ಎನ್ ಆರ್ ಐ ರೈಲ್ವೇ ಪ್ರಯಾಣಿಕರಿಂದ ಹಣ ವಸೂಲಿ: ವಸೂಲಿ ಮಾಡಿದವರಿಗೆ ಬಿತ್ತು ಏಟು!
ದೆಹಲಿಯ ಹಜರತ್ ನಿಜಾಮುದ್ದೀನ್ ರೈಲ್ವೆ ನಿಲ್ದಾಣದಲ್ಲಿ ಗಾಲಿಕುರ್ಚಿ ಸೇವೆಗಳಿಗಾಗಿ ಮತ್ತು ತನ್ನ ಸಾಮಾನುಗಳನ್ನು ಪ್ಲಾಟ್ ಫಾರ್ಮ್‌ಗೆ ಸಾಗಿಸಲು ಎನ್ಆರ್ ಐ ಪ್ರಯಾಣಿಕರಿಂದ 10,000 ರೂ.ಗಿಂತ ಹೆಚ್ಚಿನ ಮೊತ್ತವನ್ನು ವಿಧಿಸಿದ ಪೋರ್ಟ್ ನ ಪರವಾನಗಿಯನ್ನು ರದ್ದುಪಡಿಸಲಾಗಿದೆ. ಈ ಘಟನೆ ಬೆಳಕಿಗೆ ಬಂದ ನಂತರ, ರೈಲ್ವೆ ತನಿಖೆಯನ್ನು ಪ್ರಾರಂಭಿಸಿ ಅವರ ಪರವಾನಗಿಯನ್ನು ರದ್ದುಗೊಳಿಸಿತು. 90 ರಷ್ಟು ಮೊತ್ತವನ್ನು ಪ್ರಯಾಣಿಕರಿಗೆ ಹಿಂದಿರುಗಿಸುವಂತೆ ಪೋರ್ಟರ್ ಗೆ ತಿಳಿಸಲಾಯಿತು.
ಪೋರ್ಟರ್ ಬ್ಯಾಡ್ಜ್ ಅನ್ನು ದೆಹಲಿ ವಿಭಾಗ ಹಿಂತೆಗೆದುಕೊಂಡಿದೆ ಎಂದು ಉತ್ತರ ರೈಲ್ವೆ ತಿಳಿಸಿದೆ. ಪ್ರಯಾಣಿಕರ ಹಿತಾಸಕ್ತಿಗಳನ್ನು ಅತ್ಯುನ್ನತವೆಂದು ಪರಿಗಣಿಸಿದೆ ಎಂದು ರೈಲ್ವೆ ಹೇಳಿದೆ.
ರೈಲ್ವೇ ನಿಲ್ದಾಣಗಳಲ್ಲಿ ಗಾಲಿಕುರ್ಚಿ ಸಹಾಯ ಸೇವೆ ಉಚಿತ ಎಂದು ತಿಳಿದ ನಂತರ ಎನ್ಆರ್ ಐ ಪ್ರಯಾಣಿಕರ ಮಗಳು ಪಾಯಲ್ ರೈಲ್ವೆಗೆ ದೂರು ದಾಖಲಿಸಿದ್ದಾರೆ. ಡಿಸೆಂಬರ್ 28ರಂದು ಈ ಘಟನೆ ನಡೆದಿತ್ತು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj