ಇಸ್ರೇಲಿನ ಟೆಲಿಕಾಂ ಕಂಪನಿ ಬೆಸೆಕ್ ನೊಂದಿಗಿನ ಎಲ್ಲಾ ಸಂಬಂಧವನ್ನು ಮುರಿದುಕೊಂಡ ನಾರ್ವೆ
ಇಸ್ರೇಲಿನ ಟೆಲಿಕಾಂ ಕಂಪನಿ ಆಗಿರುವ ಬೆಸೆಕ್ ನೊಂದಿಗಿನ ಎಲ್ಲಾ ಸಂಬಂಧವನ್ನು ನಾಾರ್ವೆ ಕಡಿದುಕೊಂಡಿದೆ. ಈ ಕಂಪನಿಯಲ್ಲಿ ಮಾಡಲಾದ ಹೂಡಿಕೆಯನ್ನು ಸಂಪೂರ್ಣವಾಗಿ ಹಿಂತೆಗೆದು ಕೊಳ್ಳಲಾಗಿದೆ ಎಂದು ನಾರ್ವೆಯ ಸೊವರಿನ್ ವೆಲ್ತ್ ಫಂಡ್ ತಿಳಿಸಿದೆ. ಫೆಲೆ ಸ್ತೀನ್ ನ ಪಶ್ಚಿಮ ದಂಡೆಯಲ್ಲಿ ಇಸ್ರೇಲ್ ಸರಕಾರ ಅನಧಿಕೃತವಾಗಿ ಯಹೂದಿಯರನ್ನು ನೆಲೆಗೊಳಿಸುತ್ತಿರುವುದಕ್ಕೆ ಈ ಕಂಪನಿ ನೆರವು ನೀಡುತ್ತಿರುವುದೇ ನಾರ್ವೆಯ ಈ ನಿರ್ಧಾರಕ್ಕೆ ಕಾರಣವಾಗಿದೆ.
ಬೆಸಕ್ ಎಂಬುದು ಇಸ್ರೇಲಿನ ದೈತ್ಯ ಟೆಲಿಕಾಂ ಕಂಪನಿಯಾಗಿದೆ. ಪಶ್ಚಿಮದಂಡೆಯಲ್ಲಿ ಇಸ್ರೇಲ್ ನ ಅಕ್ರಮ ಯೋಜನೆಗಳಿಗೆ ಈ ಕಂಪನಿ ನೆರವಾಗುತ್ತಿದೆ ಎಂದು ಹೇಳಲಾಗುತ್ತಿದೆ. ಮಾತ್ರ ಅಲ್ಲ ಈ ವಸತಿಗಳಿಗೆ ಟೆಲಿಕಾಂ ಸರ್ವಿಸ್ ಅನ್ನು ಕೂಡ ನೀಡುತ್ತಿದೆ. ಇದು ಅಂತಾರಾಷ್ಟ್ರೀಯ ನಿಯಮಗಳಿಗೂ ವಿರುದ್ಧವಾಗಿದೆ ಎಂದು ನಾಾರ್ವೆ ಹೇಳಿದೆ. ಇದೇ ವೇಳೆ ಪಶ್ಚಿಮ ದಂಡೆಯ ಫೆಲೆಸ್ತೀನ್ ಪ್ರದೇಶಗಳಿಗೂ ಸೇವೆಯನ್ನು ಒದಗಿಸುತ್ತಿರುವುದಾಗಿ ಕಂಪನಿ ಸಮರ್ಥಿಸಿಕೊಂಡಿದೆ. ಆದರೆ ಇದು ಅಕ್ರಮ ನಿವಾಸಗಳಿಗೆ ಸೇವೆ ಒದಗಿಸುತ್ತಿರುವುದಕ್ಕೆ ಸಮರ್ಥನೆಯಾಗದು ಎಂದು ನಾರ್ವೇ ಹೇಳಿದೆ.
ಈ ಕಂಪನಿಯಲ್ಲಿ ನಾರ್ವೆ ಸುಮಾರು 200 ಕೋಟಿ ರೂಪಾಯಿಯನ್ನು ಹೂಡಿಕೆ ಮಾಡಿತ್ತು. ಇದೀಗ ಈ ಎಲ್ಲಾ ಹಣವನ್ನು ಹಿಂಪಡೆಯಲು ನಾರ್ವೆ ನಿರ್ಧರಿಸಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj