ಎನ್‌ ಐಟಿಕೆ ಟೋಲ್‌ಗೇಟ್‌ ವಿರುದ್ಧ ಕೆಸರು ನೀರಲ್ಲಿ ಕುಳಿತು ವಿನೂತನ ಪ್ರತಿಭಟನೆ - Mahanayaka
4:09 AM Wednesday 22 - January 2025

ಎನ್‌ ಐಟಿಕೆ ಟೋಲ್‌ಗೇಟ್‌ ವಿರುದ್ಧ ಕೆಸರು ನೀರಲ್ಲಿ ಕುಳಿತು ವಿನೂತನ ಪ್ರತಿಭಟನೆ

surathkal protest
11/02/2022

ಮಂಗಳೂರು: ರಾ.ಹೆ.66 ಸುರತ್ಕಲ್‌ ಎನ್‌ ಐಟಿಕೆ ಬಳಿ ಇರುವ ಟೋಲ್‌ ಗೇಟ್‌ ತೆರವುಗೊಳಿಸುವಂತೆ ಆಗ್ರಹಿಸಿ ಆಪದ್ಭಾಂಧವ ಆಸೀಪ್‌ ನೇತೃತ್ವದಲ್ಲಿ ನಡೆಯುತ್ತಿರುವ ಆಹೋರಾತ್ರಿ ವಿನೂತನ ಪ್ರತಿಭಟನೆ ಶುಕ್ರವಾರ ಐದನೇ ದಿನಕ್ಕೆ ಕಾಲಿರಿಸಿದೆ.

ಗುರುವಾರ ಸ್ಥಳೀಯವಾಗಿ ತೋಡಲಾದ ಹೊಂಡದ ಕೆಸರು ನೀರಲ್ಲಿ ಕುಳಿತು ವಿನೂತನವಾಗಿ ಪ್ರತಿಭಟನೆ ನಡೆಸಿದರು. ಪ್ರತಿಭಟನಾ ಸ್ಥಳಕ್ಕೆ ಸುರತ್ಕಲ್‌ ಪೊಲೀಸ್‌ ನಿರೀಕ್ಷಕ ಚಂದ್ರಪ್ಪ ಆಗಮಿಸಿ ಹೆದ್ದಾರಿ ಇಲಾಖೆಯ ಅನುಮತಿ ಮೇರೆಗೆ ಟೋಲ್‌ ಸಂಗ್ರಹಿಸುತ್ತಿರುವ ವಿಚಾರವನ್ನು ಗಮನಕ್ಕೆ ತಂದರಲ್ಲದೆ, ಕೇಂದ್ರ ಹೆದ್ದಾರಿ ಇಲಾಖೆಯೇ ಇದಕ್ಕೆ ಕೈಗೊಳ್ಳಬೇಕಿದೆ ಎಂದು ಮನವರಿಕೆ ಮಾಡಿದರು.

ಈ ವೇಳೆ ಆಪದ್ಭಾಂಧವ ಆಸಿಫ್‌ ಅವರು ಜಿಲ್ಲಾಧಿಕಾರಿಗಳೇ ಸ್ಥಳಕ್ಕೆ ಆಗಮಿಸಿ ಅಹವಾಲು ಸ್ವೀಕರಿಸಬೇಕು ಎಂದು ಪಟ್ಟು ಹಿಡಿದರಲ್ಲದೆ, ಇಲ್ಲಿ ಎರಡೆರಡು ಟೋಲ್‌ ಗೇಟ್‌ ಅಗತ್ಯವಿಲ್ಲ, ತಕ್ಷಣ ಇದನ್ನು ತೆರವುಗೊಳಿಸಬೇಕು. ಇಲ್ಲವಾದರೆ ವಿವಿಧ ಸಂಘಟನೆಗಳೊಂದಿಗೆ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಜಿ.ಪಂ., ತಾ.ಪಂ. ಚುನಾವಣೆ: ಎಸ್ಸಿ, ಎಸ್ಟಿಗೆ ಮಾತ್ರ ಮೀಸಲಾತಿ: ಸಚಿವ ಈಶ್ವರಪ್ಪ

ಶಾಲಾ ಕಾಲೇಜುಗಳಲ್ಲಿ ಕೇಸರಿ ಶಾಲು ಧರಿಸಬೇಡಿ: ಆರೆಸ್ಸೆಸ್ ಸೂಚನೆ

ಅಪಾರ್ಟ್‍ಮೆಂಟ್ ಛಾವಣಿ ಕುಸಿದು ಇಬ್ಬರು ಸಾವು, 6 ಮಂದಿ ಗಾಯ

ತಲೆ ಮೇಲೆ ಮರದ ಕೊಂಬೆ ಬಿದ್ದು ಕೋಮಾದಲ್ಲಿದ್ದ ಬಾಲಕಿ ಸಾವು

ಇಬ್ಬರು ಸಹೋದರಿಯರು ನಾಪತ್ತೆ: ದೂರು ದಾಖಲು

ಸಾಲಭಾದೆ ತಾಳಲಾರದೇ ಆತ್ಮಹತ್ಯೆಗೆ ಯತ್ನಿಸಿದ್ದ ರೈತ ಸಾವು

ಇತ್ತೀಚಿನ ಸುದ್ದಿ