ನ್ಯೂಡಲ್ಸ್ ತಯಾರಿಕಾ ಘಟಕದ ಬಾಯ್ಲರ್ ಸ್ಫೋಟ: 6 ಕಾರ್ಮಿಕರು ಸಾವು: 5 ಕಿ.ಮೀ.ವರೆಗೆ ಕೇಳಿತು ಸ್ಟೋಟದ ಶಬ್ಧ! - Mahanayaka
4:05 AM Wednesday 11 - December 2024

ನ್ಯೂಡಲ್ಸ್ ತಯಾರಿಕಾ ಘಟಕದ ಬಾಯ್ಲರ್ ಸ್ಫೋಟ: 6 ಕಾರ್ಮಿಕರು ಸಾವು: 5 ಕಿ.ಮೀ.ವರೆಗೆ ಕೇಳಿತು ಸ್ಟೋಟದ ಶಬ್ಧ!

boiler explosion
26/12/2021

ಬಿಹಾರ: ಬಿಹಾರದ ಮುಜಾಫರ್ ಪುರ ನ್ಯೂಡಲ್ಸ್ ತಯಾರಿಕಾ ಕಂಪೆನಿಯಲ್ಲಿ ಬಾಯ್ಲರ್ ಸ್ಫೋಟಗೊಂಡು 6 ಮಂದಿ ಕಾರ್ಮಿಕರು ಸಾವನ್ನಪ್ಪಿದ ಘಟನೆ ನಡೆದಿದ್ದು, 12ಕ್ಕೂ ಅಧಿಕ ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಸ್ಫೋಟದ ಶಬ್ದ ಸುಮಾರು 5 ಕಿ.ಮೀ. ದೂರದ ವರೆಗೆ ಕೇಳಿದೆ ಎಂದು ಸ್ಥಳೀಯರು ಹೇಳಿದ್ದಾರೆ. ಸ್ಫೋಟದ ತೀವ್ರತೆಗೆ ಸಮೀಪ ಇದ್ದ ಕೆಲವು ಕಟ್ಟಡಗಳು ಕೂಡ  ಕುಸಿದು ಬಿದ್ದಿದೆ ಎನ್ನಲಾಗಿದೆ. ಇನ್ನೂ ಸ್ಫೋಟಕ್ಕೆ ನಿಖರ ಕಾರಣಗಳು ತಿಳಿದು ಬಂದಿಲ್ಲ. ಆದರೆ, ಸ್ಫೋಟದ ಪರಿಣಾಮ ಸಾವಿನ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ.

5 ಅಗ್ನಿಶಾಮಕ ದಳಗಳು ಕಾರ್ಯಾಚರಣೆಗಿಳಿದರೂ ಸ್ಫೋಟಗೊಂಡು, ಧ್ವಂಸವಾದ ಬಾಯ್ಲರ್​​ ನಿಂದ ಇನ್ನೂ ಹೊಗೆ ಬರುತ್ತಿದೆ ಎಂದು ಹೇಳಲಾಗುತ್ತಿದೆ. ಈ ಮಧ್ಯೆ ಬಿಹಾರ ಮುಖ್ಯಮಂತ್ರಿ ಘಟನೆ ಬಗ್ಗೆ ಸಂಪೂರ್ಣ ವಿವರ ತರಿಸಿಕೊಂಡಿದ್ದಾರೆ. ಹಾಗೇ, ಮೃತರ ಕುಟುಂಬಕ್ಕೆ ತಲಾ 4 ಲಕ್ಷ ರೂಪಾಯಿ ಪರಿಹಾರವನ್ನೂ ಘೋಷಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DbJM9kayC1K4utc3ntXPdh

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಕೇರಳದಲ್ಲಿ ಪೊಲೀಸರ ಮೇಲೆ ವಲಸೆ ಕಾರ್ಮಿಕರ ದಾಳಿ: ಪೊಲೀಸ್ ಜೀಪ್ ಅಗ್ನಿಗಾಹುತಿ

ಬಾಲಿವುಡ್ ನ ಖ್ಯಾತ ನಟ ಸಲ್ಮಾನ್ ಖಾನ್ ಗೆ ಕಚ್ಚಿದ ಹಾವು!

ಅತಿಥಿ ಉಪನ್ಯಾಸಕರೊಂದಿಗೆ ವಿದ್ಯಾರ್ಥಿಗಳು: ಹೋರಾಟಕ್ಕೆ ಕ್ಯಾಂಪಸ್ ಫ್ರಂಟ್ ತೀರ್ಮಾನ

ಮುಸ್ಲಿಮರನ್ನು, ಕ್ರೈಸ್ತರನ್ನು ಘರ್ ವಾಪಸಿ ಮಾಡದೇ ಬೇರೆ ದಾರಿಯಿಲ್ಲ | ಸಂಸದ ತೇಜಸ್ವಿ ಸೂರ್ಯ

ಸಿದ್ದರಾಮಯ್ಯ ಅಧಿಕಾರವಧಿಯಲ್ಲಿಯೇ ಮತಾಂತರ ನಿಷೇಧ ಕಾಯ್ದೆ ಕರಡು ಸಿದ್ಧವಾಗಿತ್ತೇ? | ಸಿದ್ದರಾಮಯ್ಯ ನೀಡಿದ ಸ್ಪಷ್ಟನೆ ಏನು?

ಬಿಜೆಪಿಯವರು ಸಂಖ್ಯಾಬಲ ಇದ್ದರೆ ಏನು ಬೇಕಾದರೂ ಮಾಡಬಹುದು ಅಂದುಕೊಂಡಿದ್ದಾರೆ: ಡಿ.ಕೆ.ಶಿವಕುಮಾರ್

ಇತ್ತೀಚಿನ ಸುದ್ದಿ