ವೀಲ್ ಚೇರ್ ಇಲ್ಲದ್ದಕ್ಕೆ ಗಾಯಗೊಂಡ ಮಗನನ್ನು ಇ-ಸ್ಕೂಟರ್ ನಲ್ಲಿ ಆಸ್ಪತ್ರೆಯ 3ನೇ ಮಹಡಿಗೆ ಕರೆದೊಯ್ದ ತಂದೆ..!
ಕಾಲು ಮುರಿತಕ್ಕೊಳಗಾಗಿದ್ದ ತನ್ನ 15 ವರ್ಷದ ಮಗನಿಗೆ ಚಿಕಿತ್ಸೆ ಕೊಡಿಸಲು ತಂದೆಯೋರ್ವ ಆಸ್ಪತ್ರೆಯ ನೆಲ ಮಹಡಿಯಿಂದ ಮೂರನೇ ಮಹಡಿಗೆ ಸಾಗಿಸಲು ಸ್ಕೂಟರ್ ಬಳಸಬೇಕಾದ ಘಟನೆ ರಾಜಸ್ಥಾನದ ಕೋಟಾದ ಅತಿದೊಡ್ಡ ಆಸ್ಪತ್ರೆಯಾದ ಎಂಬಿಎಸ್ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ.
ತನ್ನ ಮಗನ ಮುರಿದ ಕಾಲಿಗೆ ಪ್ಲಾಸ್ಟರ್ ಮಾಡಲು ತನ್ನ ಮಗನನ್ನು ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದೆ ಎಂದು ಬಾಲಕನ ತಂದೆ ಮನೋಜ್ ಜೈನ್ ಹೇಳಿಕೊಂಡಿದ್ದಾರೆ.
ಮನೋಜ್ ಜೈನ್ ಅವರು ಆಸ್ಪತ್ರೆಗೆ ಬಂದಾಗ ಆಸ್ಪತ್ರೆ ಸಿಬ್ಬಂದಿ ಮುಕೇಶ್ ಮತ್ತು ಸುಖಲಾಲ್ ಎಂಬುವವರಲ್ಲಿ ಗಾಲಿಕುರ್ಚಿ ಕೇಳಿದರು. ಆದರೆ ಅವರು ಇಲ್ಲಿ ಗಾಲಿಕುರ್ಚಿ ಇಲ್ಲ ಎಂದು ಹೇಳಿದರು. ಹೀಗಾಗಿ ಇವರ ಬಳಿ ಅನುಮತಿ ಕೇಳಿ ತಮ್ಮ ಸ್ಕೂಟರ್ ಅನ್ನು ವಾರ್ಡ್ ಗೆ ಸಾಗಿಸಿದೆ ಎಂದು ಅವರು ಹೇಳಿದ್ದಾರೆ.
ಇದೇ ವೇಳೆ ವಾರ್ಡ್ ಉಸ್ತುವಾರಿ ದೇವಕಿ ನಂದನ್ ಎಂಬುವವರು ತಂದೆ ಮತ್ತು ಮಗನನ್ನು ತಡೆದು ಸ್ಕೂಟರ್ ನ ಕೀಲಿಯನ್ನು ತೆಗೆದುಕೊಂಡಿದ್ದಾರೆ. ಇದೇ ವೇಳೆ ಬಾಲಕನ ತಂದೆ ಆಸ್ಪತ್ರೆಯ ದುರಾಡಳಿತ ಮತ್ತು ಗಾಲಿಕುರ್ಚಿಗಳ ಕೊರತೆಯನ್ನು ಟೀಕಿಸಿದ್ದಾರೆ.
ಪೊಲೀಸರ ಪ್ರಕಾರ, ಎರಡೂ ಕಡೆಯವರು ದೂರು ದಾಖಲಿಸದಿರಲು ನಿರ್ಧರಿಸಿದ ನಂತರ ಸಂಘರ್ಷವನ್ನು ಮಾತುಕತೆಯ ಮೂಲಕ ಪರಿಹರಿಸಲಾಯಿತು.
ಮಧ್ಯಾಹ್ನ ಈ ಘಟನೆ ನಡೆದಿದ್ದು, ಕಪ್ಪು ಕೋಟು ಧರಿಸಿದ್ದ ಜೈನ್, ತನ್ನ ಮಗನನ್ನು ಹಿಂಭಾಗದಲ್ಲಿ ಕೂರಿಸಿಕೊಂಡು ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಎಲಿವೇಟರ್ ಕಡೆಗೆ ಓಡಿಸಿದರು ಎಂದು ಪ್ರತ್ಯಕ್ಷದರ್ಶಿಗಳು ಹೇಳುತ್ತಾರೆ.
ಮೂರನೇ ಮಹಡಿಯಲ್ಲಿರುವ ಲಿಫ್ಟ್ ನಿಂದ ಹೊರಬಂದ ನಂತರ ರೋಗಿಗಳು, ಸಂದರ್ಶಕರು, ಆಸ್ಪತ್ರೆಯ ಸಿಬ್ಬಂದಿ ಮತ್ತು ವೈದ್ಯರನ್ನು ಗೊಂದಲಕ್ಕೀಡು ಮಾಡಿ ಅವರು ವಾರ್ಡ್ ಸುತ್ತಲೂ ಸವಾರಿ ಮಾಡಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw