ಸನಾತನದಲ್ಲಿ ಹಿಂದೂಗಳಿಲ್ಲ, ಹಿಂದೂಗಳಲ್ಲಿ ದಲಿತರಿಲ್ಲ: ಪ್ರಹ್ಲಾದ್ ಜೋಶಿ ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆ ಆಕ್ರೋಶ - Mahanayaka

ಸನಾತನದಲ್ಲಿ ಹಿಂದೂಗಳಿಲ್ಲ, ಹಿಂದೂಗಳಲ್ಲಿ ದಲಿತರಿಲ್ಲ: ಪ್ರಹ್ಲಾದ್ ಜೋಶಿ ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆ ಆಕ್ರೋಶ

priyank kharge
13/04/2025

ಬೆಂಗಳೂರು: “ದಲಿತರು ಹಿಂದೂಗಳಲ್ಲ” RSS ಹಾಗೂ BJP  ಯ ಒಳಮನಸಿನ ಸತ್ಯವನ್ನು ಪ್ರಹ್ಲಾದ್ ಜೋಶಿಯವರು ಸ್ಪಷ್ಟಪಡಿಸಿದ್ದಾರೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.


Provided by

“ಕೇವಲ ಹಿಂದೂಗಳಿಗೆ ಮಾತ್ರವಲ್ಲ, ದಲಿತರಿಗೂ ಕಾಂಗ್ರೆಸ್ ವಿರೋಧಿ” ಎಂಬ ಪ್ರಹ್ಲಾದ್ ಜೋಶಿ ಹೇಳಿಕೆಗೆ ಸಾಮಾಜಿಕ ಜಾಲತಾಣಗಳ ಮೂಲಕ ತಿರುಗೇಟು ನೀಡಿದ ಪ್ರಿಯಾಂಕ್ ಖರ್ಗೆ,  ಈ ಸ್ಪಷ್ಟನೆ ನೀಡಿದ್ದಕ್ಕೆ ಧನ್ಯವಾದಗಳು ಜೋಶಿಯವರೇ,  ಹಿಂದೂಗಳೇ ಬೇರೆ, ದಲಿತರೇ ಬೇರೆ ಮತ್ತು ಸನಾತನದವರೇ ಬೇರೆ ಎನ್ನುವ RSS  ಹಾಗೂ BJPಯ ವಿಭಜನಾತ್ಮಕ ಧೋರಣೆಯನ್ನು ಜೋಶಿಯವರು ಪ್ರಾಮಾಣಿಕವಾಗಿ ಸ್ಪಷ್ಟಪಡಿಸಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸನಾತನದಲ್ಲಿ ಹಿಂದೂಗಳಿಲ್ಲ, ಹಿಂದೂಗಳಲ್ಲಿ ದಲಿತರಿಲ್ಲ ಎನ್ನುವುದು ಸಂಘ ಪರಿವಾರದೊಳಗಿನ ಸತ್ಯ. ಈ ಸತ್ಯವನ್ನು ಸಮಾಜ ಅರ್ಥ ಮಾಡಿಕೊಳ್ಳುವಂತೆ ತಿಳಿಸಿದ್ದಕ್ಕೆ ಅಭಿನಂದನೆಗಳು! ಎಂದು ಅವರು ಲೇವಡಿ ಮಾಡಿದ್ದಾರೆ.


Provided by
Provided by
Provided by
Provided by
Provided by
Provided by
Provided by
Provided by
Provided by
Provided by
Provided by
Provided by
Provided by
Provided by
Provided by
Provided by
Provided by
Provided by
Provided by
Provided by <
Provided by
Provided by
Provided by
Provided by

ಜೋಶಿಯವರೇ,  ನಿಮ್ಮ ಈ ಪ್ರತ್ಯೇಕತಾ ಧೋರಣೆಗಾಗಿಯೇ, ಈ ತಾರತಮ್ಯಕ್ಕಾಗಿಯೇ ಬಾಬಾ ಸಾಹೇಬರು “ಹಿಂದೂವಾಗಿ ಹುಟ್ಟಿದ್ದೇನೆ, ಆದರೆ ಹಿಂದುವಾಗಿ ಸಾಯಲಾರೆ“ ಎಂದು ಬೌದ್ಧ ದಮ್ಮ ದೀಕ್ಷೆ ಪಡೆದಿದ್ದು. ಬಿಜೆಪಿ ನಾಯಕರಿಗೆ ಬಾಬಾ ಸಾಹೇಬರ ಸಿದ್ಧಾಂತದ ಮೇಲೆ ನೈಜ ಗೌರವ ಇರುವುದೇ ಆದರೆ, ಅಂಬೇಡ್ಕರ್ ಅವರು ಬೌದ್ಧ ಧರ್ಮ ಸ್ವೀಕರಿಸಿದ ದಮ್ಮಚಕ್ರ ಪ್ರವರ್ತನ ದಿನವನ್ನು ಆಚರಿಸಿ, ತಾರತಮ್ಯದ ಬಗೆಗಿನ ಅಂಬೇಡ್ಕರ್ ಅವರ ಹೇಳಿಕೆಗಳನ್ನು ಓದಲಿ ಎಂದು ಸವಾಲು ಹಾಕಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ