ಬಜರಂಗದಳ ನಿಷೇಧಿಸುವ ಪ್ರಸ್ತಾವನೆ ನಮ್ಮ ಮುಂದಿಲ್ಲ: ಮಾಜಿ ಸಿಎಂ ವೀರಪ್ಪ ಮೊಯಿಲಿ ಸ್ಪಷ್ಟನೆ - Mahanayaka

ಬಜರಂಗದಳ ನಿಷೇಧಿಸುವ ಪ್ರಸ್ತಾವನೆ ನಮ್ಮ ಮುಂದಿಲ್ಲ: ಮಾಜಿ ಸಿಎಂ ವೀರಪ್ಪ ಮೊಯಿಲಿ ಸ್ಪಷ್ಟನೆ

veerappa moily
04/05/2023

ಉಡುಪಿ: ಬಜರಂಗದಳವನ್ನು ನಿಷೇಧಿಸುವ ಯಾವುದೇ ಪ್ರಸ್ತಾವನೆ ಕಾಂಗ್ರೆಸ್ ಮುಂದೆ ಇಲ್ಲ. ಹಿಂದೆ ಕೇಂದ್ರದಲ್ಲಿ ನಾವು ಅಧಿಕಾರದಲ್ಲಿದ್ದಾಗಲೂ ಪ್ರಸ್ತಾವನೆ ಇರಲಿಲ್ಲ. ರಾಜ್ಯ ಸರಕಾರ ಅಂತಹ ಸಂಘಟನೆಗಳನ್ನು ನಿಷೇಧಿಸುವ ಹಕ್ಕು ಹೊಂದಿಲ್ಲ ಎಂದು ಉಡುಪಿಯಲ್ಲಿ ಮಾಜಿ ಸಿಎಂ ವೀರಪ್ಪ ಮೊಯಿಲಿ ಸ್ಪಷ್ಟಪಡಿಸಿದ್ದಾರೆ.

ನಗರದ ಖಾಸಗಿ ಹೊಟೇಲ್ ನಲ್ಲಿ ಮಾಧ್ಯಮದ ಜೊತೆ ಮಾತನಾಡಿದ ವೀರಪ್ಪ ಮೊಯಿಲಿ ,ವಲ್ಲಭಬಾಯಿ ಪಟೇಲ್ ಅವರನ್ನು ಈಗ ಬಿಜೆಪಿ ಆರಾಧಿಸುತ್ತದೆ. ಆದರೆ ಪಟೇಲ್ ಅವರು ಆರೆಸ್ಸೆಸ್ ನ್ನು ಬ್ಯಾನ್ ಮಾಡಿದ್ದರು. ಜವಾಹರಲಾಲ್ ನೆಹರೂ ಬ್ಯಾನ್ ನ್ನು ವಾಪಾಸು ಪಡೆದರು. ಸುಪ್ರೀಮ್ ಕೋರ್ಟ್ ದ್ವೇಷ ರಾಜಕೀಯ ಕುರಿತು ಸ್ಪಷ್ಟ ತೀರ್ಪು ನೀಡಿದೆ.ಅದರ ಭಾಗವಾಗಿ ಈ ಪ್ರಸ್ತಾಪ ಮಾಡಿದ್ದೇವೆಯೇ ಹೊರತು ಬಜರಂಗದಳದಂತಹ ಸಂಘಟನೆಯನ್ನು ನಿಷೇಧಿಸುವ ಪ್ರಸ್ತಾಪ ನಮ್ಮ ಮುಂದಿಲ್ಲ. ಇದನ್ನು ನಮ್ಮ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರೇ ಇವತ್ತು ಸ್ಪಷ್ಟಪಡಿಸುತ್ತಾರೆ ಎಂದು ಮಾಜಿ ಸಿಎಂ ,ಕಾಂಗ್ರೆಸ್ ಮುಖಂಡ ವೀರಪ್ಪ ಮೊಯಿಲಿ ಸ್ಪಷ್ಟಪಡಿಸಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD

ಯೂಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ