ಇನ್ಮುಂದೆ ಉಮ್ರಾದಲ್ಲಿ ನೂಕುನುಗ್ಗಲು ಇಲ್ಲ: ಸೌದಿ ಅರೇಬಿಯಾದಿಂದ ನೂತನ ಕ್ರಮ

ಇನ್ನು ಮುಂದೆ ಯಾವುದೇ ನೂಕುನುಗ್ಗಲು ಇಲ್ಲದೆ ಆರಾಮವಾಗಿ ಉಮ್ರಾ ನಿರ್ವಹಿಸಲು ಸಾಧ್ಯವಾಗಲಿದೆ. ಇದಕ್ಕೆ ಪೂರಕ ಕ್ರಮಗಳ ಪಟ್ಟಿಯನ್ನು ಸೌದಿ ಅರೇಬಿಯಾ ಬಿಡುಗಡೆಗೊಳಿಸಿದೆ. ಉಮ್ರಾ ನಿರ್ವಹಣೆಗೆ ಬೇಕಾದ ಸೌಕರ್ಯಗಳನ್ನು ಹೆಚ್ಚು ಗೊಳಿಸಲಾಗುವುದಲ್ಲದೆ ಹೆಚ್ಚು ಉಮ್ರಾ ಯಾತ್ರಿಕರು ಬರುವಂತೆ ಮಾಡುವುದಕ್ಕೆ ಪೂರಕ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಲಾಗಿದೆ.
ಬೆಳಗ್ಗೆ 6 ಗಂಟೆಯಿಂದ ಎಂಟು ಗಂಟೆವರೆಗೆ, ಮಧ್ಯಾಹ್ನ 12 ರಿಂದ 2 ಗಂಟೆಯವರೆಗೆ ಮತ್ತು ಮುಂಜಾನೆ ಎರಡು ಗಂಟೆಯಿಂದ ನಾಲ್ಕು ಗಂಟೆಯವರೆಗೆ ಉಮ್ರಾ ನಿರ್ವಹಿಸುವುದಕ್ಕೆ ಅತ್ಯಂತ ಸೂಕ್ತ ಸಮಯವಾಗಿದೆ. ಈ ಸಂದರ್ಭದಲ್ಲಿ ಯಾತ್ರಿಕರ ಸಂಖ್ಯೆ ಕಡಿಮೆ ಇರುವುದರಿಂದ ಆರಾಮವಾಗಿ ಉಮ್ರಾ ನಿರ್ವಹಿಸಬಹುದು. ತವಾಫ್, ಸಯೀ ಇತ್ಯಾದಿ ಉಮ್ರಾದ ಬಹು ಮುಖ್ಯ ಕರ್ಮಗಳನ್ನು ನಿರ್ವಹಿಸುವುದಕ್ಕೆ ಈ ಸಮಯದಲ್ಲಿ ಸುಲಭ ಎಂದು ಹೇಳಲಾಗಿದೆ.
ಉಮ್ರ ವೀಸಾದ ಅವಧಿಯನ್ನು 30 ದಿನಗಳಿಂದ 90 ದಿನಗಳವರೆಗೆ ವಿಸ್ತರಿಸಲಾಗಿದೆ. ವೈಯಕ್ತಿಕ ವೀಸಾ, ವಿಸಿಟಿಂಗ್ ವೀಸಾ, ಟೂರಿಸಂ ವೀಸಾ ಮುಂತಾಗಿ ಬರುವವರೆಗೂ ಉಮ್ರಾ ನಿರ್ವಹಿಸಲು ಅವಕಾಶ ನೀಡಲಾಗುತ್ತಿದೆ. ಇ ಆಪ್ ನ ಮೂಲಕ ಮದೀನಾದ ಮಸ್ಜಿದುನ್ನ ಬವಿಯ ಸಂದರ್ಶನವನ್ನು ಸುಲಭವಾಗಿ ನಿರ್ವಹಿಸುವುದಕ್ಕೆ ಸೌಲಭ್ಯ ಒದಗಿಸಲಾಗಿದೆ. ಪುರುಷರ ಸಹಾಯವಿಲ್ಲದೆ ಮಹಿಳೆಯರಿಗೆ ಉಮ್ರಾ ನಿರ್ವಹಿಸುವುದಕ್ಕೂ ಅವಕಾಶವನ್ನು ಒದಗಿಸಲಾಗುತ್ತಿದೆ. ಈ ವರ್ಷ ಈವರೆಗೆ ಒಂದು ಕೋಟಿ 30 ಲಕ್ಷ ಮಂದಿ ಉಮ್ರ ನಿರ್ವಹಿಸಿದ್ದಾರೆ ಎಂದು ಸೌದಿಯ ಹಜ್ ಮತ್ತು ಉಮ್ರಾ ಸಚಿವಾಲಯ ತಿಳಿಸಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj