ಸಂಪ್ರದಾಯವಾದಿ ನೆಟ್ಟಿಗರನ್ನು ಉರಿಸುವಂತೆ ಫೋಟೋ ಹಾಕಿದ ನಿವೇದಿತ ಗೌಡ!
ಸದಾ ಟ್ರೋಲಿಗರ ಬಾಯಿಗೆ ಆಹಾರವಾಗುವ ಬಿಗ್ ಬಾಸ್ ಖ್ಯಾತಿಯ ನಿವೇದಿತ ಗೌಡ ಅವರು ಇದೀಗ ಇನ್ ಸ್ಟಾಗ್ರಾಮ್ ನಲ್ಲಿ ಹೊಸ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದು, ಸಂಪ್ರದಾಯವಾದಿ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ನಿವೇದಿತ ಗೌಡ ಅವರ ವಿವಿಧ ರೀತಿಯ ರೀಲ್ಸ್ ಗಳಿಗೆ ಈಗಾಗಲೇ ಹಲವು ರೀತಿಯ ಕಾಮೆಂಟ್ ಗಳನ್ನು ಮಾಡುತ್ತಿರುವ ನೆಟ್ಟಿಗರಿಗೆ ಉರಿಸುವಂತೆ ನಿವಿ ಇದೀಗ ಫೋಟೋಗಳನ್ನು ಶೇರ್ ಮಾಡಿದ್ದು, ಒಂದೆಡೆ ಫ್ಯಾಶನ್ ಕಡೆಗೆ ವಾಲುತ್ತಿರುವ ನಿವೇದಿತಾ ಗೌಡ ಮತ್ತೊಂದೆಡೆ ಹೆಣ್ಣು ಮಕ್ಕಳ ಬಟ್ಟೆಯ ಮೇಲೆ ನಿರ್ಬಂಧ ಹೇರುವ ಸಂಪ್ರದಾಯವಾದಿಗಳ ಕದನ ನಿವೇದಿತಾ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ಕಂಡು ಬಂದಿದೆ.
ಒಳ್ಳೆಯ ಬಟ್ಟೆ ಹಾಕು, ಚಂದನ್ ಶೆಟ್ಟಿ ಮನೆತನದ ಮರ್ಯಾದೆ ಬೀದಿ ಪಾಲು ಮಾಡಬೇಡ ಇಂತಹ ಹಲವು ಕಾಮೆಂಟ್ ಗಳನ್ನು ನೆಟ್ಟಿಗರು ಹಾಕಿದ್ದಾರೆ. ಈ ಫೋಟೋಗಳ ವಿಡಿಯೋವನ್ನು ಸುಮಾರು 38 ಸಾವಿರಕ್ಕೂ ಅಧಿಕ ಜನರು ವೀಕ್ಷಿಸಿದ್ದಾರೆ ಮತ್ತು 600ಕ್ಕೂ ಅಧಿಕ ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka