ತನ್ನದೇ ಸಂಸ್ಥೆಯ ನೌಕರರ ಆಕ್ರೋಶಕ್ಕೆ ಬಲಿಯಾದ ಸಾರಿಗೆ ನೌಕರ! - Mahanayaka

ತನ್ನದೇ ಸಂಸ್ಥೆಯ ನೌಕರರ ಆಕ್ರೋಶಕ್ಕೆ ಬಲಿಯಾದ ಸಾರಿಗೆ ನೌಕರ!

ksrtc
16/04/2021

ಬಾಗಲಕೋಟೆ: ಒಂದೆಡೆ ಸರ್ಕಾರದ ನಿರ್ಲಕ್ಷ್ಯ ಇನ್ನೊಂದೆಡೆ ಸಾರಿಗೆ ನೌಕರರ ಹೋರಾಟದ ಗಂಭೀರತೆಯನ್ನು ಅರ್ಥೈಸಿಕೊಳ್ಳದ ನೌಕರರು ಸಾರಿಗೆ ನೌಕರರ ಕೆಂಗಣ್ಣಿಗೆ ಗುರಿಯಾಗಿದ್ದು, ತನ್ನದೇ ಸಂಸ್ಥೆಯ ನೌಕರರ ಆಕ್ರೋಶಕ್ಕೆ ಸಾರಿಗೆ ನೌಕರರೋರ್ವರು ಸಾವಿಗೀಡಾಗಿದ್ದಾರೆ.

ಸಾರಿಗೆ ನೌಕರರ ಮುಷ್ಕರದ ನಡುವೆಯೇ ಕರ್ತವ್ಯಕ್ಕೆ ಹಾಜರಾಗಿದ್ದ ಜಮಖಂಡಿ ಸಾರಿಗೆ ಘಟಕದ ಬಸ್ ಚಾಲಕ 55 ವರ್ಷ ವಯಸ್ಸಿನ ಎನ್.ಕೆ.ಅವಟಿ ಚಲಾಯಿಸುತ್ತಿದ್ದ ಬಸ್ ಗೆ ಪ್ರತಿಭಟನಾ ನಿರತ ಸಾರಿಗೆ ನೌಕರರು ಕಲ್ಲೆಸೆದಿದ್ದು, ಪರಿಣಾಮವಾಗಿ ಅವಟಿ ಅವರು ಗಾಯಗೊಂಡು ಸಾವನ್ನಪ್ಪಿದ್ದಾರೆ.

ಜಮಖಂಡಿ ನಗರಕ್ಕೆ ಬಸ್ ಚಲಾಯಿಸಿಕೊಂಡು ಬರುತ್ತಿದ್ದ ವೇಳೆ ಆಕ್ರೋಶಿತ ಸಾರಿಗೆ ನೌಕರರ ತಂಡವೊಂದು ಬಸ್ ಗೆ ಕಲ್ಲು ತೂರಾಟ ನಡೆಸಿದೆ. ಈ ವೇಳೆ  ಕಲ್ಲು ತಾಗಿ ಚಾಲಕ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದಾರೆ.

ಇತ್ತೀಚಿನ ಸುದ್ದಿ