ಕೊವಿಡ್ ಪ್ರಕರಣ ನಿಯಂತ್ರಣ ಮೀರಿದರೆ ಲಾಕ್ ಡೌನ್? | ವಾರಾಂತ್ಯದೊಳಗೆ ಅಂತಿಮ ನಿರ್ಧಾರ! - Mahanayaka
12:28 PM Friday 20 - September 2024

ಕೊವಿಡ್ ಪ್ರಕರಣ ನಿಯಂತ್ರಣ ಮೀರಿದರೆ ಲಾಕ್ ಡೌನ್? | ವಾರಾಂತ್ಯದೊಳಗೆ ಅಂತಿಮ ನಿರ್ಧಾರ!

lockdown
03/01/2022

ಬೆಂಗಳೂರು:   ಕೊವಿಡ್ ಪ್ರಕರಣಗಳ ಏರಿಕೆ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ರಾಜ್ಯ ಮಟ್ಟದ ಕೊವಿಡ್ ತಾಂತ್ರಿಕಾ ಸಲಹಾ ಸಮಿತಿ ಸಲಹೆ ನೀಡಿದ್ದು, ಕೊವಿಡ್ ದೃಢ ಪ್ರಕರಣಗಳು ಶೇ.5 ದಾಟಿದರೆ, ಅಂತಹ ಪ್ರದೇಶಗಳಲ್ಲಿ ಲಾಕ್ ಡೌನ್ ಜಾರಿಗೆ ಶಿಫಾರಸು ಮಾಡಲಾಗಿದೆ.

ಒಮಿಕ್ರಾನ್ ಸೋಂಕಿನ ಪ್ರಕರಣಗಳ ಹೆಚ್ಚಳ ಮತ್ತು ಕೊವಿಡ್ ಪ್ರಕರಣಗಳ ಏರಿಕೆ ಸಂಬಂಧ ವಿಶ್ಲೇಷಣೆ ನಡೆಸಿರುವ ಸಮಿತಿ ಪರಿಸ್ಥಿತಿ ಕೈ ಮೀರದಂತೆ ಕಟ್ಟುನಿಟ್ಟಿನ ಕ್ರಮ ಜಾರಿಗೊಳಿಸಬೇಕು ಎಂಬ ಶಿಫಾರಸು ಮಾಡಿದೆ.

ಒಂದು ವಾರದಲ್ಲಿ ವರದಿಯಾದ ಹೊಸ ಸೋಂಕು ಪ್ರಕರಣಗಳ ದೃಢ ಪ್ರಮಾಣ ಶೇ.1ಕ್ಕಿಂತ ಕಡಿಮೆ ಇರುವ ಪ್ರದೇಶವನ್ನು ಹಳದಿ ವಲಯ ಎಂದು ಘೋಷಿಸಬೇಕು. ಈ ದರ ಶೇ.1ರಿಂದ 2ರಷ್ಟು ಇದ್ದರೆ, ಕಿತ್ತಳೆ ವಲಯ ಮತ್ತು ಶೇ.3ರಷ್ಟನ್ನು ಮೀರುವ ಪ್ರದೇಶವನ್ನು ಕೆಂಪು ವಲಯ ಎಂದು ಘೋಷಿಸ ಬೇಕು ಎಂದು ಟಿಎಸಿ ವರದಿ ಹೇಳಿದೆ.


Provided by

ಕೊವಿಡ್ ಪ್ರಕರಣಗಳ ದೃಢ ಪ್ರಮಾಣ ಶೇ.3ಕ್ಕಿಂತ ಹೆಚ್ಚಾದ ಪ್ರದೇಶಗಳಲ್ಲಿ ಲಾಕ್ ಡೌನ್ ಜಾರಿಗೆ ಕ್ರಮ ಜರಗಿಸಬೇಕು. ಒಂದು ವಾರದ ಅವಧಿಯಲ್ಲಿ ಹೊಸ ಕೊವಿಡ್ ಪ್ರಕರಣಗಳ ದೃಢ ಪ್ರಮಾಣ ದರ ಸರಾಸರಿ ಶೇ.5ರಷ್ಟನ್ನು ಮೀರಿದರೆ ಅಥವಾ ಆಮ್ಲಜನಕ ಸಹಿತ ಅಥವಾ ಐಸಿಯು ಹಾಸಿಗೆಗಳಲ್ಲಿ ಶೇ.40ರಷ್ಟು ಭರ್ತಿಯಾದರೆ, ಲಾಕ್ ಡೌನ್ ಜಾರಿಗೊಳಿಸಬೇಕು ಎಂದು ವರದಿಯಲ್ಲಿ ಶಿಫಾರಸು ಮಾಡಲಾಗಿದೆ.

ಸದ್ಯದ ಮಾಹಿತಿಗಳ ಪ್ರಕಾರ ಟಿಎಸಿ ವರದಿ ಆಧಾರದಲ್ಲಿ ಬಿಗಿಯಾದ ನಿರ್ಬಂಧಗಳನ್ನು ಜಾರಿಗೊಳಿಸಲು ರಾಜ್ಯ ಸರ್ಕಾರ ಸಿದ್ಧತೆ ನಡೆಸಿದೆ. ಲಾಕ್ ಡೌನ್ ಜಾರಿಗೊಳಿಸಬೇಕಾದ ಅನಿವಾರ್ಯ ಸೃಷ್ಟಿಯಾಗದಂತೆ ತಪ್ಪಿಸಲು ಆರಂಭದಲ್ಲಿಯೇ ಕೆಲವು ನಿರ್ಬಂಧಗಳ ಜಾರಿಗೆ ಮುಂದಾಗುವತ್ತ ಸರ್ಕಾರ ಹೆಚ್ಚಿನ ಗಮನ ನೀಡಿದೆ. ವಾರಾಂತ್ಯದೊಳಗೆ ಈ ಬಗ್ಗೆ ಸ್ಪಷ್ಟ ನಿರ್ಧಾರಕ್ಕೆ ಸರ್ಕಾರ ಬರುವ ಸಾಧ್ಯತೆಗಳಿವೆ ಎನ್ನಲಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಕರ್ನಾಟಕದಲ್ಲಿ ಹೊಸ 10 ಒಮಿಕ್ರಾನ್ ಪ್ರಕರಣಗಳು ಪತ್ತೆ

ಏಕಾಏಕಿ ಆ್ಯಕ್ಟಿವ್ ಆದ ಸುಶಾಂತ್ ಸಿಂಗ್ ಫೇಸ್ ಬುಕ್ ಖಾತೆ | ಅಭಿಮಾನಿಗಳಿಗೆ ಶಾಕ್

ಗರ್ಭಿಣಿ ಸಂಜನಾ ಅವರ ಸಂತಸದ ಸಂದರ್ಭದಲ್ಲಿಯೂ ನೋಯಿಸಿದ ಆ ನ್ಯೂಸ್ ಚಾನೆಲ್!

ಶಿಕ್ಷಣಾಧಿಕಾರಿಗೆ ಮೊದಲು ಹೂವಿನ ಹಾರ ಹಾಕಿದರು, ಆ ನಂತರ ಚಪ್ಪಲಿ ಹಾರ ಹಾಕಿದರು

ಟಫ್ ರೂಲ್ಸ್ ಜಾರಿ ಸಾಧ್ಯತೆ: ಸುಳಿವು ನೀಡಿದ ಆರ್.ಅಶೋಕ್

ಇತ್ತೀಚಿನ ಸುದ್ದಿ