ಅಧಿಕಾರಕ್ಕಾಗಿ ಮಠ ಕಟ್ಟುತ್ತಿದ್ದಾರೆ: ಸಚಿವ ನಿರಾಣಿ ವಿರುದ್ಧ ಬಿಜೆಪಿ ಶಾಸಕ ಯತ್ನಾಳ್​ ವ್ಯಂಗ್ಯ - Mahanayaka

ಅಧಿಕಾರಕ್ಕಾಗಿ ಮಠ ಕಟ್ಟುತ್ತಿದ್ದಾರೆ: ಸಚಿವ ನಿರಾಣಿ ವಿರುದ್ಧ ಬಿಜೆಪಿ ಶಾಸಕ ಯತ್ನಾಳ್​ ವ್ಯಂಗ್ಯ

yathnal
25/01/2022

ಬೆಂಗಳೂರು: ಕೆಲವರಿಗೆ 10 ವೋಟ್​ ತರುವ ಯೋಗ್ಯತೆ ಇಲ್ಲ. ಅಧಿಕಾರಕ್ಕಾಗಿ ಮಠ ಕಟ್ಟುತ್ತಿದ್ದಾರೆ. ಅಂತಹವರನ್ನು ಮಂತ್ರಿ ಮಾಡಿದ್ದಾರೆ. ಇವರಿಂದ ಉಪಯೋಗ ಇಲ್ಲ ಎಂದು ಸಚಿವ ಮುರುಗೇಶ್​ ನಿರಾಣಿ ವಿರುದ್ಧ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್ ವ್ಯಂಗ್ಯವಾಡಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಪುಟ ಪುನಾರಚನೆ ಶೀಘ್ರವಾಗಿ ಆಗಬೇಕು. ವಾರದೊಳಗೆ ಮಾಡಿದರೆ ಒಳ್ಳೆಯದು. ನಂತರ ಪುನಾರಚನೆಯಾದರೆ ಉಪಯೋಗ ಇಲ್ಲ. ಯುಪಿಯಂತೆ ಅಧಿಕಾರ ಅನುಭವಿಸಿದ ನಂತರ ಹೋಗುತ್ತಾರೆ. ಸಚಿವ ಮೌರ್ಯ ರೀತಿ ಪಕ್ಷ ಬಿಟ್ಟು ಹೋಗುತ್ತಾರೆ ಎಂದರು.

ಇನ್ನು ಶಾಸಕ ರೇಣುಕಾಚಾರ್ಯ ಭೇಟಿ ವಿಚಾರವಾಗಿ ಮಾತನಾಡಿದ ಯತ್ನಾಳ್​, ನಾನೇನು ವಿಪಕ್ಷದವರನ್ನು ಭೇಟಿ ಮಾಡಿದ್ದೇನಾ? ಪಕ್ಷದ ಶಾಸಕ ರೇಣುಕಾಚಾರ್ಯ ಭೇಟಿ ಮಾಡಿದ್ದೇನೆ. ರೇಣುಕಾಚಾರ್ಯ ಭೇಟಿ ಮಾಡಿದ್ದರಲ್ಲಿ ತಪ್ಪೇನಿದೆ?. ನಾವು ಭೇಟಿ ಮಾಡಿದರೆ ಪಕ್ಷಕ್ಕೆ ಏನು ತೊಂದರೆ ಆಗಲ್ಲ ಎಂದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಸೇತುವೆಯಿಂದ ಕೆಳಗೆ ಬಿದ್ದ ಕಾರು: ಶಾಸಕನ ಮಗ ಸೇರಿ ಏಳು ವೈದ್ಯಕೀಯ ವಿದ್ಯಾರ್ಥಿಗಳು ಸಾವು

ಫುಟ್‌ ಬಾಲ್ ಪಂದ್ಯ ವೀಕ್ಷಿಸಲು ನೂಕು ನುಗ್ಗಲು: ಕಾಲ್ತುಳಿತದಲ್ಲಿ 6 ಸಾವು

‘ಸ್ಟುಪಿಡ್ ಸನ್ ಆಫ್​ ಎ..’ ಎಂದು ಪತ್ರಕರ್ತನಿಗೆ ನಿಂದಿಸಿದ ಅಮೆರಿಕ ಅಧ್ಯಕ್ಷ ಜೋ ಬೈಡನ್

ಹುಡುಗಿಯ ವಿಚಾರಕ್ಕೆ ಒಂದೇ ಸಂಘಟನೆಯ ಎರಡು ಗುಂಪುಗಳ ನಡುವೆ ಹೊಡೆದಾಟ

 

ಇತ್ತೀಚಿನ ಸುದ್ದಿ