ಅರ್ಜಿ ಹಾಕದವರಿಗೆ ಫ್ರೀ ಕರೆಂಟ್ ಇಲ್ಲ: ಸಚಿವ ಕೆ.ಜೆ.ಜಾರ್ಜ್
ಚಿಕ್ಕಮಗಳೂರು: ಗೃಹಜ್ಯೋತಿ ಚೆನ್ನಾಗಿ ಆಗುತ್ತಿದೆ, 86.5 ಲ್ಯಾಕ್ಸ್ ಜನ ಅರ್ಜಿ ಹಾಕಿದ್ದಾರೆ ಜುಲೈ 1ರಿಂದ ಎಲ್ಲರಿಗೂ ಫ್ರೀ ಕರೆಂಟ್ ಸಿಗಲಿದ್ದು, ಈ ತಿಂಗಳು ಕೊನೆಗೆ ಎಲ್ಲರಿಗೂ ಬಿಲ್ ಬರುತ್ತೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ತಿಳಿಸಿದರು.
ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು, ಎಲಿಜಬಲ್ ಇರೋರ್ಗೆ ಆಗಸ್ಟ್ 1ಕ್ಕೆ ಸಿಗಲಿದೆ, ಅರ್ಜಿ ಹಾಕದವರು ಬೇಗ ಹಾಕಬೇಕು, ಕೆಇಬಿ ಆಫೀಸ್ ಗೆ ಹೋಗಿ ಕೊಡಬಹುದು, ಈಗ ಅಷ್ಟು ಸಮಸ್ಯೆ ಇಲ್ಲ, ಪ್ರೆಷರ್ ಕಡಿಮೆ ಆಗಿದೆ. ಅರ್ಜಿ ಹಾಕದವರಿಗೆ ಟೈಂ ಫ್ರೇಮ್ ಕೊಟ್ಟಿಲ್ಲ. ಅರ್ಜಿ ಹಾಕದಿದ್ರೆ ಫ್ರೀ ಕರೆಂಟ್ ಇರಲ್ಲ, ಅರ್ಜಿ ಹಾಕಬೇಕಲ್ವಾ? ಎಂದರು.
ಅರ್ಜಿ ಹಾಕೋದು ಲೇಟ್ ಮಾಡುದ್ರೆ, ಸೌಲಭ್ಯ ಸಿಗೋದು ಲೇಟ್ ಆಗುತ್ತೆ. ಅರ್ಜಿ ಹಾಕದಿದ್ರೆ ಮುಂದಿನ ತಿಂಗಳ ಬಿಲ್ ನಲ್ಲಿ ಬರಲ್ಲ, ಎಲ್ಲರೂ ಆದಷ್ಟು ಬೇಗ ಅರ್ಜಿ ಹಾಕೋದು ಒಳ್ಳೆಯದು, ಅರ್ಜಿ ಹಾಕದವರಿಗೆ ಫ್ರೀ ಇಲ್ಲ… ಹೇಗೆ ಫ್ರೀ ಕೊಡೋದು…? ಇನ್ನೂ ಟೈಂ ಇದೆ, ಬೇಗ ಅರ್ಜಿ ಹಾಕಲಿ, ಜುಲೈ 25ರವರಗೂ ಅರ್ಜಿ ಹಾಕಬಹುದು ಎಂದು ಅವರು ಹೇಳಿದ್ರು…
ವಿಡಿಯೋ ನೋಡಲು ಲಿಂಕ್ ಗೆ ಕ್ಲಿಕ್ ಮಾಡಿ: https://youtu.be/I5XIz5COkM4