡಲು ಬಂದಿದ್ದ ಮಹಿಳೆಯಿಂದ ಮಸಾಜ್ ಮಾಡಿಸಿಕೊಂಡ ಪೊಲೀಸ್ ಅಧಿಕಾರಿ!
160 ಭಾಷೆಗಳಲ್ಲಿ ತೆರೆಕಾಣಲಿದೆ ಅವತಾರ್ 2: ಚಿತ್ರ ಬಿಡುಗಡೆಯ ದಿನಾಂಕ ಫಿಕ್ಸ್
ಲಾರಿಗಳ ಮುಖಾಮುಖಿ ಡಿಕ್ಕಿ: ಇಬ್ಬರು ಲಾರಿ ಚಾಲಕರ ದಾರುಣ ಸಾವು
ಕುಡಿದು ಪ್ರಜ್ಞೆ ಇಲ್ಲದೇ ಬಿದ್ದ ವರ: ತನ್ನ ಸಂಬಂಧಿಯನ್ನೇ ಮದುವೆಯಾದ ವಧು!