ಮಂಗಳೂರು: ನಿಫಾ ವೈರಸ್ ಶಂಕೆ ಇದ್ದ ಯುವಕನ ಪರೀಕ್ಷೆ ವರದಿ ನೆಗೆಟಿವ್ | ಆರೋಗ್ಯಾಧಿಕಾರಿ
ಮಂಗಳೂರು: ನಿಫಾ ವೈರಸ್ ಶಂಕೆಯಿಂದ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಕಾರವಾರ ಮೂಲದ ಯುವಕನ ಪರೀಕ್ಷೆ ವರದಿ ನೆಗೆಟಿವ್ ಬಂದಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕಿಶೋರ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.
ಗೋವಾದಲ್ಲಿ ಸಾಂಕ್ರಾಮಿಕ ರೋಗ ಪತ್ತೆ ಕಿಟ್ ತಯಾರಿಕಾ ಲ್ಯಾಬ್ ನಲ್ಲಿ ತಕೆಲಸ ಮಾಡುತ್ತಿದ್ದ ಯುವಕನಿಗೆ ಜ್ವರ ಕಾಣಿಸಿಕೊಂಡಿದ್ದ ನಿಫಾ ವೈರಸ್ ಶಂಕೆಯ ಹಿನ್ನೆಲೆಯಲ್ಲಿ ಕಾರವಾರ ಆಸ್ಪತ್ರೆಗೆ ದಾಖಲಾಗಿ ಬಳಿಕ ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದು, ಅಲ್ಲಿಂದ ವೆನ್ಲಾಕ್ ಆಸ್ಪತ್ರೆಗೆ ದಾಖಲಾಗಿದ್ದ.
ಯುವಕನ ಸ್ಯಾಂಪಲ್ ನ್ನು ಸಂಗ್ರಹ ಮಾಡಿದ ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯ ಇಲಾಖೆ ಪುಣೆಯ ಲ್ಯಾಬ್ ಗೆ ಕಳುಹಿಸಿತ್ತು. ಆದರೆ ಇದೀಗ ಯುವಕನಿಗೆ ನೆಗೆಟಿವ್ ವರದಿ ಬಂದಿದೆ ಎಂದು ತಿಳಿದು ಬಂದಿದೆ.
ಗೋವಾದಿಂದ ರಜೆಯ ಮೇಲೆ ಕಾರವಾರಕ್ಕೆ ಬೈಕ್ ನಲ್ಲಿ ಬಂದಿದ್ದ ಯುವಕ ಮಳೆಯಲ್ಲಿ ಬಂದಿದ್ದು, ಹೀಗಾಗಿ ಜ್ವರ ಕಾಣಿಸಿಕೊಂಡಿದೆ. ಆತನಿಗೆ ನಿಫಾ ವೈರಸ್ ಸೋಂಕಿನ ಶಂಕೆ ಇಲ್ಲದಿದ್ದರೂ, ಸ್ವಯಂ ತಪಾಸಣೆಗೆ ಇಚ್ಛಿಸಿದ್ದರಿಂದ, ನಿರ್ಲಕ್ಷ್ಯವಹಿಸದೇ ಟೆಸ್ಟ್ ಗೆ ಕಳುಹಿಸಿದ್ದೆವು. ಇದೀಗ ನಿಫಾ ಪರೀಕ್ಷೆ ವರದಿ ನೆಗೆಟಿವ್ ಬಂದಿದೆ ಎಂದು ಆರೋಗ್ಯಾಧಿಕಾರಿ ತಿಳಿಸಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ.
ಇನ್ನಷ್ಟು ಸುದ್ದಿಗಳು…
ರಾಷ್ಟ್ರಧ್ವಜಕ್ಕೆ ಅಗೌರವ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ವಿರುದ್ಧ ಪ್ರಕರಣ ದಾಖಲು
ಕೃಷಿ ಅಧ್ಯಯನಕ್ಕಾಗಿ ಫಾರ್ಮ್ ಹೌಸ್ ಗೆ ಹೋಗಿದ್ದ ವೈದ್ಯೆ ಕೃಷಿ ಹೊಂಡದಲ್ಲಿ ಮುಳುಗಿ ಸಾವು!
ಫ್ಲೈಓವರ್ ಮೇಲೆ ಬೈಕ್ ಗೆ ಡಿಕ್ಕಿ ಹೊಡೆದ ಕಾರು: 40 ಅಡಿ ಎತ್ತರದಿಂದ ಕೆಳಗೆ ಬಿದ್ದ ಬೈಕ್ ಸವಾರರು
ಅವಸರದಿಂದ ದೇವಸ್ಥಾನಗಳನ್ನು ಒಡೆಯಬೇಡಿ: ಸಿಎಂ ಬಸವರಾಜ ಬೊಮ್ಮಾಯಿ ಸೂಚನೆ
ವರ ನೀರು ತರಲು ಹೋಗಿ ವಾಪಸ್ ಬರುವಷ್ಟರಲ್ಲಿ ನವವಧು ಎಸ್ಕೇಪ್!
ಮಸೀದಿ, ಚರ್ಚ್, ದೇವಸ್ಥಾನ ಅಂತ ಇಲ್ಲ, ಯಾವುದೇ ಇದ್ದರೂ ತೆರವು ಮಾಡುತ್ತೇವೆ | ರಾಮನಗರ ಡಿಸಿ
ನೀವು ಲಿಂಬೆ ಸೋಡಾವನ್ನು ಅತೀಯಾಗಿ ಕುಡಿಯುತ್ತೀರಾ? | ಹಾಗಿದ್ದರೆ, ಈ ವಿಚಾರ ನೀವು ತಿಳಿಯಲೇ ಬೇಕು
ಸೋದರಳಿಯನ ಪತ್ನಿಗೆ ಹಲ್ಲೆ, ವಿಷ ಕುಡಿಸಲು ಯತ್ನ: ಹಾಸ್ಯ ನಟ ರಾಜು ತಾಳಿಕೋಟೆ ವಿರುದ್ಧ ಗಂಭೀರ ಆರೋಪ