ಅವಧಿ ಮುಗಿದ್ರೂ ನವೀಕರಣ ಇಲ್ಲ: ಯುಪಿಯಲ್ಲಿ ಅಲ್ಪಸಂಖ್ಯಾತ ಆಯೋಗ ಅನಾಥ!
ಉತ್ತರ ಪ್ರದೇಶದ ಅಲ್ಪಸಂಖ್ಯಾತ ಆಯೋಗದ ಅವಧಿಯು 2024 ಜೂನ್ 27ರಂದು ಮುಗಿದಿದ್ದು ಇದುವರೆಗೆ ಅದನ್ನು ಮರು ರೂಪಿಸಲಾಗಿಲ್ಲ. ಸದ್ಯ ಈ ಆಯೋಗಕ್ಕೆ ಚೇರ್ಮೆನ್ ಇಲ್ಲ ಮತ್ತು ಸದಸ್ಯರೂ ಇಲ್ಲ. ಆ ಕಾರಣದಿಂದ ಉತ್ತರ ಪ್ರದೇಶದಲ್ಲಿ ಸದ್ಯ ಅಲ್ಪಸಂಖ್ಯಾತ ಆಯೋಗವು ಕೆಲಸ ಮಾಡುತ್ತಿಲ್ಲ.
ಇದೇ ವೇಳೆ ಹೊಸ ಛೇರ್ಮನ್ ಅನ್ನು ನೇಮಿಸದ ಬಗ್ಗೆ ಮತ್ತು ಸದಸ್ಯರ ನೇಮಕದ ಯಾವುದೇ ಪ್ರಶ್ನೆಗೆ ಉತ್ತರ ಪ್ರದೇಶ ಸರಕಾರ ಉತ್ತರ ನೀಡಿಲ್ಲ. ಇದೇ ವೇಳೆ ಅಲ್ಪಸಂಖ್ಯಾತ ಆಯೋಗವನ್ನು ಮರುರೂಪಿಸುವ ಅಥವಾ ಅದನ್ನು ಹೊಸದಾಗಿ ಕಟ್ಟುವ ಯಾವುದೇ ಉದ್ದೇಶವನ್ನು ಸರಕಾರ ಹೊಂದಿಲ್ಲ ಎಂದು ತಿಳಿದುಬಂದಿದೆ.
ಉತ್ತರ ಪ್ರದೇಶದ ಅಲ್ಪಸಂಖ್ಯಾತ ಆಯೋಗವನ್ನು ಮುಖ್ಯವಾಗಿ ಮುಸ್ಲಿಮರು ಕ್ರೈಸ್ತರು ಬೌದ್ದರು ಜೈನರು ಮತ್ತು ಪಾರ್ಸಿ ಸಮುದಾಯದ ರಕ್ಷಣೆಗಾಗಿ ರಚಿಸಲಾಗಿದೆ. ಅಲ್ಪಸಂಖ್ಯಾತ ಸಮುದಾಯಗಳ ಸಮಸ್ಯೆಗಳ ಬಗ್ಗೆ ಗಮನ ಸೆಳೆಯುವುದಕ್ಕೆ ಮತ್ತು ಸಮುದಾಯದ ಮೇಲಿನ ದೂರುಗಳ ಬಗ್ಗೆ ಗಮನಹರಿಸುವುದಕ್ಕೆ ಆಯೋಗವನ್ನ ರಚಿಸಲಾಗಿದೆ. ಅಗತ್ಯಬಿದ್ದರೆ ಅಧಿಕಾರಿಗಳಿಗೆ ನೋಟಿಸ್ ಕಳುಹಿಸುವುದು ಮತ್ತು ತನ್ನ ಮುಂದೆ ಹಾಜರಾಗುವಂತೆ ಸೂಚಿಸಿ ವಿಚಾರಿಸುವ ಹಕ್ಕು ಆಯೋಗಕ್ಕೆ ಇದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj