ಕೃಷಿ ಕಾಯ್ದೆ ವಾಪಸ್ | ಪತ್ರಕರ್ತರ ಪ್ರಶ್ನೆಗೆ ನಿರುತ್ತರವಾಗಿ ಮುಂದೆ ನಡೆದ ಸಚಿವೆ ಶೋಭಾ ಕರಂದ್ಲಾಜೆ
ಉಡುಪಿ: ವಿವಾದಿತ ರೈತ ವಿರೋಧಿ ಕೃಷಿ ಕಾಯ್ದೆಗಳನ್ನು ಹಿಂಪಡೆಯುತ್ತೇವೆ ಎಂದು ಪ್ರಧಾನಿ ನರೇಂದ್ರ ಘೋಷಿಸಿದ ಬೆನ್ನಲ್ಲೇ, ಕೇಂದ್ರ, ರಾಜ್ಯ ಕೃಷಿ ಖಾತೆ ಸಚಿವೆ ಶೋಭಾ ಕರಂದ್ಲಾಜೆ ಅವರು ಈ ಸಂಬಂಧ ಮಾಧ್ಯಮಗಳಿಗೆ ಉತ್ತರ ನೀಡಲು ನಿರಾಕರಿಸಿದರು ಎಂದು ವರದಿಯಾಗಿದೆ.
ಉಡುಪಿಯಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಲು ಆಗಮಿಸಿದ್ದ ಶೋಭಾ ಕರಂದ್ಲಾಜೆ ಅವರನ್ನು ಸುದ್ದಿಗಾರರು ಕೃಷಿ ಕಾಯ್ದೆಗಳ ಹಿಂಪಡೆತದ ಬಗ್ಗೆ ಪ್ರಶ್ನಿಸಿದರು. ಆದರೆ, ಈ ಪ್ರಶ್ನೆಗೆ ಉತ್ತರಿಸದ ಅವರು ಮುಂದೆ ನಡೆದಿದ್ದಾರೆ ಎನ್ನಲಾಗಿದೆ.
ಇನ್ನೂ ಬಿಟ್ ಕಾಯಿನ್ ಹಾಗೂ ವಿಧಾನ ಪರಿಷತ್ ಚುನಾವಣೆ ಮೊದಲಾದ ವಿಚಾರಗಳಿಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, ಕೃಷಿ ಕಾಯ್ದೆ ವಿಚಾರವಾಗಿ ಪ್ರಶ್ನೆ ಕೇಳುತ್ತಲೇ ನಿರುತ್ತರವಾಗಿ ಸ್ಥಳದಿಂದ ಮುಂದೆ ನಡೆದರು.
ಕೃಷಿ ಸಚಿವೆಯಾದ ಬಳಿಕ ರೈತರ ಹೋರಾಟಗಳಿಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ್ದ ಶೋಭಾ ಕರಂದ್ಲಾಜೆ, ಪ್ರತಿಭಟನೆ ನಡೆಸುತ್ತಿರುವವರು ನಿಜವಾದ ರೈತರಲ್ಲ ಎಂದು ಹೇಳಿಕೆ ನೀಡಿದ್ದರು. ಆದರೆ, ಇದೀಗ ಬದಲಾದ ರಾಜಕೀಯ ಸನ್ನಿವೇಶದಲ್ಲಿ ವಿವಾದಿತ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯುವುದಾಗಿ ಸ್ವತಃ ಪ್ರಧಾನಿ ಮೋದಿ ಅವರೇ ಘೋಷಿಸಿದ್ದು, ಇದೀಗ ರೈತರ ವಿರುದ್ಧ ಮಾತನಾಡಿದ ಬಿಜೆಪಿ ಮುಖಂಡರು ಮುಜುಗರಕ್ಕೀಡಾಗುವಂತಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ginhq56yzxz2MmHFl94DFN
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಬಜ್ಪೆಯ ಪೊರ್ಕೋಡಿಯಲ್ಲಿ ದಲಿತ -ಮುಸ್ಲಿಂ ಸ್ನೇಹ ಸಮ್ಮಿಲನ
ಮಳೆ ಅನಾಹುತ: ಬಹುಮಹಡಿ ಕಟ್ಟಡದ ಗೋಡೆ ಕುಸಿದು 9 ಮಂದಿಯ ದಾರುಣ ಸಾವು
ಭಾರೀ ಮಳೆಗೆ 3 ಮಂದಿ ಸಾವು: ಪ್ರವಾಹದ ಪರಿಣಾಮ 30 ಮಂದಿ ನಾಪತ್ತೆ
ವಿವಾದಿತ ಕಾಯ್ದೆ ವಾಪಸ್ ಪಡೆಯುತ್ತೇವೆ ಎಂದರೂ ಆಂದೋಲನ ಮುಂದುವರಿಸಿದ ರೈತರು: ಕಾರಣ ಏನು ಗೊತ್ತಾ?
ಸೆಗಣಿ ತಿಂದು, ನೀವೂ ತಿನ್ನಿ ಎಂದು ಕರೆ ನೀಡಿದ ಹುಚ್ಚ ವೈದ್ಯ!
ಬಿಗ್ ನ್ಯೂಸ್: ಮೂರು ವಿವಾದಿತ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆದ ಮೋದಿ ಸರ್ಕಾರ!