NTPC ಲಿಮಿಟೆಡ್ ನಲ್ಲಿ ಎಕ್ಸಿಕ್ಯೂಟಿವ್ ಹುದ್ದೆಗಳ ನೇಮಕಾತಿ : 80 ಖಾಲಿ ಹುದ್ದೆಗಳು | ಬೇಗ ಅರ್ಜಿ ಸಲ್ಲಿಸಿ - Mahanayaka

NTPC ಲಿಮಿಟೆಡ್ ನಲ್ಲಿ ಎಕ್ಸಿಕ್ಯೂಟಿವ್ ಹುದ್ದೆಗಳ ನೇಮಕಾತಿ : 80 ಖಾಲಿ ಹುದ್ದೆಗಳು | ಬೇಗ ಅರ್ಜಿ ಸಲ್ಲಿಸಿ

ntpc
20/03/2025


Provided by

ನ್ಯಾಷನಲ್ ಥರ್ಮಲ್ ಪವರ್ ಕಾರ್ಪೋರೇಶನ್ ಲಿಮಿಟೆಡ್ ನಲ್ಲಿ ವಿವಿಧ ವಿಭಾಗಗಳ 80 ಎಕ್ಸಿಕ್ಯೂಟಿವ್ ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಲು ಅಧಿಸೂಚನೆ ಹೊರಡಿಸಿದ್ದಾರೆ.


Provided by

NTPC ಎಂಬುದು ಭಾರತದ ಅತಿ ದೊಡ್ಡ ಸಮಗ್ರ ವಿದ್ಯುತ್ ಕಂಪನಿಯಾಗಿದ್ದು ಭಾರತ ದೇಶದ ಆರ್ಥಿಕ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಇಂತಹ ಒಂದು ದೇಶದ ಪ್ರತಿಷ್ಠಿತ ಕಂಪನಿಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದ್ದು ಈ ನೇಮಕಾತಿಯ ಸಂಪೂರ್ಣ ವಿವರವನ್ನು ಇಲ್ಲಿ ತಿಳಿಸಲಾಗಿದೆ.

ಎಕ್ಸಿಕ್ಯೂಟಿವ್ ಹುದ್ದೆಗಳ ನೇಮಕಾತಿ ವಿವರ :


Provided by

ಒಟ್ಟು 80 ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಅವುಗಳಲ್ಲಿ ವಿಭಾಗವಾರು ಹುದ್ದೆಗಳ ವಿಂಗಡಣೆ ಈ ಕೆಳಗಿನಂತಿದೆ.
* Finance CA/CMA – Intern – 50 ಹುದ್ದೆಗಳು
* Finance CA/CMA – B – 20 ಹುದ್ದೆಗಳು
* Finance CA/CMA – A – 10 ಹುದ್ದೆಗಳು

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳೇನು?

* Finance CA/CMA – Intern ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಂಗೀಕೃತ ವಿಶ್ವವಿದ್ಯಾಲಯದಿಂದ ಪದವಿ ಮುಗಿಸಿದ್ದು CA/CMA ಇಂಟರ್ ಮಿಡಿಯೇಟ್ ಆಗಿರಬೇಕು.
* Finance CA/CMA – B ಹಾಗೂ Finance CA/CMA – A ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಂಗೀಕೃತ ವಿಶ್ವವಿದ್ಯಾಲಯದಿಂದ ಪದವಿ ಮುಗಿಸಿದ್ದು CA/CMA ಫುಲ್ಲಿ ಕ್ವಾಲಿಫೈಡ್ ಆಗಿರಬೇಕು.

ಗರಿಷ್ಠ ವಯೋಮಿತಿ ಅರ್ಹತೆ :

* Finance CA/CMA – Intern – 30 ವರ್ಷ
* Finance CA/CMA – B – 35 ವರ್ಷ
* Finance CA/CMA – A – 40 ವರ್ಷ

ಆಯ್ಕೆಯಾದ ಬಳಿಕ ಸಿಗುವ ಮಾಸಿಕ ವೇತನ :

* ಇಂಟರ್ನ್ ಹುದ್ದೆಗಳಿಗೆ 71,000ರೂ.
* ‘ಬಿ’ ವಿಭಾಗದ ಹುದ್ದೆಗಳಿಗೆ 90,000ರೂ.
* ‘ಎ’ ವಿಭಾಗದ ಹುದ್ದೆಗಳಿಗೆ 1,25,000ರೂ.

ಇಷ್ಟೇ ಅಲ್ಲದೆ, ಆಯ್ಕೆ ಆಗುವಂತಹ ಅಭ್ಯರ್ಥಿಗಳ ಅವಲಂಬಿತ ಹೆಂಡತಿ, ಮಕ್ಕಳು ಹಾಗೂ ತಂದೆ ತಾಯಿಯರಿಗೆ ವೈದ್ಯಕೀಯ ಸೌಲಭ್ಯ ಸೇರಿದಂತೆ ಹಲವು ಸೌಲಭ್ಯಗಳನ್ನು ಒದಗಿಸಲಾಗುತ್ತದೆ.

ಅರ್ಜಿ ಸಲ್ಲಿಸಲು ಆರಂಭ ಮತ್ತು ಕೊನೆಯ ದಿನಾಂಕಗಳ ವಿವರ :

* ಅರ್ಜಿ ಸಲ್ಲಿಕೆಯು ಆರಂಭವಾದ ದಿನಾಂಕ – 05 ಮಾರ್ಚ್ 2025
* ಅರ್ಜಿ ಸಲ್ಲಿಕೆಯ ಮುಕ್ತಾಯಗೊಳ್ಳುವ ದಿನಾಂಕ – 19 ಮಾರ್ಚ್ 2025

ಅರ್ಜಿ ಸಲ್ಲಿಸಲು ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ- https://ntpc.co.in/


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/HEkqDgrW2BlJLad5kZ1DX7

ಇತ್ತೀಚಿನ ಸುದ್ದಿ