ಕೊರೊನ ಲಸಿಕೆ ಮರಣ ಲಸಿಕೆಯಾಯ್ತು! | ಲಸಿಕೆ ಪಡೆದು ಕೆಲವೇ ಗಂಟೆಗಳಲ್ಲಿ 23 ವೃದ್ಧರು ಸಾವು

17/01/2021

ಓಸ್ಲೋ: ವಿಶ್ವದ್ಯಂತ ಕೊರೊನಾ ಲಸಿಕೆ ವಿತರಣೆ ಆರಂಭವಾಗಿದೆ. ನಾರ್ವೆಯಲ್ಲಿ ಪೈಜರ್ ಸಂಸ್ಥೆಯ ಕೊರೊನಾ ಲಸಿಕೆ ವಿತರಣೆ ಮಾಡಲಾಗಿದೆ. ಲಸಿಕೆ ಪಡೆದು ಕೆಲವೇ ಗಂಟೆಗಳಲ್ಲಿ 23 ವೃದ್ಧರು ಸಾವನ್ನಪ್ಪಿದ್ದಾರೆ.

ಪೈಜರ್ ಲಸಿಕೆಯನ್ನು 30 ಸಾವಿರ ಜನರಿಗೆ ನೀಡಲಾಗಿದೆ.  ಅದರಲ್ಲಿ 80 ವರ್ಷ ಮೇಲ್ಪಟ್ಟವರೂ ಇದ್ದಾರೆ. ಈ ವೃದ್ಧರ ಪೈಕಿ 23 ಜನರು ಸಾವನ್ನಪ್ಪಿದ್ದಾರೆ. ಇವರ ಸಾವಿಗೆ ಕೊರೊನಾ ಲಸಿಕೆಯೇ ಕಾರಣವೇ ಎನ್ನುವುದು ಇನ್ನೂ ದೃಢವಾಗಿಲ್ಲ ಎಂದು ಹೇಳಲಾಗಿದೆ.

ಮೃತರ ಪೈಕಿ 13 ವೃದ್ಧರು ಲಸಿಕೆ ಪಡೆದು ಸ್ವಲ್ಪ ಸಮಯದಲ್ಲಿಯೇ ವಾಂತಿ, ಜ್ವರ, ಅಲರ್ಜಿಯ ಸಮಸ್ಯೆಗೊಳಗಾಗಿದ್ದಾರೆ. ಸದ್ಯ ಲಸಿಕೆ ಪಡೆದವರಲ್ಲಿ ಅನೇಕರು ಇಂತಹ ತೊಂದರೆಗೀಡಾಗಿದ್ದಾರೆ ಎಂದು ಹೇಳಲಾಗಿದೆ.

ಲಸಿಕೆ ಪಡೆದ ಪಡೆದವರಲ್ಲಿ 21 ಮಹಿಳೆಯರು ಮತ್ತು 8 ಪುರುಷರಲ್ಲಿ ಅಡ್ಡ ಪರಿಣಾಮಗಳು ಕಂಡು ಬಂದಿದೆ. 23 ಜನರು ಸಾವನ್ನಪ್ಪಿರುವುದಲ್ಲದೇ, 9 ಜನರು ಗಂಭೀರ ಪರಿಸ್ಥಿತಿಯಲ್ಲಿದ್ದಾರೆ.

ಇತ್ತೀಚಿನ ಸುದ್ದಿ

Exit mobile version