ಪಾರ್ಕಿಂಗ್ ಮಾಡಿದ ನಂತ್ರ ಡ್ರೈವರ್ ಇಲ್ಲದಿದ್ರೂ ಶುಲ್ಕ ಕೊಡ್ಲೇಬೇಕು: ಅಬುದಾಬಿಯಲ್ಲಿ ಹೊಸ ರೂಲ್ಸ್

ಪಾರ್ಕಿಂಗ್ ನಲ್ಲಿ ಕಾರು ನಿಲ್ಲಿಸಿದ ಬಳಿಕ ಅದರ ಒಳಗೆ ಡ್ರೈವರ್ ಇದ್ದರೂ ಇಲ್ಲದಿದ್ದರೂ ಶುಲ್ಕ ನೀಡಲೇಬೇಕಾಗುತ್ತದೆ ಎಂದು ಅಬುದಾಬಿ ಅಧಿಕಾರಿಗಳು ತಿಳಿಸಿದ್ದಾರೆ. ಸದ್ಯ ಸ್ಟ್ಯಾಂಡರ್ಡ್ ಪಾರ್ಕಿಂಗ್ ಮತ್ತು ಪ್ರೀಮಿಯಂ ಪಾರ್ಕಿಂಗ್ ಎಂಬ ಎರಡು ರೀತಿಯ ಪಾರ್ಕಿಂಗ್ ಇದೆ. ಸ್ಟ್ಯಾಂಡರ್ಡ್ ಪಾರ್ಕಿಂಗ್ ಗೆ ಒಂದು ಗಂಟೆಗೆ ಎರಡು ದಿರ್ಹಮ್ ಮತ್ತು 24 ಗಂಟೆಗೆ 15 ದಿರ್ ಹಂ ಶುಲ್ಕ ನೀಡಬೇಕಾಗಿದೆ.
ಪ್ರೀಮಿಯಂ ಪಾರ್ಕಿಂಗಿಗೆ ಗಂಟೆಗೆ ಮೂರು ದಿರ್ಹಮ್ ಶುಲ್ಕವನ್ನು ವಿಧಿಸಲಾಗುತ್ತದೆ. ಇದೇ ವೇಳೆ ಯು ಎ ಇ ನಾಗರಿಕರಿಂದ ಈ ಫೀಸನ್ನು ವಸೂಲು ಮಾಡಲಾಗುವುದಿಲ್ಲ. ವಿಲ್ಲ ಮತ್ತು ಅಪಾರ್ಟ್ಮೆಂಟ್ ಗಳಲ್ಲಿ ವಾಸಿಸುವ ವಿದೇಶಿ ನಾಗರಿಕರಿಗೆ ಮೊದಲ ವಾಹನಕ್ಕೆ 800 ಮತ್ತು ಎರಡನೇ ವಾಹನ ಇದ್ದರೆ 1500 ಅನ್ನು ಪಾರ್ಕಿಂಗ್ ಪರ್ಮಿಟ್ ಸ್ಥಳದಲ್ಲಿ ನೀಡಬೇಕಾಗುತ್ತದೆ. ಒಂದು ತಿಂಗಳಿಗೆ 391 ದಿರ್ಹಮ್, ಮೂರು ತಿಂಗಳಿಗೆ 1174 ದಿರ್ಹಂ, ಆರು ತಿಂಗಳಿಗೆ 2348 ದಿರ್ಹಮ್ ಮತ್ತು ಒಂದು ವರ್ಷಕ್ಕೆ 4695 ದಿರ್ಹಂ ಪಾರ್ಕಿಂಗ್ ಶುಲ್ಕ ನೀಡಬೇಕಾಗುತ್ತದೆ.
ಇದೇ ವೇಳೆ ವಿಮಾನ ನಿಲ್ದಾಣಗಳ ಪಾರ್ಕಿಂಗ್ ಗೆ ಸಂಬಂಧಿಸಿ ಆರರಿಂದ ಹದಿನೈದು ನಿಮಿಷಕ್ಕೆ 15 ದಿರ್ಹಂ, 16 ನಿಮಿಷದಿಂದ 30 ನಿಮಿಷದವರೆಗೆ 25 ಹಾಗೂ 31 ನಿಮಿಷದಿಂದ ಎರಡು ಗಂಟೆಯವರೆಗೆ 35 ದಿರ್ಹಮ್ ನೀಡಬೇಕಾಗುತ್ತದೆ. ಪಾರ್ಕಿಂಗ್ ಜಾಗವನ್ನು ದುರುಪಯೋಗ ಮಾಡಿದರೆ ಮತ್ತು ದಾರಿಯಲ್ಲಿ ಪಾರ್ಕಿಂಗ್ ನಡೆಸಿದರೆ 400 ದಿರ್ಹಂ ದಂಡವನ್ನು ವಿಧಿಸಲಾಗುವುದು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj