ಎಸೆಸೆಲ್ಸಿ ಪಾಸ್ ಆಗಿರುವ ನಿರುದ್ಯೋಗಿಗಳಿಗೆ 2 ಲಕ್ಷ ರೂ ಸಹಾಯಧನ
ಚಿತ್ರದುರ್ಗ: ಕರ್ನಾಟಕ ಸರ್ಕಾರದ ಪ್ರವಾಸೋದ್ಯಮ ಇಲಾಖೆ ವತಿಯಿಂದ 2014-15 ನೇ ಸಾಲಿನಿಂದ 2016-17ನೇ ಸಾಲಿನವರೆಗೆ ಬಾಕಿ ಉಳಿದಿರುವ ಎಸ್ ಸಿಎಸ್‍ಪಿ, ಟಿಎಸ್ ಪಿ ಯೋಜನೆಯಡಿ ಪರಿಶಿಷ್ಟ ಜಾತಿಯ 21, ಪರಿಶಿಷ್ಟ ಪಂಗಡದ 19 ಅಭ್ಯರ್ಥಿಗಳಿಗೆ ತಲಾ 2 ಲಕ್ಷ ರೂ. ಸಹಾಯಧನದೊಂದಿಗೆ ಪ್ರವಾಸಿ ಟ್ಯಾಕ್ಸಿ ವಿತರಿಸಲು ಎಸ್ ಎಸ್ ಎಲ್ ಸಿ ಉತ್ತೀರ್ಣರಾಗಿರುವ ಅಭ್ಯರ್ಥಿಗಳಿಗೆ ಲಘುವಾಹನ ಪರವಾನಿಗೆ(ಡಿ.ಎಲ್) ಹೊಂದಿರುವ ಅರ್ಹ ನಿರುದ್ಯೋಗಿ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಅರ್ಜಿಗಳನ್ನು ಜಿಲ್ಲಾಧಿಕಾರಿಗಳ ಆದೇಶದಂತೆ ನವೆಂಬರ್ 25 ರಿಂದ ಕಚೇರಿ ವೇಳೆಯಲ್ಲಿ ವಿತರಿಸಲಾಗುವುದು. ಭರ್ತಿ ಮಾಡಿದ ಅರ್ಜಿಗಳನ್ನು ಸ್ವೀಕರಿಸಲು ಡಿಸೆಂಬರ್ 19 ಕಡೆಯ ದಿನಾಂಕವಾಗಿರುತ್ತದೆ. ಆಸಕ್ತಿಯುಳ್ಳ ಅಭ್ಯರ್ಥಿಗಳು ತಮ್ಮ ಲಘುವಾಹನ ಪರವಾನಗಿ(ಡಿಎಲ್) ಮತ್ತು ಎಸ್ ಎಸ್ ಎಲ್ ಸಿ ಉತ್ತೀರ್ಣರಾದ ಪ್ರಮಾಣ ಪತ್ರದ ನಕಲು(ಜೆರಾಕ್ಸ್) ಪ್ರತಿಗಳನ್ನು ಸಲ್ಲಿಸಿ ಅರ್ಜಿಯನ್ನು ಪ್ರವಾಸೋದ್ಯಮ ಇಲಾಖೆಯಿಂದ ಉಚಿತವಾಗಿ ಪಡೆಯಬಹುದಾಗಿದೆ.
ಭರ್ತಿ ಮಾಡಿದ ಅರ್ಜಿಗಳನ್ನು ಸ್ವಯಂ ದೃಢೀಕರಿಸಿ, ದ್ವಿ ಪ್ರತಿಯಲ್ಲಿ ಖುದ್ದಾಗಿ ಸಲ್ಲಿಸಿ, ಸಲ್ಲಿಸಿರುವ ದಾಖಲೆಗಳಿಗೆ ತಪ್ಪದೇ ಸ್ವೀಕೃತಿ(ಚೆಕ್‍ಲಿಸ್ಟ್) ಪಡೆಯಬೇಕು. ಅಂಚೆ ಮೂಲಕ ಸಲ್ಲಿಸಿದ ಅರ್ಜಿಗಳನ್ನು ಸ್ವೀಕರಿಸುವುದಿಲ್ಲ.
ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರ ಕಚೇರಿ, ಪ್ರವಾಸೋದ್ಯಮ ಇಲಾಖೆ, ಕೋಟೆ ಸಮೀಪ, ಕಾಮನಬಾವಿ ಬಡಾವಣೆ, ಚಿತ್ರದುರ್ಗ, ದೂರವಾಣಿ ಸಂಖ್ಯೆ 08194-234466 ಕ್ಕೆ ಸಂಪರ್ಕಿಸಬಹುದು ಎಂದು ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.