ನೋಟು ಬ್ಯಾನ್ ವೈಫಲ್ಯಕ್ಕೆ ಯಾರು ಕ್ಷಮೆ ಕೇಳಬೇಕು?: ಕಪಿಲ್ ಸಿಬಲ್ ಪ್ರಶ್ನೆ
ನವದೆಹಲಿ: ನೋಟು ರದ್ದತಿಯಿಂದ ಕೇಂದ್ರ ಸರ್ಕಾರಕ್ಕೆ ಯಾವುದೇ ಉದ್ದೇಶವನ್ನು ಸಾಧಿಸಲು ಸಾಧ್ಯವಾಗಿಲ್ಲ. ಇದರ ವೈಫಲ್ಯಕ್ಕೆ ಯಾರು ಕ್ಷಮೆ ಕೇಳಬೇಕು? ಎಂದು ರಾಜ್ಯಸಭಾ ಸದಸ್ಯ ಮತ್ತು ಮಾಜಿ ಕಾನೂನು ಸಚಿವ ಕಪಿಲ್ ಸಿಬಲ್ ಪ್ರಶ್ನಿಸಿದ್ದಾರೆ.
500 ಮತ್ತು 1,000 ಮುಖಬೆಲೆಯ ನೋಟುಗಳನ್ನು ರದ್ದುಗೊಳಿಸಿದ ಕೇಂದ್ರ ಸರ್ಕಾರದ 2016ರ ನವೆಂಬರ್ 8ರ ಅಧಿಸೂಚನೆಯ ಸಿಂಧುತ್ವವನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದ ಬೆನ್ನಲ್ಲೇ ಕಪಿಲ್ ಸಿಬಲ್ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ನೋಟು ರದ್ದತಿ. ಇದನ್ನು ಸುಪ್ರೀಂ ಕೋರ್ಟ್ನ ಬಹುಮತದ ತೀರ್ಪು ಎತ್ತಿ ಹಿಡಿದಿದೆ. ನೋಟು ರದ್ದತಿಯ ಮೂಲ ಉದ್ದೇಶಗಳು: ಕಪ್ಪುಹಣದ ನಿಗ್ರಹ, ತೆರಿಗೆ ವಂಚಕರ ನಿಗ್ರಹ, ನಕಲಿ ನೋಟುಗಳ ನಿಗ್ರಹ, ಭಯೋತ್ಪಾದನೆ ನಿಗ್ರಹ, ಭ್ರಷ್ಟಾಚಾರ ಸಮಸ್ಯೆಗಳ ನಿರ್ಮೂಲನೆ. ಎಲ್ಲವೂ ವೈಫಲ್ಯಗೊಂಡಿವೆ. ಈ ವೈಫಲ್ಯಕ್ಕೆ ಯಾರು ಕ್ಷಮೆ ಕೇಳಬೇಕು?’ ಎಂದು ಕಪಿಲ್ ಸಿಬಲ್ ಟ್ವೀಟ್ ಮೂಲಕ ಪ್ರಶ್ನಿಸಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/HeAiP3WAQfT6ajtrJVJ4kP
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka