ವೀಕ್ಷಕರ ನಿರೀಕ್ಷೆ ಸುಳ್ಳಾಗಿಸಿದ ಕೆಜಿಎಫ್ ಚಾಪ್ಟರ್ 2: ನೆಗೆಟಿವ್ ವಿಮರ್ಶೆ
ಕೆಜಿಎಫ್ 2 ಚಿತ್ರಕ್ಕೆ ನಿರೀಕ್ಷೆಗೂ ಮೀರಿ ಬೆಂಬಲ ವ್ಯಕ್ತವಾಗಿದೆ. ಕನ್ನಡದ ಚಿತ್ರವೊಂದು ಭಾರತದ ಎಲ್ಲ ಭಾಷೆಯ ಚಿತ್ರಗಳನ್ನು ಮೀರಿ ಜನಪ್ರಿಯಗೊಂಡಿರುವುದು ಕನ್ನಡಿಗರಿಗೆ ಹೆಮ್ಮೆಯ ವಿಚಾರವಾದರೆ, ಇನ್ನೊಂದೆಡೆ ಹಾಲಿವುಡ್ ಚಿತ್ರರಂಗದ ಗಮನ ಸೆಳೆದಿದೆ.
ಕೆಜಿಎಫ್ ಚಾಪ್ಟರ್ 2 (K.G.F: Chapter 2) ಬಿಡುಗಡೆಯಾದ ಬಳಿಕ ನಾನಾ ರೀತಿಯ ವಿಶ್ಲೇಷಣೆಗಳು ಕೇಳಿ ಬಂದಿವೆ. ಚಾಪ್ಟರ್ 1ರಲ್ಲಿ ಚಿತ್ರವು ಬಲವಾದ ಕಥೆಯನ್ನು ಹೊಂದಿತ್ತು, ಕ್ಲೈಮಾಕ್ಸ್ ಅಂತೂ ಅದ್ಭುತವಾಗಿತ್ತು. ಆದರೆ, ಚಾಪ್ಟರ್ 2 ಕಥೆ ಅಷ್ಟೊಂದು ಬಲವಾಗಿಲ್ಲ. ಚಿತ್ರದ ಮೊದಲ ಭಾಗವಂತೂ ಡೈಲಾಗ್ ಗಳಿಂದಲೇ ತುಂಬಿ ಹೋಗಿದೆ ಎನ್ನುವ ಅಭಿಪ್ರಾಯಗಳು ಕೇಳಿ ಬಂದಿವೆ.
ಅಧೀರನ(Adheera) ಪಾತ್ರ ಚಿತ್ರದಲ್ಲಿ ಸ್ವಲ್ಪವೂ ಕುತೂಹಲವನ್ನು ಕೆರಳಿಸಲಿಲ್ಲ. ಜೊತೆಗೆ ಚಿತ್ರದ ದೃಶ್ಯವೊಂದರಲ್ಲಿ ಅಧೀರನ ಗ್ಯಾಂಗ್ ಮೇಲೆ ರಾಕಿಯ ಗ್ಯಾಂಗ್ ಫೈರಿಂಗ್ ನಡೆಸುತ್ತದೆ. ಆದರೆ. ಅಷ್ಟೊಂದು ಬುಲೆಟ್ ಗಳು ನುಗ್ಗಿ ಬರುತ್ತಿದ್ದರೂ, ಅಧೀರ ಸ್ಥಳದಲ್ಲೇ ಇರುತ್ತಾನೆ. ಅವನಿಗೆ ಒಂದೂ ಬುಲೆಟ್ ಗಳು ತಾಗುವುದಿಲ್ಲ. ಬೇರೆಯವರೆಲ್ಲರೂ ತರಗೆಲೆಗಳಂತೆ ಉರುಳಿ ಸಾಯುತ್ತಾರೆ. ಅಧೀರನಿಗೆ ಕೊನೆಯ ಕ್ಷಣದಲ್ಲಿ ಕೆಲವೇ ಬುಲೆಟ್ ಗಳು ತಾಗುತ್ತವೆ. ಎದುರು ನಿಂತಿದ್ದ ಅಧೀರನಿಗೆ ಮೊದಲು ಬುಲೆಟ್ ತಾಗಬೇಕಿತ್ತು. ಆದರೆ, ಹಿಂದೆ ಇದ್ದವರು ಸಾಯುತ್ತಿದ್ದಾರೆ. ಫೈರಿಂಗ್ ಆಗುವ ವೇಳೆ ಅಧೀರ ಕೊಂಚವೂ ಮಿಸುಕಾಡದೇ ಸ್ಥಲದಲ್ಲೇ ಇರುತ್ತಾನೆ. ಇದು ಅತಿಯಾಯಿತು ಎಂದು ಅನ್ನಿಸಿತು.
ಚಾಪ್ಟರ್ 2 ಇನ್ನಷ್ಟು ಚೆನ್ನಾಗಿ ಕಥೆಯನ್ನು ಹೆಣೆಯಬಹುದಿತ್ತು. ಅಧೀರನ ಪಾತ್ರಕ್ಕೆ ಹೆಚ್ಚು ಕಥೆಯನ್ನು ನೀಡಬಹುದಿತ್ತು. ಆದರೆ, ಆತುರದಲ್ಲಿ ಕಥೆಯನ್ನು ಮುಗಿಸಿ ಬಿಟ್ಟಂತೆ ಕಂಡಿತು. ಸಂಪತ್ತುಗಳಿಸುವುದೇ ನನ್ನ ಮುಖ್ಯ ಗುರಿ ಎನ್ನುವ ಡೈಲಾಗ್ ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡಿಲ್ಲ. ಚಾಪ್ಟರ್ 1ರಲ್ಲಿ ಕಂಡು ಬಂದಿದ್ದ ಪಾಸಿಟಿವ್ ವಿಚಾರಗಳು, ಚಾಪ್ಟರ್ 2ನಲ್ಲಿ ಕಂಡು ಬರಲಿಲ್ಲ.
ಚಿತ್ರದಲ್ಲಿ ಯಶ್ (Yash) ಅಭಿನಯದ ಬಗ್ಗೆ ಇನ್ನೊಂದು ಮಾತಿಲ್ಲ. ಅದ್ಭುತವಾದ ನಟನೆ ಇದೆ. ಅಧೀರನ ಘರ್ಜನೆ ನಡುಕ ಹುಟ್ಟಿಸುವಲ್ಲಿ ಯಶಸ್ವಿಯಾಗಿದೆ. ಡೈರೆಕ್ಷನ್ ಅಂತೂ ಅದ್ಭುತವಾಗಿ ಮೂಡಿ ಬಂದಿದೆ. ಇಷ್ಟಾದರೂ ಚಾಪ್ಟರ್ 2 ಅಷ್ಟೊಂದು ಸಂತೃಪ್ತಿಯನ್ನು ನೀಡುತ್ತಿಲ್ಲ ಎನ್ನುವ ಮಾತುಗಳು ಚಿತ್ರ ಪ್ರೇಮಿಗಳಿಂದ ಕೇಳಿ ಬಂದಿದೆ. ಕೆಜಿಎಫ್ ಚಾಪ್ಟರ್ 3 ಮಾಡುವುದಿದ್ದರೆ, ಬಲವಾದ ಕಥೆಯನ್ನು ನೀಡಿ ಇಲ್ಲವಾದರೆ, ಕೆಜಿಎಫ್ ಚಿತ್ರ ಜನರ ಮೆಚ್ಚುಗೆಯನ್ನು ಕಳೆದುಕೊಳ್ಳಬಹುದು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1duNIQRfXnJcfQKWPzNqD
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಚಿತ್ರೀಕರಣಕ್ಕೆ ನಿರ್ಮಿಸಿದ ಮನೆಯನ್ನು ಮೀನುಗಾರರಿಗೆ ನೀಡಲು ಮುಂದಾದ ನಟ ಸೂರ್ಯ
ಯಡಿಯೂರಪ್ಪ ಎಷ್ಟು ಕಮಿಷನ್ ನೀಡಿದ್ದಾರೆ?: ದಿಂಗಾಲೇಶ್ವರ ಶ್ರೀಗೆ ಶಾಸಕ ಯತ್ನಾಳ್ ಪ್ರಶ್ನೆ
ಅನುಮತಿಯಿಲ್ಲದೆ ಧಾರ್ಮಿಕ ಮೆರವಣಿಗೆಗಳನ್ನು ನಡೆಸಲು ಅವಕಾಶವಿಲ್ಲ :ಯೋಗಿ ಆದಿತ್ಯನಾಥ್
ಅಶ್ಲೀಲ ಚಿತ್ರದಲ್ಲಿರುವುದು ಪತ್ನಿ ಎಂದು ಶಂಕಿಸಿ ಪತ್ನಿಯ ಬರ್ಬರ ಹತ್ಯೆ!