ಅತ್ಯುನ್ನತ ಗೌರವ: 2023ನೇ ಸಾಲಿನ ನೊಬೆಲ್ ಶಾಂತಿ ಪ್ರಶಸ್ತಿಗೆ ಇರಾನ್ ಮಾನವ ಹಕ್ಕುಗಳ ಹೋರಾಟಗಾರ್ತಿ ನರ್ಗೀಸ್ ಮೊಹಮ್ಮದಿ ಆಯ್ಕೆ - Mahanayaka
1:23 AM Wednesday 5 - February 2025

ಅತ್ಯುನ್ನತ ಗೌರವ: 2023ನೇ ಸಾಲಿನ ನೊಬೆಲ್ ಶಾಂತಿ ಪ್ರಶಸ್ತಿಗೆ ಇರಾನ್ ಮಾನವ ಹಕ್ಕುಗಳ ಹೋರಾಟಗಾರ್ತಿ ನರ್ಗೀಸ್ ಮೊಹಮ್ಮದಿ ಆಯ್ಕೆ

06/10/2023

ಇರಾನ್ ನಲ್ಲಿ ಮಹಿಳೆಯರ ಮೇಲಿನ ದಬ್ಬಾಳಿಕೆಯ ವಿರುದ್ಧದ ಹೋರಾಟ ಮತ್ತು ಮಾನವ ಹಕ್ಕುಗಳು ಮತ್ತು ಎಲ್ಲರಿಗೂ ಸ್ವಾತಂತ್ರ್ಯವನ್ನು ಉತ್ತೇಜಿಸುವ ಹೋರಾಟಕ್ಕಾಗಿ ನರ್ಗೀಸ್ ಮೊಹಮ್ಮದಿ ಅವರಿಗೆ 2023 ರ ಶಾಂತಿ ನೊಬೆಲ್ ಪ್ರಶಸ್ತಿಯನ್ನು ನೀಡಲಾಗಿದೆ.

ನರ್ಗೀಸ್ ಮೊಹಮದಿಯನ್ನು ಇರಾನಿನ ಆಡಳಿತವು 13 ಬಾರಿ ಬಂಧಿಸಿತ್ತು. ಅದರಲ್ಲಿ ಐದು ಬಾರಿ ಶಿಕ್ಷೆ ವಿಧಿಸಲಾಗಿದೆ. ಒಟ್ಟು 31 ವರ್ಷಗಳ ಜೈಲು ಶಿಕ್ಷೆ ಮತ್ತು 154 ಛಡಿ ಏಟುಗಳನ್ನು ವಿಧಿಸಲಾಯಿತು. ಈಗಲೂ ಇವರು ಜೈಲಿನಲ್ಲಿದ್ದಾರೆ.

ಜಾಮೀನಿನ ಮೇಲೆ ಬಿಡುಗಡೆಯಾದ ನಂತರ ನರ್ಗೀಸ್ ಅವರು ಮರಣದಂಡನೆ ವಿರುದ್ಧದ ಅಭಿಯಾನದಲ್ಲಿ ತೊಡಗಿಸಿಕೊಂಡಿದ್ದರು. ಮರಣದಂಡನೆಯ ವಿರುದ್ಧದ ಅವರ ಹೋರಾಟವು 2015 ರಲ್ಲಿ ಅವರನ್ನು ಮತ್ತೆ ಬಂಧಿಸಲು ಕಾರಣವಾಯಿತು.

ಇತ್ತೀಚಿನ ಸುದ್ದಿ